Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾದ್ರಪದ ನಕ್ಷತ್ರದಲ್ಲಿ ಸೂರ್ಯ ಸಂಚಾರ..! ಯಾರಿಗೆಲ್ಲಾ ಕಾದಿದೆ ಶುಭ ಸುದ್ದಿ ಗೊತ್ತಾ?
ನಮ್ಮ ಜನ್ಮ ನಕ್ಷತ್ರವು ನಮ್ಮ ಭವಿಷ್ಯದ ದಿನಗಳ ಆಗು ಹೋಗುಗಳಿಗೆ ಕಾರಣವಾಗುತ್ತವೆ ಎಂಬುದು ನಮಗೆ ಗೊತ್ತಿದೆ. ಹಾಗೆ ಇದೇ ಡಿಸೆಂಬರ್‌ನಲ್ಲಿ ಸೂರ್ಯನು ಭಾದ್ರಪದ ನಕ್ಷತ್ರದಲ್ಲಿ ಚಲಿಸಲಿದೆ. ಹೀಗಾಗಿ ಇದು ಹಲವು ರಾಶಿಯವರಲ್ಲಿ ಒಂದಿಷ್ಟು ಬದಲಾವಣೆಗಳು, ಲಾಭಗಳಿಗೆ ಕಾರಣವಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವಗ್ರಹಗಳು ರಾಶಿಗಳ ಬದಲಾವಣೆ ಮಾತ್ರವಲ್ಲ ನಕ್ಷತ್ರಗಳ ಬದಲಾವಣೆ ಕೂಡ ಮಾಡಲಿವೆ. ಗ್ರಹಗಳ ಈ ಬದಲಾವಣೆಯು ನಿಮ್ಮ ದೈನಂದಿನ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ.
ಪ್ರತಿ ತಿಂಗಳು ಗ್ರಹಗಳು ಸ್ಥಾನ ಬದಲಾಯಿಸುವುದು ಸಾಮಾನ್ಯ. ಹಾಗೆ ನಾವಿಂದು ಡಿಸೆಂಬರ್ ತಿಂಗಳ ಅಂತ್ಯದಲ್ಲಿದ್ದೇವೆ. ಈ ಸಮಯದಲ್ಲಿ ಹಲವು ಗ್ರಹಗಳ ಸಂಚಾರದಲ್ಲಿ ಬದಲಾವಣೆಗಳ ನಾವು ನೋಡಲಿದ್ದೇವೆ. ಹಾಗೆ ಈ ವರ್ಷದ ಕೊನೆಯಲ್ಲಿ ಸೂರ್ಯನ ಸಂಚಾರದಲ್ಲೂ ಬದಲಾವಣೆಗಳ ನಾವು ನೋಡಬಹುದಾಗಿದೆ. ಸೂರ್ಯನು ಡಿಸೆಂಬರ್ 29ರಂದು ಭಾದ್ರಪದ ನಕ್ಷತ್ರದಲ್ಲಿ ಚಲಿಸಲಿದೆ. ಇದು ಹಲವರಿಗೆ ಹಲವು ರೀತಿ ಲಾಭಕ್ಕೆ ಕಾರಣವಾಗುತ್ತಿದೆ.

ಭಾದ್ರಪದ ನಕ್ಷತ್ರದ ಅಧಿಪತಿ ಶುಕ್ರ ಆಗಿದ್ದು ಈ ನಡುವೆ ಸೂರ್ಯನು ಕೂಡ ಇದೇ ನಕ್ಷತ್ರದಲ್ಲಿ ಚಲಿಸುವುದು ಹಲವು ರೀತಿ ಯೋಗ ತರಲಿದೆ. ಈಗ ಸೂರ್ಯನ ನಕ್ಷತ್ರ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯನ ನಕ್ಷತ್ರ ಸಂಕ್ರಮಣದಿಂದಾಗಿ ಮೇಷ ರಾಶಿಯವರಿಗೆ ಬಹಳ ದಿನಗಳಿಂದ ಅಡ್ಡಿಯಿಂದ ಅರ್ಧದಲ್ಲೇ ನಿಂತ ಕೆಲಸವು ಪೂರ್ಣವಾಗಲಿದೆ. ನೀವು ನಿಮ್ಮ ಕೆಲಸಗಳಿಗಾಗಿ ಪ್ರಯಾಣದಲ್ಲಿ ತೊಡಗಬೇಕಾಗಬಹುದು. ಇದರಿಂದ ನಿಮಗೆ ಲಾಭ ಗರಬಹುದು. ವ್ಯಾಪಾರಿ ಅತ್ಯುತ್ತಮ ಬೆಂಬಲದಿಂದ ಲಾಭ ಮಾಡಲಿದ್ದಾರೆ. ಹೊಸ ಉದ್ಯಮ, ಕೆಲಸ, ವೃತ್ತಿ, ವ್ಯವಹಾರ ಮಾಡುವವರಿಗೆ ಉತ್ತಮ ದಿನಗಳು ಮುಂದಿರಲಿವೆ. ನಿಮ್ಮ ಕುಟುಂಬವರೊಂದಿಗೆ ಬಹುದೊಡ್ಡ ಮನಸ್ಥಾಪ ನಿವಾರಣೆಯಾಗಲಿದೆ. ಹೀಗಾಗಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಅವಿವಾಹಿತರಿಗೆ ಒಳ್ಳೆಯ ದಿನಗಳು ಬರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸೂರ್ಯ ಭಾದ್ರಪದ ನಕ್ಷತ್ರದಲ್ಲಿ ಚಲಿಸುವ ಕಾರಣದಿಂದಾಗಿ ಹಲವು ಯಶಸ್ಸುಗಳಿಗೆ ಕಾರಣರಾಗುತ್ತಾರೆ. ನಿಮ್ಮ ವಾಹನ ಖರೀದಿಯ ಕನಸು ನನಸಾಗುವತ್ತ ಸಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕ ಸಂಬಂಧಗಳು ಸುಧಾರಿಸಲಿದೆ. ವೃತ್ತಿಪರವಾದ ಬೆಂಬಲದೊಂದಿಗೆ ನಿಮ್ಮ ಆದಾಯ ತರುವ ಕೆಲಸದಲ್ಲಿ ಹೆಚ್ಚು ಲಾಭವಾಗಲಿದೆ. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳಲು ಯೋಜಿಸುತ್ತೀರಿ. ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರ ನಿಮಗೆ ಉತ್ತಮ ದಾರಿ ತೋರಲಿವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ಸಂಬಂಧಿತ ಲಾಭಗಳು ಹೆಚ್ಚಾಗುತ್ತದೆ. ಬಹು ದಿನಗಳ ಬೇಡಿಕೆ ಹಾಗೂ ಕನಸು ಈಡೇರಲಿದೆ. ಹೂಡಿಕೆ, ಹಣಕಾಸು ವ್ಯವಹಾರವು ಅಡೆತಡೆಯಿಲ್ಲದೆ ನೆರವೇರಲಿದೆ. ಬಹಳ ಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯೊಂದು ದೂರಾಗಲಿದೆ. ಕೌಟುಂಬಿಕ ಜೀವನ ಅತ್ಯಂತ ಸಂತಸವಾಗಿ ಕಳೆಯಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀವು ದೊಡ್ಡ ಕಾರ್ಯ ಮಾಡಲು ಮುಂದಾಗುತ್ತೀರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications