ಕರ್ಕ ರಾಶಿಗೆ ಸೂರ್ಯ ಸಂಚಾರ: ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ..!!

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯನು ನಮ್ಮ ಸೌರಮಂಡಲದ ಕೇಂದ್ರಬಿಂದು. ಸೂರ್ಯ ತನ್ನ ಸ್ಥಾನ ಬದಲಾಯಿಸುವುದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಹೀಗಾಗಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಣಿಸಲಾಗುತ್ತದೆ.

ಸೂರ್ಯನನ್ನು ಆತ್ಮ, ಗೌರವ, ಧೈರ್ಯ ಮತ್ತು ಪಿತೃತ್ವದ ಅಂಶವೆಂದು ಪರಿಗಣಿಸಲಾಗುತ್ತದೆ. ಜುಲೈನಲ್ಲಿ ಸೂರ್ಯನು ಮಿಥುನ ರಾಶಿಯಿಂದ ಹೊರಬಂದು ಕರ್ಕ ರಾಶಿಗೆ ಚಲಿಸಿದ್ದಾನೆ. ಜುಲೈ 16ರಂದು ಸೂರ್ಯ ಕರ್ಕ ರಾಶಿಗೆ ಚಲಿಸಿದ್ದಾನೆ. 9 ಗ್ರಹಗಳ ಜೊತೆಗೆ ಸೂರ್ಯನನ್ನು ಪರಿಗಣಿಸಲಾಗಿಲ್ಲ ಬದಲಿಗೆ ಸೂರ್ಯನನ್ನು ಆತ್ಮವೆಂದು ಪರಿಗಣಿಸಲಾಗಿದೆ.

Sun Transits To Cancer Who Will Get Benefits From Sun

ಸೂರ್ಯನ ಈ ಬದಲಾವಣೆಯು ಹಲವು ರಾಶಿಯವರಿಗೆ ಅದೃಷ್ಟಗಳ ತರಲಿದೆ. ಹಾಗೆ ಸೂರ್ಯನಿಂದ ಹಲವು ರಾಶಿಗಳಿಗೆ ಲಾಭವಾಗಲಿದೆ. ಹಾಗಾದ್ರೆ ಯಾವ ರಾಶಿಯವರಿಗೆ ಸೂರ್ಯ ಸಂಚಾರದಿಂದ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕರ್ಕ ರಾಶಿ

ಸೂರ್ಯನು ಕರ್ಕ ರಾಶಿಯಲ್ಲಿ ಚಲಿಸುವುದರಿಂದ ಈ ಸಮಯದಲ್ಲಿ ಅವರು ತಮ್ಮ ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ ಮತ್ತು ನಿರ್ದಿಷ್ಟ ಪ್ರಮಾಣದ ಸಂಪತ್ತನ್ನು ಪಡೆಯಲಿದ್ದಾರೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ನಿರ್ಧಿಷ್ಟ ಪ್ರಮಾಣದ ಲಾಭ ನೋಡಬಹುದು. ನಿಮ್ಮ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ನೋಡಬಹುದು. ಸಮಾಜದಲ್ಲಿ ಖ್ಯಾತಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಬಹಳ ಸಮಯದ ಅನಾರೋಗ್ಯ ಸಮಸ್ಯೆ ಸುಧಾರಿಸಲಿದೆ.

ಸಿಂಹ ರಾಶಿ

ಸೂರ್ಯನು ಸಿಂಹ ರಾಶಿಯ 12ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನೀವು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಲಾಭಗಳ ನೋಡಬಹುದು, ಹಾಗೆ ನಿಮ್ಮ ಆರ್ಥಿಕ ವಿಚಾರಗಳು ಲಾಭದಾಯಕ ರೀತಿಯಲ್ಲಿ ನಿಮಗೆ ಶುಭ ತರಬಹುದು. ಮನೆಯಲ್ಲಿ ಬಹಳ ಸಮಯದಿಂದ ಎದುರಾಗಿದ್ದ ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಆರೋಗ್ಯ ಸಂಬಂಧವಾಗಿ ನಿಮ್ಮಲ್ಲಿ ಉತ್ತಮ ಫಲಿತಾಂಶ ನೋಡಬಹುದು. ಹೊಸ ಉದ್ಯೋಗ ಆರಂಭಿಸಲು ಇದು ಉತ್ತಮ ಸಮಯ ಆಗಿರಲಿದೆ.

ಕನ್ಯಾ ರಾಶಿ

ಸೂರ್ಯನು ಕನ್ಯಾ ರಾಶಿಯ 11ನೇ ಮನೆಯಲ್ಲಿ ಚಲಿಸಲಿದ್ದಾನೆ, ಇದು ಕನ್ಯಾ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳ ನೀಡುತ್ತದೆ. ಈ ಅವಧಿಯಲ್ಲಿ ಅವರು ಉತ್ತಮ ಆರ್ಥಿಕ ಪ್ರಯೋಜನಗಳ ಪಡಯಲಿದ್ದಾರೆ. ನಿಮ್ಮ ವ್ಯವಹಾರದಲ್ಲಿ ಹೊಸ ರೀತಿ ಪ್ರಯೋಜನಗಳ ಪಡೆಯಲಿದ್ದೀರಿ. ಆಸ್ತಿ, ಜಮೀನು ವಿಚಾರದಲ್ಲಿ ನಿಮಗೆ ಅನುಕೂಲಕರ ದಿನ ಇರಲಿದೆ. ವ್ಯಾಪಾರಿಗಳು ಎದುರಿಸಿದ್ದ ದೊಡ್ಡ ಸಮಸ್ಯೆಗಳ ನಿವಾರಿಸಲುವ ಸಮಯ ಇದು. ವಾಹನ ಸಂಬಂಧವಾಗಿ ನೀವು ಲಾಭ ಮಾಡಬಹುದು. ಗೃಹಿಣಿಯರು ತಾವು ಅಂದುಕೊಂಡ ಕೆಲಸದಲ್ಲಿ ಶುಭಫಲ ಅನುಭವಿಸಲಿದ್ದಾರೆ.

ತುಲಾ ರಾಶಿ

ಸೂರ್ಯನು ತುಲಾ ರಾಶಿಯ ಹತ್ತನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದ ನಿಮ್ಮಲ್ಲಿ ವೈಯಕ್ತಿಕ ಜೀವನದಲ್ಲಿ ಸುಖ ನೋಡುವ ದಿನಗಳಿವೆ. ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರೈಸುತ್ತೀರಿ. ನಿಮ್ಮ ಬಾಕಿ ಉಳಿದಿದ್ದ ಹಲವು ಕೆಲಸಗಳು ಈ ಸಮಯದಲ್ಲಿ ವೇಗ ಪಡೆದುಕೊಳ್ಳಲಿವೆ. ನೀವು ಹೊಸದಾಗಿ ಆಸ್ತಿ ಖರೀದಿ, ಮನೆ ನಿರ್ಮಾಣದಂತಹ ಕೆಲಸ ಮಾಡುತ್ತಿದ್ದರೆ ನಿಮಗೆ ಉತ್ತಮ ಸಮಯ ಆಗಿರಲಿದೆ. ಅವಿವಾಹಿತರಿಗೆ ಈ ಸಮಯದಲ್ಲಿ ಶುಭ ಸುದ್ದಿಗಳ ಕೇಳಬಹುದು. ನಿಮ್ಮ ಔದ್ಯೋಗಿಕ ವಿಚಾರಗಳು ನೀವು ಅಂದುಕೊಂಡಂತೆ ನೆರವೇರಲಿವೆ. ದಾಂಪತ್ಯ ವಿಚಾರವಾಗಿಯೂ ತುಲಾ ರಾಶಿಯವರಿಗೆ ಉತ್ತಮ ಸಮಯ, ಮಕ್ಕಳ ಕುರಿತಾಗಿದ್ದ ಸಮಸ್ಯೆಗಳು ದೂರಾಗುತ್ತವೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

Sun Transits To Cancer: Who Will Get Benefits From Sun

This change of the Sun will bring good luck to many zodiac signs. Similarly, many zodiac signs will benefit from the Sun. So, let's find out today which zodiac signs will benefit from the Sun's transit.
Story first published: Saturday, July 19, 2025, 13:20 [IST]
X
Desktop Bottom Promotion