Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಸೆಪ್ಟೆಂಬರ್ 16ರಿಂದ ಈ 3 ರಾಶಿಗಳಿಗೆ ಸೂರ್ಯನಿಂದ ಸಿಗಲಿದೆ ಶುಭ ಫಲ
ಸೂರ್ಯನು ಸೆಪ್ಟೆಂಬರ್ 16ರಿಂದ 30 ದಿನಗಳವರೆಗೆ ಕನ್ಯಾ ರಾಶಿಯಲ್ಲಿ ಇರಲಿದೆ. ಈ ಸೂರ್ಯ ಸಂಚಾರ ಈ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ, ಈ ರಾಶಿಯವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುವಿರಿ:

ಮೇಷ ರಾಶಿ
ಸೂರ್ಯನು ಸೆಪ್ಟೆಂಬರ್ 16ಕ್ಕೆ ಕನ್ಯಾ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ ರಾಶಿಯಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ, ಲಾಭ ತರಲಿದೆ, ಆರ್ಥಿಕವಾಗಿ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಸ್ಪರ್ದಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿನ ಸಮಸ್ಯೆಗಳು ದೂರಾಗಲಿದೆ, ವ್ಯಾಪಾರಿಗಳ ಸಮಸ್ಯೆ ಕೂಡ ಬಗೆಹರಿಯಲಿದೆ, ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು.
ಆರ್ಥಿಕವಾಗಿ ಹೆಚ್ಚಿನ ಪ್ರಯೋಜನ ಪಡೆಯುವಿರಿ, ಯಾವುದೇ ಹಣಕಾಸಿನ ಸಮಸ್ಯೆ ಎದುರಾಗಲ್ಲ, ಆರೋಗ್ಯದಲ್ಲಿ ವೃದ್ಧಿ ಕಂಡು ಬರಲಿದೆ. ಹೊಸ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ನೀವು ಹೆಚ್ಚಿನ ಪ್ರಯೋಜನ ಪಡೆಯುವಿರಿ. ಕಲೆ ಸಂಬಂಧಿತ ವೃತ್ತಿಯಲ್ಲಿರುವವರಿಗೆ ಉತ್ತಮವಾಗಲಿದೆ. ಈ ಸಮಯ ನಿಮಗೆ ಉತ್ತಮವಾಗಿದೆ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಸೂರ್ಯನು 3ನೇ ಮನೆಯಲ್ಲಿ ಇರಲಿದೆ, ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹುದು. ಕೆಲಸದ ಜಾಗದಲ್ಲಿ ನಿಮ್ಮ ಪರಿಶ್ರಮಕ್ಕೆ ಉತ್ತಮ ಪರಿಗಣನೆ ದೊರೆಯಲಿದೆ. ನಿಮ್ಮ ಕೆಲಸವನ್ನು ಗುರುತಿಸಲಾಗುವುದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ತುಂಬಾ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಈ ಅವಧಿಯಲ್ಲಿ ಸುಧಾರಣೆ ಕಂಡು ಬರುವುದು.
ವ್ಯಾಪಾರಿಗಳು ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ ಪಡೆಯುತ್ತೀರಿ. ಇನ್ನು ಈ ಸಮಯದಲ್ಲಿ ವ್ಯಾಪಾರ ಅಥವಾ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ನಿಮಗೆ ಲಾಭ ತರಲಿದೆ, ಇನ್ನು ಟ್ರಿಪ್ ಮಾಡಲು ಯೋಚಿಸುತ್ತಿದ್ದರೆ ಈ ಅವಧಿಯಲ್ಲಿ ಸಾಧ್ಯವಾಗುವುದು.
ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಗಟ್ಟಿಯಾಗಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಬಗೆಹರಿಯಲಿದೆ.
ಅರ್ಥಿಕವಾಗಿ ಉತ್ತಮವಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ನಿಮಗೆ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ಸೂರ್ಯನು ಕನ್ಯಾ ರಾಶಿಗೆ ಸಂಚರಿಸಿದಾಗ ವೃಶ್ಚಿಕ ರಾಶಿಯ 11ನೇ ಮನೆಯಲ್ಲಿ ಇರಲಿದೆ. ಹನ್ನೊಂದನೇ ಮನೆಯು ಅದಾಯದ ಮನೆಯಾಗಿದ್ದು ಈ ಸಮಯದಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯುವಿರಿ. ವ್ಯಾಪಾರಿಗಳು ಉತ್ತಮ ಆರ್ತಿಕ ಲಾಬ ಪಡೆಯುತ್ತೀರಿ, ಉದ್ಯೋಗಿಗಳ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ. ತುಂಬಾ ಸಮಯದಿಂದ ನೀವು ಬಯಸಿದ ವಸ್ತು ಖರೀದಿಸಲು ಸಾಧ್ಯವಾಗುವುದು.
ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರಿಗೆ ನಿಮ್ಮ ಪ್ರಮುಖ ಕಾರ್ಯಗಳಿಗೆ ತಂದೆ ಅಥವಾ ಹಿರಿಯರ ಬೆಂಬಲ ಸಿಗಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರುವುದು.
, ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಬೃಏಕು.
ಸಂಬಂಧದ ದೃಷ್ಟಿಯಿಂದ ಈ ಸಮಯ ನಿಮಗೆ ಉತ್ತಮವಾಗಿದೆ, ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇರಲಿದೆ, ಈ ಸಮಯದಲ್ಲಿ ಅವಾಹಿತರಿಗೆ ಮದುವೆ ಸಂಬಂಧ ಬರಬಹುದು.
ಧನು ರಾಶಿ
ಕನ್ಯಾ ರಾಶಿಯಲ್ಲಿ ಸೂರ್ಯ ಸಂಚಾರ ಧನು ರಾಶಿಯವರಿಗೆ ಅದೃಷ್ಟ ತರಲಿದೆ. ಸೂರ್ಯನು ನಿಮ್ಮ 10ನೇ ಮನೆಯಲ್ಲಿ ಇರುವುದರಿಂದ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ. ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಉದ್ಯೋಗವಕಾಶ ದೊರೆಯಲಿದೆ.
ವೃತ್ತಿ ಕ್ಷೇತ್ರದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ವ್ಯಾಪಾರಿಗಳಿಗೆ ಈ ಸಮಯ ಉತ್ತಮವಾಗಿದೆ. ವಿದ್ಯಾರ್ಥಿಗಲಿಗೆ ಈ ಸಮಯ ಉತ್ತಮವಾಗಿದೆ.
ಕುಟುಂಬ ಜೀವನದಲ್ಲಿ ಖುಷಿ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications