ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಸಂಚಾರ: ಈ ರಾಶಿಯವರಲ್ಲಿ ಬೆಳಗಲಿದೆ ಅದೃಷ್ಟ..!

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಒಂಬತ್ತು ಗ್ರಹಗಳ ಅಧಿಪತಿ ಎಂದು, ಹಾಗೆ ಕೇಂದ್ರ ಬಿಂದು ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿ ಬದಲಾಯಿಸಬಹುದು. ಅವನು ಕಾಲಕಾಲಕ್ಕೆ ನಕ್ಷತ್ರವನ್ನೂ ಬದಲಾಯಿಸುತ್ತಾನೆ. ಸೂರ್ಯನ ಸ್ಥಾನ ಈ ರೀತಿ ಬದಲಾದಾಗ ಅದರ ಪ್ರಭಾವವೂ ಎಲ್ಲಾ ರಾಶಿಗಳ ಮೇಲೆಯೂ ಬೀಳುವುದು ನೋಡಬಹುದು.

ಸದ್ಯ ಸೂರ್ಯನು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಮೀನ ರಾಶಿಯಿಂದ ಏಪ್ರಿಲ್ 14ರಂದು ಮೇಷ ರಾಶಿಗೆ ಚಲಿಸಲಿದ್ದಾನೆ. ಈ ಸಮಯದಲ್ಲಿ ಆತ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಆತ ಅಶ್ವಿನಿ ನಕ್ಷತ್ರದಲ್ಲಿ ಚಲಿಸಲಿದ್ದಾನೆ. ಸೂರ್ಯ ಒಂದೇ ದಿನದಲ್ಲಿ ತನ್ನ ರಾಶಿಚಕ್ರ ಮತ್ತು ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಈ ವಿದ್ಯಮಾನ ಬಹಳ ಅಪರೂಪಕ್ಕೆ ನಡೆಯಲಿದೆ. ಹೀಗಾಗಿ ಈ ರೀತಿಯ ಚಲನೆಯು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು.

Sun Transits To Ashwini Nakshatra Will Leads To Lucky For These People

ಹಾಗೆ ಅಶ್ವಿನ ನಕ್ಷತ್ರದಲ್ಲಿ ಜನಿಸಿರುವವರು ಸೇರಿದಂತೆ ಹಲವರಿಗೆ ಇದು ಅದೃಷ್ಟಕರವಾಗುತ್ತಿದೆ. ಈ ಅಶ್ವಿನಿ ನಕ್ಷತ್ರದ ಅಧಿಪತಿ ಕೇತು ಆಗಿದೆ. ಈಗ ಕೇತು ಗ್ರಹವು ಮೇಷ ರಾಶಿಯಲ್ಲಿದೆ. ಹಾಗಾದ್ರೆ ಸೂರ್ಯನ ಈ ಚಲನೆಯೂ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಿಥುನ ರಾಶಿ

ಸೂರ್ಯನು ಅಶ್ವಿನಿ ನಕ್ಷತ್ರಕ್ಕೆ ಚಲಿಸುವುದರಿಂದ ಮಿಥುನ ರಾಶಿಯವರಲ್ಲಿ ಅನೇಕ ರೀತಿಯ ಧನಾತ್ಮಕ ಲಾಭಗಳ ನೋಡಬಹುದು. ಅವರ ವಿದೇಶಿ ಪ್ರವಾಸದ ಕನಸನ್ನು ನನಸಾಗಿಸಿಕೊಳ್ಳಬಹುದು. ಹಾಗೆ ನೀವು ಬಹಳ ಕಾಲದಿಂದ ಆದಾಯ ಪಡೆಯಲು ಪ್ರಯತ್ನಿಸಿದ್ದ ಕೆಲಸದಲ್ಲಿ ಲಾಭ ನೋಡಬಹುದು. ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಸಾಧಿಸಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಇದು ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆಗೆ ಕಾರಣವಾಗುತ್ತದೆ. ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಅನೇಕ ಉತ್ತಮ ಪ್ರಯೋಜನಗಳು ಸಿಗುತ್ತವೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕುಟುಂಬಸ್ಥರಿಂದ ನಿಮ್ಮ ಕೆಲಸಗಳಿಗೆ ಬೆಂಬಲ ಸಿಗಲಿದೆ. ನಿಮ್ಮ ಗುರಿಗಳ ಕಡೆಗೆ ಹೆಚ್ಚು ಗಮನವಿಡಿ.

ಸಿಂಹ ರಾಶಿ

ಸಿಂಹ ರಾಶಿಯವರು ಸೂರ್ಯನ ಅಶ್ವಿನ ನಕ್ಷತ್ರಕ್ಕೆ ಚಲಿಸುವುದರಿಂದಾಗಿ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣುತ್ತಾರೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮಲ್ಲಿನ ದೊಡ್ಡ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ. ನೀವು ಪ್ರತಿಯೊಂದು ಪ್ರಯತ್ನದಲ್ಲೂ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಕಚೇರಿಯಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಉದ್ಯೋಗಿಗಳು ಪ್ರಶಂಸೆ ಪಡೆಯುತ್ತಾರೆ. ಮುಖ್ಯವಾಗಿ ಕೆಲಸದಲ್ಲಿ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಬಹಳ ಕಾಲದ ಹಣಕಾಸು ಸಮಸ್ಯೆಯೊಂದು ಸುಲಭವಾಗಿ ಬಗೆಹರಿಯಲಿದೆ. ನೀವು ನಿರೀಕ್ಷಿಸದ ರೀತಿಯಲ್ಲಿ ಹಣವು ನಿಮ್ಮ ಕೈ ಸೇರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಸೂರ್ಯನ ಸಂಚಾರದಿಂದಾಗಿ ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಬಡ್ತಿ ಮತ್ತು ಸಂಬಳ ಕುರಿತಾದ ಸಮಸ್ಯೆಗಳು ನಿವಾರಣೆಯಾಗಲಿದೆ. ನೀವು ದೀರ್ಘಕಾಲದವರೆಗೆ ನ್ಯಾಯಾಲಯದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಈ ಅವಧಿಯಲ್ಲಿ ತೀರ್ಪುಗಳು ನಿಮ್ಮ ಪರವಾಗಿ ಇರುತ್ತವೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಅಥವಾ ಬದಲಾಯಯಿಸಲು ವಯಸಿದ್ದರೆ ಈ ಸಮಯದಲ್ಲಿ ಬಹಳ ಉತ್ತಮ ಅವಕಾಶಗಳು ಹುಡುಕಿ ಬರಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sun Transits To Ashwini Nakshatra Will Leads To Lucky For These People

The Sun is currently in Pisces and will move from Pisces to Aries on April 14. At this time, it will change its star.
Story first published: Friday, April 11, 2025, 10:05 [IST]
X
Desktop Bottom Promotion