Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿಯಲ್ಲಿ ಸೂರ್ಯನಿಂದ 3 ಬಾರಿ ಸ್ಥಾನಪಲ್ಲಟ: ಈ ಮೂರು ರಾಶಿಯವರಲ್ಲಿ ಹಣದ ಹರಿವು, ಅದೃಷ್ಟಕರ ದಿನ
2025ನೇ ವರ್ಷ ಅಂತ್ಯದತ್ತ ಬಂದಿದ್ದೇವೆ. 2026ನೇ ವರ್ಷದ ಆರಂಭದಿಂದಲೂ ಹಲವು ರೀತಿಯ ಗ್ರಹಗತಿಗಳ ಏರಿಳಿತ ನೋಡಬಹುದು. ಅದ್ರಲ್ಲೂ ಹಲವು ರಾಶಿಗಳ ಮೇಲೆ ಈ ಗ್ರಹಗಳ ಸ್ಥಾನಪಲ್ಲಟವು ಬದಲಾವಣೆಗಳ ತರಲಿದೆ. 2026ರ ಆರಂಭಿಕ ತಿಂಗಳಾಗಿರುವ ಜನವರಿಯಲ್ಲಿಯೇ ದೊಡ್ಡ ವಿದ್ಯಮಾನಗಳು ನಡೆಯುತ್ತಿವೆ. ಈ ತಿಂಗಳಲ್ಲಿ ಸೂರ್ಯನು ತನ್ನ ಸ್ಥಾನ ಬದಲಾಯಿಸುತ್ತಿದ್ದಾನೆ.
2026ರ ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಸೂರ್ಯನು ತನ್ನ ಸ್ಥಾನವನ್ನು ಮೂರು ಬಾರಿ ಬದಲಾಯಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ವಿಶೇಷ ಸೌರ ಸಂಚಾರವು ಅತ್ಯಂತ ಮಹತ್ವದ್ದಾಗಿದ್ದು, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಹಬ್ಬಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನು ಮೊದಲು ಜನವರಿ 11 ರಂದು ಬೆಳಗ್ಗೆ 8:42ಕ್ಕೆ ಉತ್ತರಾಷಾಢ ನಕ್ಷತ್ರವನ್ನು ಪ್ರವೇಶಿಸುತ್ತಾನೆ.

ಪೂರ್ವಾಷಾಢದಿಂದ ತನ್ನ ಪ್ರಯಾಣವನ್ನು ಕೊನೆಗೊಳಿಸುವ ಸೂರ್ಯನು ಅನಂತರ ಜನವರಿ 14 ರಂದು ಮಧ್ಯಾಹ್ನ 3:13 ಕ್ಕೆ ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸುತ್ತಾನೆ. ಈ ದಿನ ಮಕರ ಸಂಕ್ರಾಂತಿ ಆಚರಣೆ ಇರಲಿದೆ. ಇದಾದ ಬಳಿಕ ಜನವರಿ 24ರಂದು ಬೆಳಗ್ಗೆ 10:56 ಕ್ಕೆ ಸೂರ್ಯನು ಉತ್ತರಾಷಾಢ ನಕ್ಷತ್ರವನ್ನು ಬಿಟ್ಟು ಶ್ರಾವಣ ನಕ್ಷತ್ರಕ್ಕೆ ಸಾಗುತ್ತಾನೆ.
ಜ್ಯೋತಿಷ್ಯದ ಪ್ರಕಾರ ಜನವರಿಯಲ್ಲಿ ಸೂರ್ಯನ ಸ್ಥಾನದಲ್ಲಿನ ಈ ಮೂರು ಬದಲಾವಣೆಗಳು ಅನೇಕ ರಾಶಿ ಜನರಿಗೆ ಪ್ರಯೋಜನಕಾರಿಯಾಗಬಹುದು. ಇದು ವೃತ್ತಿ, ಪ್ರತಿಷ್ಠೆ ಮತ್ತು ವ್ಯವಹಾರದಲ್ಲಿ ಗಮನಾರ್ಹ ಲಾಭಗಳನ್ನು ತರಲಿದೆ. ಹೀಗಾಗಿ ಸೂರ್ಯನ ಈ ಸಂಚಾರಗಳು ಯಾವೆಲ್ಲಾ ರಾಶಿಗಳಿಗೆ ಲಾಭದಾಯಕವಾಗುತ್ತಿವೆ. ಈ ಹಬ್ಬದ ಸಮಯದಲ್ಲಿ ಯಾವ ಜೀವನ ಅದೃಷ್ಟದಾಯಕ ಆಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಸುಧಾರಿಸುತ್ತವೆ. ಇದು ಹಲವು ನಿರ್ಧಾರಗಳು ನಿಮಗೆ ಶುಭ ತರಲಿದೆ. ನಿಮ್ಮ ಹೊಸ ವ್ಯವಹಾರಗಳು ಲಾಭದಾಯಕವಾಗುತ್ತವೆ. ಹಾಗೆ ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗುವುದು ನೋಡಬಹುದು. ಹಾಗೆ ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆಯು ನಿಮಗೆ ನೆಮ್ಮದಿ ದಾಯಕ ದಿನಗಳ ತರಲಿವೆ. ನೀವು ಹೊಸದಾಗಿ ಮನೆ ನಿರ್ಮಾಣದಲ್ಲಿ ತೊಡಗಿದ್ದರೆ ಸಹಕಾರಗಳ ಪಡೆಯಬಹುದು. ಸಂಬಂಧಿಕರಿಂದ ನಿಮಗೆ ಶುಭ ಸುದ್ದಿಗಳು ಬರುವ ಸಮಯ ಇದು. ಈ ಜನವರಿಯಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ನೋಡುವಿರಿ.
ಸಿಂಹ ರಾಶಿ
ಸೂರ್ಯನ ಆಡಳಿತದ ಸಿಂಹ ರಾಶಿಯವರಿಗೆ ಶುಭ ಸಮಯ. ಈ ಜನವರಿಯಲ್ಲಿ ಹಲವು ಬಗೆಯಲ್ಲಿ ನಿಮಗೆ ಶುಭವಿದೆ. ಅಚ್ಚರಿಯ ದಿನಗಳನ್ನು ನೀವು ನೋಡಬಹುದು. ಅದ್ರಲ್ಲೂ ನಿಮ್ಮ ಬಹುಸಮಯದ ಹಣಕಾಸು ಸಮಸ್ಯೆಗಳು ಬಗೆಹರಿಯುವ ಸಮಯ ಇದಾಗಿರಲಿದೆ. ನೀವು ಬ್ಯಾಂಕಿಂಗ್, ಸಾಲ, ನಿವೇಶನ ಖರೀದಿಯಂತಹ ವಿಚಾರದಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಶುಭವಿದೆ. ನೀವು ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದರೆ ಲಾಭದಾಯಕವಾದ ಉದ್ಯೋಗ ನಿರೀಕ್ಷಿಸಬಹುದು. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರು ಅಪೇಕ್ಷಿತ ವರ್ಗಾವಣೆಯನ್ನು ಪಡೆಯುತ್ತಾರೆ. ನಿಮ್ಮ ವಾಹನ ಖರೀದಿಯ ಆಸೆಗಳು ಈಡೇರಬಹುದು. ಹೂಡಿಕೆ, ಉಳಿತಾಯ ಹೆಚ್ಚಾಗುವ ಸಮಯ.
ಧನು ರಾಶಿ
ಧನು ರಾಶಿಯವರು ಈ ಸಮಯದಲ್ಲಿ ದೊಡ್ಡ ಲಾಭಗಳನ್ನು ಪಡೆಯಬಹುದು. ನಿಮ್ಮ ಪಾಲುದಾರಿಕೆ ವ್ಯವಹಾರಗಳು ಅಥವಾ ಸ್ವಂತ ಉದ್ಯೋಗವು ಲಾಭದಾಯಕವಾಗಲಿದೆ. ಉದ್ಯೋಗಿಗಳು ಹೊಸ ಲಾಭ ನೋಡುವಿರಿ. ದಾಂಪತ್ಯ ವಿಚಾರವಾಗಿಯೂ ಈ ಸಮಯದಲ್ಲಿ ಶುಭವಿದೆ. ನೀವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ದತೆ ನಡೆಸುತ್ತಿದ್ದರೆ ಅದು ಶುಭ ಫಲಿತಾಂಶಗಳ ತರಲಿದೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ನೋಡುವಿರಿ. ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಅವರಿಂದ ಮರಳಿ ಪಡೆಯುವ ಸಾಧ್ಯತೆ ಹೆಚ್ಛಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications



