ವೃಷಭ ರಾಶಿಗೆ ಸೂರ್ಯ ಸಂಚರಿಸಿದಾಗ 30 ದಿನ 12 ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ

ಸೂರ್ಯ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಮೇ 15ಕ್ಕೆ ಸಂಚರಿಸಲಿದೆ, ಮೇ ತಿಂಗಳಿನ ಸೂರ್ಯ ಸಂಚಾರ 12 ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ನೋಡೋಣ:

ಮೇಷ ರಾಶಿ,

ನಿಮ್ಮ ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ, ಆದರೆ ನಿಮ್ಮ ವಿರುದ್ಧ ಕೆಲವರು ಪಿತೂರಿ ಮಾಡಬಹುದು, ಆದ್ದರಿಂದ ಸ್ವಲ್ಪ ಜಾಗ್ರತೆ . ಇನ್ನು ವಿದ್ಯಾರ್ಥಿಗಳು ತಾವು ಇಷ್ಟ ಪಟ್ಟ ಕೋರ್ಸ್ ತೆಗೆಯಲು ಸಾಧ್ಯವಾಗುವುದು. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿದೆ. ವೃಷಭದಲ್ಲಿ ಸೂರ್ಯ ಸಂಚಾರದಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

Sun Transit In Taurus

ವೃಷಭ ರಾಶಿ

ಸೂರ್ಯ ನಿಮ್ಮ ಲಗ್ನ ಮನೆಗೆ ಬಂದಾಗ ನಿಮಗೆ ತುಂಬಾನೇ ಶುಭವಾಗಿದೆ. ನೀವು ನಿರೀಕ್ಷೆ ಮಾಡಿಯೇ ಇರಲ್ಲ ಅಷ್ಟೊಂದು ಉತ್ತಮ ಪ್ರಯೋಜನ ಪಡೆಯುತ್ತೀರಿ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಸಮಾಜದಲ್ಲಿ ಉತ್ತಮ ಗೌರವ ಸಿಗಲಿದೆ. ರಾಜಕಾರಣಿಗಳಿಗೆ ಈ ಅವಧಿ ಉತ್ತಮವಾಗಿದೆ, ಆರೋಗ್ಯವೂ ಚೆನ್ನಾಗಿರಲಿದೆ.

ಮಿಥುನ ರಾಶಿ

ಸೂರ್ಯ ವೃಷಭ ರಾಶಿಗೆ ಬಂದಾಗ ಮಿಥುನ ರಾಶಿಯವರ ಖರ್ಚು ಹೆಚ್ಚಾಗಲಿದೆ. ನೀವು ಅನಗ್ಯತ ವಿಚಾರ, ವುವಾದಗಳಿಂದ ದೂರವಿರಲು ಪ್ರಯತ್ನಿಸಬೇಕು. ನೆರೆಹೊರೆಯವರೊಂದಿಗೆ ಸಂಬಂಧ ಹದಗೆಡಲು ಬಿಡಬೇಡಿ. ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ವಿದೇಶಕ್ಕೆ ಹೋಗಲು ಬಯಸುವವರೆಗೆ ಈ ಅವಧಿ ಉತ್ತಮವಾಗಿದೆ.

ಕರ್ಕ ರಾಶಿ

ಈ ಸೂರ್ಯ ನಿಮಗೆ ತುಂಬಾ ಉತ್ತಮವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದು. ಇನ್ನು ಪ್ರೇಮ ವಿವಾಹ ಆಗಬೇಕೆಂದು ಬಯಸುವವರು ಸ್ವಲ್ಪ ಸಮಯ ಕಾಯುವುದು ಒಳ್ಳೆಯದು.

ಸಿಂಹ ರಾಶಿ

ನಿಮ್ಮ ಗ್ರಹ ಅಧಿಪತಿಯಾಗಿರುವ ಸೂರ್ಯ 10ನೇ ಮನೆ ಅಂದರೆ ಕರ್ಮದ ಮನೆಯಲ್ಲಿ ಇರಲಿದೆ, ಈ ಸಂಚಾರ ನಿಮಗೆ ಅನುಕೂಲಕರವಾಗಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸಿಗಲಿದೆ. ಇನ್ನು ಕೆಲಸವನ್ನು ಬದಲಾಯಿಸಲು ಬಯಸುವುದಾದರೂ ಈ ಅವಧಿ ಚೆನ್ನಾಗಿದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ನೀವು ಸಹ ವಾಹನವನ್ನು ಖರೀದಿಸಲು ಬಯಸಿದರೆ ಈ ಅವಧಿಯಲ್ಲಿ ಸಾಧ್ಯವಾಗುವುದು.

ಕನ್ಯಾ ರಾಶಿ

ಸೂರ್ಯ ಸಮಚಾರ ನಿಮಗೆ ಮಿಶ್ರಫಲ ನೀಡಲಿದೆ. ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ನೀವು ಬಡ್ತಿಗೆ ಕಾಯುತ್ತಿದ್ದರೆ ಇನ್ನೂ ಸ್ವಲ್ಪ ಕಾಯಬೇಕಾಗುವುದು. ಕೆಲಸದಲ್ಲಿ ಒಳರಾಜಕೀಯದ ಬಗ್ಗೆ ಎಚ್ಚರ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.

ತುಲಾ ರಾಶಿ

ತುಲಾ ರಾಶಿಯವರು ಈ ಸುರ್ಯ ಸಂಚಾರದ ಸಮಯದಲ್ಲಿ ಅನೇಕ ಏರಿಳಿತಗಳನ್ನು ಕಾಣಬಹುದು, ಲಾಭ- ನಷ್ಟ ಎರಡೂ ಸರಿದೂಗಿಸಿಕೊಂಡು ಹೋಗಬೇಕು. ಕುಟುಂಬದಲ್ಲಿ ಕೆಲ ಸಮಸ್ಯೆಗಳು ಬರಬಹುದು, ಅದನ್ನು ಸರಿಪಡಿಸಿಕೊಂಡು ಹೀಗಲು ಪ್ರಯತ್ನಿಸಿ. ಆರೋಗ್ಯದ ಕಡೆಯೂ ಗಮನಹರಿಸಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ಮಾಸ ಜಾಗ್ರತೆವಹಿಸಬೇಕು. ವೈವಾಹಿಕ ಜೀವನದಲ್ಲಿ ಸಮಸ್ಯೆ ದೊಡ್ಡದಾಗಲು ಬಿಡಬೇಡಿ. ಇನ್ನು ನೀವು ವೃತ್ತಿ ಜೀವನದ ಬಗ್ಗೆ ಕೂಡ ತುಂಬಾ ಗಮನಹರಿಸಬೇಕು, ಎಲ್ಲಿಯೂ ಹಣದ ಹೂಡಿಕೆ ಮಾಡಲು ಹೋಗಬೇಡಿ.

ಧನು ರಾಶಿ

ಈ ಅವಧಿ ನಿಮಗೆ ತುಂಬಾ ಒಳ್ಳೆಯದಿದೆ. ನಿಮ್ಮ ಕೆಲಸ, ಗುರಿಯಲ್ಲಿ ಯಶಸ್ವಿಯಾಗುತ್ತೀರಿ.ಕೆಲಸ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಅವಕಾಶ ಸಿಗಲಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ಸೂರ್ಯ ಸಂಚಾರ ಅನೇಕ ಶುಭ ಸುದ್ದಿ ತರುತ್ತದೆ. ವಿದೇಶಕ್ಕೆ ಓದಲು ಅಥವಾ ಉದ್ಯೋಗಕ್ಕಾಗಿ ಹೋಗಬಯಸುವವರಿಗೆ ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.


ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ಸಂಚಾರ ಅಷ್ಟೊಂದು ಅನುಕೂಲಕರವಲ್ಲ. ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗಬಹುದು, ಹಣದ ಬಗ್ಗೆ ಜಾಗ್ರತೆ, ಈ ಅವಧಿಯಲ್ಲಿ ಯಾರಿಗೂಸಾಲ ನೀಡಬೇಡಿ. ವೃತ್ತಿ ಜೀವನದಲ್ಲಿ ಕೆಲ ಅಡೆತಡೆಗಳು ಇರಬಹುದು, ಜಾಗ್ರತೆವಹಿಸಿ.

ಮೀನ ರಾಶಿ

ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಚೆನ್ನಾಗಿರಲಿದೆ. ರಾಜಕಾರಣಿಗಳಿಗೂ ಶುಭವಾಗಿದೆ. ಮೀನ ರಾಶಿಯವರು ಈ ಅವಧಿಯಲ್ಲಿ ಅನೇಕ ಧನಾತ್ಮಕ ಬದಲಾವಣೆ ಕಾಣಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಗಾಡಿ ಖರೀದಿಸಬಹುದು. ಆರೋಗ್ಯ ಕೂಡ ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sun Transit In Taurus 2024: Vrushaba Sankranti, Effects On 12 Zodiac Signs

Sun Transit In Taurus 2024: How this planet change effects 12 zodiac signs,
X
Desktop Bottom Promotion