Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ವೃಶ್ಚಿಕ ರಾಶಿಗೆ ಸೂರ್ಯ ಸಂಚಾರ: ನವೆಂಬರ್ 16ರಿಂದ ಈ ರಾಶಿಯವರ ಕಷ್ಟಗಳು ದೂರ; ಯಶಸ್ಸು ಹತ್ತಿರ!
ಗ್ರಹಗಳ ಕೇಂದ್ರಬಿಂದು ಎಂದು ಸೂಚಿಸುವ ಸೂರ್ಯನು ಪ್ರತಿಯೊಂದು ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅದ್ರಲ್ಲೂ ಸೂರ್ಯನ ಸಂಚಾರದಿಂದ ಹಾಗೆ ಆತನ ಸ್ಥಾನ ಪಲ್ಲಟದಿಂದಾಗಿ ಹಲವರಿಗೆ ಶುಭಯೋಗಗಳು ಬರುವುದು ನೋಡಬಹುದು. ಸೂರ್ಯ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿ ಬದಲಾಯಿಸುವುದು ನೋಡಬಹುದು.
ಸೂರ್ಯನು ಪ್ರಸ್ತುತ ತನ್ನ ದುರ್ಬಲ ರಾಶಿಯಾದ ತುಲಾ ರಾಶಿಯಲ್ಲಿದ್ದಾನೆ. ತನ್ನ ದುರ್ಬಲ ರಾಶಿಯಿಂದಾಗಿ, ಸೂರ್ಯನು ಸಕಾರಾತ್ಮಕ ಪ್ರಭಾವವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ನವೆಂಬರ್ 16 ರಿಂದ, ಸೂರ್ಯನು ತನ್ನ ದುರ್ಬಲ ರಾಶಿಯಿಂದ ಮುಕ್ತನಾಗಿ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.

ಮಂಗಳ ಮತ್ತು ಬುಧ ಈಗಾಗಲೇ ವೃಶ್ಚಿಕ ರಾಶಿಯಲ್ಲಿದ್ದಾನೆ. ಇದು ವೃಶ್ಚಿಕ ರಾಶಿಯಲ್ಲಿ ತ್ರಿಗುಣ ಯೋಗ ಸೃಷ್ಟಿಸಲಿದ್ದಾನೆ. ಈ ಮೂರು ಗ್ರಹಗಳ ಸಂಯೋಗದಿಂದ ಈ ಯೋಗವು ರೂಪುಗೊಳ್ಳುವುದು ಬಹಳ ಅಪರೂಪವಾಗಲಿದೆ. ಹಾಗೆ ಇದೇ ರಾಶಿಯಲ್ಲಿ ಬುಧಾದಿತ್ಯ ಯೋಗ ಮತ್ತು ಮಂಗಲ ಆದಿತ್ಯ ಯೋಗವನ್ನು ಸೃಷ್ಟಿಸುತ್ತದೆ. ಈ ಪ್ರಬಲ ಸಂಯೋಜನೆಯು ಅನೇಕ ರಾಶಿ ಜನಗಳಿಗೆ ಅದೃಷ್ಟವನ್ನುಂಟುಮಾಡಬಹುದು. ಪ್ರಸ್ತುತ ಮಂಗಳವು ತನ್ನ ದಹನ ಸ್ಥಿತಿಯಲ್ಲಿ, ಹೆಚ್ಚು ಸಕಾರಾತ್ಮಕ ಪ್ರಭಾವವನ್ನು ನೀಡುತ್ತಿಲ್ಲ, ಆದರೆ ಸೂರ್ಯನೊಂದಿಗಿನ ಅದರ ಸಂಯೋಗವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಬಹುದು. ಹೀಗಾಗಿ ಸೂರ್ಯ ಹಾಗೂ ಎರಡು ಗ್ರಹಗಳ ಸಂಯೋಗವು ಯಾರಿಗೆಲ್ಲಾ ಶುಭದಾಯಕ ಅನ್ನೋದನ್ನು ನೋಡೋಣ.
ಮೇಷ ರಾಶಿ
ಸೂರ್ಯನು ಮೇಷ ರಾಶಿಯತ 8ನೇ ಮನೆಗೆ ಪ್ರವೇಶಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರಿಗೆ ಬಹಳ ದಿನದಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಲಾಭಗಳು ನಿಮ್ಮದಾಗಲಿದೆ. ಆಸ್ರಿ ಅಥವಾ ಮನೆ ಖರೀದಿಸುವ ನಿಮ್ಮ ಆಸೆಗಳಿಗೆ ಹತ್ತಿರವಾಗಬಹುದು. ಪ್ರೇತಿಯ ವಿಚಾರವಾಗಿ ನೀವು ಮತ್ತೊಂದು ಹೆಜ್ಜೆ ಮುಂದಿಡುವಿರಿ, ಹಾಗೆ ದಾಂಪತ್ಯ ವಿಚಾರದಲ್ಲಿ ಮಧುರ ಕ್ಷಣಗಳು ನಿಮ್ಮದಾಗಲಿದೆ. ಬಹು ಸಮಯದ ಉದ್ಯೋಗ ಸಂಬಂಧಿತ ವಿಚಾರದಲ್ಲಿದ್ದ ಒತ್ತಡದ ಸಮಸ್ಯೆ ನಿವಾರಣೆಯಾಗಲಿದೆ.
ಕರ್ಕಾಟಕ ರಾಶಿ
ವೃಶ್ಚಿಕ ರಾಶಿಗೆ ಸೂರ್ಯನ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಅತ್ಯಂತ ಶುಭವಾಗಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಬಹುದು. ಸೂರ್ಯನು 6ನೇ ಮನೆಗೆ ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಸ್ಥಾನ ಪಡೆದಿರುವ ಶುಕ್ರನು ಸಂತೋಷದ ಮನೆಯಲ್ಲಿರುತ್ತಾನೆ. ಪರಿಣಾಮವಾಗಿ ಮನೆ, ವಾಹನ, ಆಸ್ತಿ ಇತ್ಯಾದಿಗಳನ್ನು ಖರೀದಿಸುವ ಕನಸುಗಳು ಈಡೇರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಯಶಸ್ಸನ್ನು ಕಾಣಬಹುದು. ರಿಯಲ್ ಎಸ್ಟೇಲ್ ಉದ್ಯಮಿಗಳಲ್ಲಿ ಅತೀ ದೊಡ್ಡ ಲಾಭ ನೋಡುವ ಸಮಯವಿದು.
ಸಿಂಹ ರಾಶಿ
ಸೂರ್ಯನ ದೌರ್ಬಲ್ಯವು ಕೊನೆಗೊಳ್ಳುವುದರೊಂದಿಗೆ, ಈ ರಾಶಿ ಜನರು ಲಾಭ ನೋಡಬಹುದು, ನಿಮ್ಮ ಹಣಕಾಸು ವಿಚಾರವಾಗಿ ಎದುರಾಗಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನವಿಡುವಿರಿ, ಇದರಲ್ಲಿ ಯಶಸ್ವಿಯೂ ಆಗಬಹುದು. ಗುರುವಿನ ಪ್ರಭಾವ ನಿಮ್ಮಲ್ಲಿರುವ ಕಾರಣ ನಿಮ್ಮ ಕಷ್ಟದ ದಿನಗಳು ದೂರಾಗಲಿವೆ. ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಭೌತಿಕ ಸೌಕರ್ಯಗಳು ಸಾಧ್ಯ. ನಿಮ್ಮ ಹತ್ತನೇ ಮನೆಯ ಮೇಲೆ ಸೂರ್ಯನ ದೃಷ್ಟಿ ಇರುವುದರಿಂದ ವ್ಯವಹಾರದಲ್ಲಿ ಗಮನಾರ್ಹ ಲಾಭವನ್ನು ತರುವ ಸಾಧ್ಯತೆಯಿದೆ. ಅವಿವಾಹಿತರಿಗೆ ಬಯಸಿದ ಜೊತೆಗಾರರ ಪಡೆಯಬಹುದು. ಪ್ರವಾಸಗಳು, ಪ್ರಯಾಣಗಳಲ್ಲಿ ಶುಭವಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











