ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಸೂರ್ಯ ಸಂಚಾರ: 3 ರಾಶಿಯವರ ಅದೃಷ್ಟ ಬದಲು! ಮುಟ್ಟಿದ್ದೆಲ್ಲಾ ಚಿನ್ನ!

ಜ್ಯೋತಿಷ್ಯದಲ್ಲಿ ಗ್ರಹಗಳ ನಿರ್ದಿಷ್ಟ ಚಲನೆಯನ್ನು ಬಹಳ ಅನುಕೂಲಕರ ಹಾಗೆ ಅನಾನುಕುಲವಾಗಿಯೂ ನೋಡಲಾಗಿದೆ. ಆಗಸ್ಟ್ ತಿಂಗಳ ಕೊನೆಯ ದಿನದಲ್ಲಿ ಸೂರ್ಯ ತನ್ನ ನಕ್ಷತ್ರ ಬದಲಾಯಿಸುವುದು ಈಗ ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಎಲ್ಲ ಗ್ರಹಗಳು ಆಗಾಗ ನಕ್ಷತ್ರ ಬದಲಾಯಿಸುವುದು ಕೂಡ ಬಹಳ ಅನುಕೂಲಕರವಾಗಲಿದೆ.

ಈಗ ಸೂರ್ಯನು ಆಗಸ್ಟ್ 30ರಂದು ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಚಲಿಸಲುತ್ತಾನೆ. ಸೂರ್ಯ ಸೆಪ್ಟೆಂಬರ್ 13 ರವರೆಗೆ ಅದೇ ಸ್ಥಾನದಲ್ಲಿರುತ್ತಾನೆ ಮತ್ತು ನಂತರ ಮುಂದಿನ ನಕ್ಷತ್ರಕ್ಕೆ ಚಲಿಸುತ್ತಾನೆ. ಪೂರ ನಕ್ಷತ್ರವನ್ನು ಪ್ರೀತಿ ಮತ್ತು ಸಂಪತ್ತಿನ ಅಧಿಪತಿ ಶುಕ್ರನು ಆಳುತ್ತಾನೆ. ಈ ನಕ್ಷತ್ರ ಬದಲಾವಣೆಯು ಕೆಲವು ರಾಶಿ ಜನರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು, ಹಠಾತ್ ಆರ್ಥಿಕ ಲಾಭಗಳು, ಕುಟುಂಬದಲ್ಲಿ ಶಾಂತಿ ಮತ್ತು ಸ್ಥಿರ ಆರೋಗ್ಯವನ್ನು ತರುತ್ತದೆ.

Sun Transits Poorva Palguni Nakshatra 3 Zodiac Signs Shine In This Time

ಹಾಗಾದ್ರೆ ಸೂರ್ಯನ ಈ ನಕ್ಷತ್ರ ಬದಲಾವಣೆಯು ಯಾರಿಗೆಲ್ಲಾ ಲಾಭದಾಯಕ ಇದರಿಂದ ಏನೆಲ್ಲಾ ಶುಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ತುಲಾ ರಾಶಿ

ಸೂರ್ಯನು ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಸಾಗುವಿಕೆಯು ತುಲಾ ರಾಶಿಯ ಜನರಿಗೆ ಹೆಚ್ಚಿನ ಲಾಭ ತರಲಿದೆ. ಈ ಅವಧಿಯಲ್ಲಿ, ನೀವು ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವೃತ್ತಿಜೀವನದಲ್ಲಿ ಕಾಡುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಅದ್ರಲ್ಲೂ ಕುಟುಂಬ ಸಂಬಂಧಿ ಕೆಲಗಳು, ಪಿತ್ರಾರ್ಜಿತವಾಗಿ ಬಂದಿದ್ದ ಕೆಲಸಗಳಲ್ಲಿ ಶುಭಕರ ಇರಲಿದೆ. ಹೊಸ ಆಸ್ತಿ ಖರೀದಿಯಲ್ಲಿ ಬಹಳ ಲಾಭವಿದೆ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮ ಧನಾತ್ಮಕ ಶಕ್ತಿಯ ವೃದ್ಧಿಗೆ ಕಾರಣವಾಗಲಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರ ಪ್ರಗತಿಗೆ ಶ್ರಮಿಸಿದರೆ ಉತ್ತಮ ಪ್ರಗತಿ ನೋಡಬಹುದು. ವೈವಾಹಿಕ ಜೀವನದಲ್ಲಿ ಸುಖ ಇರಲಿದೆ.

ಸಿಂಹ ರಾಶಿ

ಸೂರ್ಯನ ನಕ್ಷತ್ರ ಬದಲಾವಣೆಯು ಸಿಂಹ ರಾಿಯವರಿಗೆ ಶುಭಫಲ. ನೀವು ಊಹಿಸಲಾಗದ ಅಥವಾ ಅಧಕ್ಕೆ ನಿಲ್ಲಿಸಿದ್ದ ಕೆಲಸಗಳನ್ನು ಪೂರ್ಣ ಮಾಡಿ ಅದರಲ್ಲಿ ಯಶಸ್ಸು ಪಡೆಯುವ ಸಮಯವಾಗಿರಲಿದೆ. ವಾಹನ ಲಾಭ ಹಾಗೂ ಹೊಸ ಮನೆ ಖರೀದಿ, ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಲಾಭವಿದೆ. ಆರ್ಥಿಕ ವಿಚಾರದಲ್ಲಿ ನಿಮ್ಮ ಪರವಾದ ಅನುಕೂಲ ಇರಲಿದೆ. ಸ್ವಂತ ಉದ್ಯೋಗ ಮಾಡುವವರು ಈ ಸಮಯದಲ್ಲಿ ಅಧಿಕ ಲಾಭ ನೋಡಬಹುದು. ನಿಮ್ಮ ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಇರಲಿದೆ. ವೈವಾಹಿಕ ಜೀವನದಲ್ಲಿ ಈ ಸಮಯದಲ್ಲಿ ಬಹಳ ಸುಖ ಇರಲಿದೆ. ಮಕ್ಕಳ ವಿಚಾರವಾಗಿ ಈ ಸಮಯದಲ್ಲಿ ಅನುಕೂಲಕರ ದಿನ ಎನ್ನಬಹುದು.

ಧನು ರಾಶಿ

ಸೂರ್ಯನ ಸಂಚಾರವು ಧನು ರಾಶಿಯವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮ ಪ್ರಯೋಜನಗಳ ನೀಡುತ್ತದೆ. ಈ ನಕ್ಷತ್ರ ಬದಲಾವಣೆಯು ಅವರ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ತರಲಿದೆ. ಅವರ ಮಾತು ಮೃದುತ್ವದಿಂದ ತುಂಬಿರುತ್ತದೆ ಮತ್ತು ಅವರು ತಮ್ಮ ವೃತ್ತಿಪರ ಜೀವನದಲ್ಲಿ ಅನಿರೀಕ್ಷಿತ ಖ್ಯಾತಿಯನ್ನು ಪಡೆಯಬಹುದು. ಕೆಲಸದ ಜೀವನಕ್ಕೆ ಸಂಬಂಧಿಸಿದಂತೆ, ಬಡ್ತಿಗಳು ಮತ್ತು ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆಗಳಿವೆ. ನಿತ್ಯದ ವ್ಯಾಪಾರಿಗಳು ಲಾಭ ಗಳಿಸುವ ದಿನಗಳಿವೆ. ಯಾರಿಗಾದರು ನೀವು ಸಾಲ ನೀಡಿದ್ದರೆ ಅಥವಾ ಹಣ ಬರುವುದು ಬಾಕಿ ಉಳಿದು ಮನಸ್ತಾಪಗಳು ಎದುರಾಗಿದ್ದರೆ ಸಮಯದಲ್ಲಿನ ನಿಮ್ಮ ಪ್ರಯತ್ನದಿಂದ ಬಾಕಿ ಹಣ ಸಂದಾಯದ ಸಂಭವವಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

Sun Transits Poorva Palguni Nakshatra: 3 Zodiac Signs Shine In This Time

The Sun will move to the eastern Palguni star on August 30. The Sun will remain in the same position until September 13 and then move to the next star.
Story first published: Friday, August 29, 2025, 9:40 [IST]
X
Desktop Bottom Promotion