ಸಿಂಹ ರಾಶಿಗೆ ಸೂರ್ಯ ಸಂಚಾರ: 3 ರಾಶಿಯವರ ವ್ಯವಹಾರಗಳು ಉತ್ತುಂಗಕ್ಕೆ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಚಲನೆಗೆ ಅದರದ್ದೆ ಪರಿಣಾಮಗಳಿರುವುದು ನೋಡಬಹುದು. ಪ್ರತಿಯೊಂದು ಗ್ರಹವು ನಿರ್ಧಿಷ್ಟ ಸಮಯದಲ್ಲಿ ನಿರ್ಧಿಷ್ಟ ರಾಶಿಗೆ ಚಲಿಸುವುದು ನೋಡಬಹುದು. ಇದರಿಂದ ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಪ್ರತಿಯೊಂದು ಗ್ರಹವು ಕೂಡ ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತದೆ.

ಈ ಬದಲಾವಣೆಗಳು ಎಲ್ಲಾ ರಾಶಿಯವರ ಜೀವನದಲ್ಲಿ ಬದಲಾವಣೆ ತರುವುದು ನೋಡಬಹುದು. ಈಗ ಗ್ರಹಗಳ ಕೇಂದ್ರ ಬಿಂದು ಸೂರ್ಯ ತನ್ನ ರಾಶಿ ಬದಲಾಯಿಸುತ್ತಿರುವುದು ಹಲವರಲ್ಲಿ ಬದಲಾವಣೆಯ ಪರ್ವಕ್ಕೆ ಕಾರಣವಾಗಲಿದೆ. ಸೂರ್ಯ ಈಗ ಸಿಂಹ ರಾಶಿ ಪ್ರವೇಶಿಸಲಿದ್ದಾನೆ. ಈ ಗ್ರಹದ ಬದಲಾವಣೆಯು ಹಲವರಲ್ಲಿ ಬದಲಾವಣೆಗೆ ಕಾರಣವಾಗಲಿದೆ.

Sun Transits Leo Business will Peak For These Zodiac Signs

ಸೂರ್ಯ ಸಿಂಹ ರಾಶಿಗೆ ಚಲಿಸುವುದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ ಕೂಡ ಈ ಮೂರು ರಾಶಿಗಳಲ್ಲಿ ಮಾತ್ರ ಅದ್ಭುತ ಬದಲಾವಣೆಗಳಿಗೆ ಕಾರಣವಾಗಲಿದೆ. ವ್ಯವಹಾರ, ವ್ಯಾಪಾರ, ವೈವಾಹಿಕ ಜೀವನ ಕೂಡ ಅದ್ಭುತವಾಗಲಿದೆ. ಹಾಗಾದ್ರೆ ಆಗಸ್ಟ್‌ನಲ್ಲಿ ನಡೆಯಲಿರುವ ಸೂರ್ಯ ಸಂಚಾರವು ಯಾವೆಲ್ಲಾ ರಾಶಿಗಳಿಗೆ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸಿಂಹ ರಾಶಿ

ಸೂರ್ಯನು ಸಿಂಹ ರಾಶಿಯಲ್ಲಿ ಚಲಿಸುವುದರಿಂದ ಅದ್ಭುತ ಪ್ರಯೋಜನ ಪಡೆಯಲಿದ್ದಾರೆ. ಸಿಂಹ ರಾಶಿಯವರಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಸೂರ್ಯನ ಅಧಿಪತ್ಯ ಇರುವ ಸಿಂಹ ರಾಶಿಯವರಲ್ಲಿ ಆರ್ಥಿಕ ಲಾಭ ನೋಡಬಹುದು. ನೀವು ಹೊಸದಾದ ವ್ಯವಹಾರಗಳನ್ನು ಆರಂಭಿಸಲು ಈ ಸಮಯ ಬಹಳ ಸೂಕ್ತವಾಗಿರಲಿದೆ. ನಿಮ್ಮ ವ್ಯಾಪಾರಗಳಲ್ಲಿ ಹೊಸ ವಿಸ್ತರಣೆ ನೋಡಬಹುದು. ನೀವು ಪಾಲುದಾರಿಕೆ ವ್ಯವಹಾರದಲ್ಲಿ ಭಾಗಿಯಾಗುವುದಾದರೆ ಈ ಸಮಯದಲ್ಲಿ ನಿಮ್ಮ ಪರವಾದ ಒಲವು ಹೆಚ್ಚಾಗಲಿದೆ. ಉದ್ಯೋಗಸ್ಥರಲ್ಲಿ ಧನಲಾಭದ ನಿರೀಕ್ಷೆ ಇಡಬಹುದು. ಬಹಳ ಸಮಯದಿಂದ ನೀವು ಬಯಸಿದ್ದಂತಹ ವಸ್ತುವೊಂದು ನಿಮ್ಮ ಕೈಸೇರಲಿದೆ.

ಧನು ರಾಶಿ

ಧನು ರಾಶಿಯವರಿಗೆ ಸೂರ್ಯನ ಸಂಚಾರವು ಅನೇಕ ಧನಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ತರಬಹುದು. ಹಾಗೆ ನಿಮ್ಮ ವ್ಯಾಪಾರಗಳು ಬಹಳ ಸಮಯದಿಂದ ಲಾಭದಾಯಕವಾಗಿರದೆ ಇದ್ದರೆ ಈ ಸಮಯದಲ್ಲಿ ಲಾಭವಾಗುವ ನಿರೀಕ್ಷೆ ಇಡಿ. ನಿಮ್ಮೆಲ್ಲಾ ಕೆಲಸಗಳಿಗೂ ಆರ್ಥಿಕವಾಗಿ ಬೆಂಬಲ ಸಿಗುವ ಜೊತೆಗೆ ಹಲವು ಕೆಲಸಗಳಲ್ಲಿ ಯಶಸ್ಸು ಕೂಡ ಸಿಗಲಿದೆ. ಧಾರ್ಮಿಕ ಹಾಗೂ ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ದೊಡ್ಡ ಸಮಯದಲ್ಲಿ ನಿಮಗೆ ಆಪ್ತರಿಂದ ಸಹಕಾರ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸುಖವಿರಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಲಿವೆ. ನಿಮ್ಮ ವೈವಾಹಿಕ ಜೀವನ ಸಹ ಸಂತೋಷವಾಗಿ ಕಳೆಯಲಿದ್ದೀರಿ. ದೊಡ್ಡ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಸೂರ್ಯನ ರಾಶಿ ಬದಲಾವಣೆಯು ಅನೇಕ ಪ್ರಯೋಜನಕಾರಿ ಬದಲಾವಣೆಗಳ ತರಲಿದೆ. ಕೆಲಸದಲ್ಲಿರುವವರು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಲಿದ್ದಾರೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಯ ಉದ್ಯಮಿಗಳು ದೊಡ್ಡ ಲಾಭ ನಿರೀಕ್ಷಿಸಬಹುದು. ಕೆಲಸ ಮತ್ತು ವ್ಯವಹಾರ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಸರ್ಕಾರಿ ನೌಕರರು ಈ ಸಮಯದಲ್ಲಿ ಬಹಳ ದೊಡ್ಡ ಲಾಭ ನೋಡಬಹುದು. ಬಡ್ತಿ ವರ್ಗಾವಣೆ ಸಂಬಂಧಿಸಿದಂತೆ ನಿಮ್ಮ ಪರವಾದ ಒಲವು ಇರಲಿದೆ. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸಿದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳ ಪಡೆಯುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sun Transits Leo: Business will Peak For These Zodiac Signs!

Although the Sun's transit to Leo will affect all the zodiac signs, it will lead to amazing changes only in these three zodiac signs. Business, trade, and married life will also be amazing.
Story first published: Thursday, May 8, 2025, 17:55 [IST]
X
Desktop Bottom Promotion