Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವೃಶ್ಚಿಕ ರಾಶಿಗೆ ಸೂರ್ಯ ಸಂಚಾರ ದ್ವಾದಶ ರಾಶಿಗಳ ಮೇಲೆ ಬೀರಲಿರುವ ಪ್ರಭಾವವೇನು?
ನವೆಂಬರ್ 17ಕ್ಕೆ ಸೂರ್ಯನು ತುಲಾ ರಾಶಿಯನ್ನು ಬಿಟ್ಟು ವೃಶ್ಚಿಕ ರಾಶಿಗೆ ಸಂಚರಿಸಲಿದೆ. ಪ್ರತಿ ತಿಂಗಳು ಸೂರ್ಯ ತನ್ನ ರಾಶಿ ಬದಲಾಯಿಸಿದಾಗ ಅದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಬೀರಲಿದೆ. ಈ ಸೂರ್ಯ ಸಂಚಾರ ದ್ವಾದಶ ರಾಶಿಗಳಲ್ಲಿ ಯಾರಿಗೆಲ್ಲಾ ಹೆಚ್ಚು ಮಂಗಳಕರವಾಗಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಲ್ಲಿ ಸೂರ್ಯ 8ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸಂಚಾರವು ನಿಮ್ಮ ಆರೋಗ್ಯದಲ್ಲಿ ಕೆಲವು ಏರಿಳಿತಗಳನ್ನು ಉಂಟುಮಾಡಬಹುದು. ಆದ್ದರಿಂದ, ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ, ಸೂರ್ಯನಿಂದ ಮಂಗಳಕರ ಫಲಿತಾಂಶ ಪಡೆಯಲು ಸೂರ್ಯನಿಗೆ ಪ್ರತಿದಿನ ಆರ್ಘ್ಯ ಅರ್ಪಿಸಿ.

ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಸೂರ್ಯ 7ನೇ ಮನೆಯಲ್ಲಿ ಇರಲಿದೆ. ಜಾತಕದ ಏಳನೇ ಸ್ಥಾನವು ಜೀವನ ಸಂಗಾತಿಗೆ ಸಂಬಂಧಿಸಿದೆ. ಸೂರ್ಯನ ಈ ಸಾಗಣೆ ನಿಮ್ಮ ವೈವಾಹಿಕ ಜೀವನ ತುಂಬಾ ಸುಂದರವಾಗಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿ ಉಳಿಯುತ್ತದೆ. ಆದ್ದರಿಂದ, ಸೂರ್ಯ ದೇವರ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಬೆಳಗ್ಗೆ ಎದ್ದು ಸ್ವಲ್ಪ ಬೆಲ್ಲ ಬಾಯಿಗೆ ಹಾಕಿ ನೀರು ಕುಡಿಯಿರಿ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸಾಗಣೆ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಆದ್ದರಿಂದ ಸೂರ್ಯದೇವನ ಹೆಚ್ಚಿನ ಮಂಗಳಕರ ಫಲಿತಾಂಶ ಪಡೆಯಲು ಕೋತಿಗೆ ಬೆಲ್ಲ ನೀಡಿ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಸೂರ್ಯನು 5ನೇ ಮನೆಯಲ್ಲಿರುತ್ತಾನೆ. ಜಾತಕದ ಐದನೇ ಸ್ಥಾನವು ನಿಮ್ಮ ಮಕ್ಕಳು, ಪ್ರಣಯ, ಜ್ಞಾನ, ಗುರು ಮತ್ತು ನಿಮ್ಮ ವಿವೇಚನೆಗೆ ಸಂಬಂಧಿಸಿದೆ. ಸೂರ್ಯನ ಈ ಸಂಚಾರದಿಂದಾಗಿ ನೀವು ಸಾಮಾನ್ಯವಾಗಿ ಈ ಎಲ್ಲಾ ವಿಷಯಗಳಲ್ಲಿಯೂ ಪ್ರಯೋಜನಗಳನ್ನು ಪಡೆಯುತ್ತೀರಿ. ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ಸಿಗಲಿದೆ. ನೀವು ಸೂರ್ಯನಿಂದ ಮತ್ತಷ್ಟು ಮಂಗಳಕರ ಅಂಶವನ್ನು ಪಡೆಯಲು ಪಕ್ಷಿಗಳಿಗೆ ಆಹಾರವನ್ನು ನೀಡಿ. ಆದರೆ ಪಾರಿವಾಳಗಳಿಗೆ ಆಹಾರವನ್ನು ನೀಡಬಾರದು.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯನು 4ನೇ ಮನೆಯಲ್ಲಿ ಇರಲಿದೆ. ಜಾತಕದಲ್ಲಿ ನಾಲ್ಕನೇ ಸ್ಥಾನವು ತಾಯಿ, ಭೂಮಿ, ಕಟ್ಟಡಗಳು ಮತ್ತು ವಾಹನಗಳಿಗೆ ಸಂಬಂಧಿಸಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ತಾಯಿಯ ಬೆಂಬಲವನ್ನು ಪಡೆಯುತ್ತೀರಿ. ಡಿಸೆಂಬರ್ 16 ರವರೆಗೆ ನೀವು ಭೂಮಿ, ಕಟ್ಟಡ ಮತ್ತು ವಾಹನದ ಲಾಭವನ್ನು ಪಡೆಯಬಹುದು. ನೀವು ಬಡವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ 3ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸಂಕ್ರಮಣದ ಸಮಯದಲ್ಲಿ ನೀವು ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಡಿಸೆಂಬರ್ 16 ರವರೆಗೆ ಅವರು ಮಾಡಿದ ಕೆಲಸದಿಂದ ನೀವು ಸಹ ಪ್ರಯೋಜನ ಪಡೆಯಬಹುದು.ಅಲ್ಲದೆ, ಈ ಸಮಯದಲ್ಲಿ, ಜನರು ನಿಮ್ಮ ಮಾತಿಗೆ ಗಮನ ಕೊಡುತ್ತಾರೆ ನಿಮ್ಮನ್ನು ಬೆಂಬಲಿಸುತ್ತಾರೆ. ಆದ್ದರಿಂದ ಸೂರ್ಯ ದೇವರ ಮಂಗಳಕರ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು, ಸೂರ್ಯ ದೇವರ ಮಂತ್ರವನ್ನು ಪ್ರತಿದಿನ ಪಠಿಸಿ.
ತುಲಾ ರಾಶಿ
ಸೂರ್ಯ ತುಲಾ ರಾಶಿಯ 2ನೇ ಮನೆಯಲ್ಲಿ ಇರಲಿದೆ. ಜಾತಕದಲ್ಲಿ ಎರಡನೇ ಸ್ಥಾನವು ನಮ್ಮ ಸ್ವಭಾವ ಮತ್ತು ಸಂಪತ್ತಿಗೆ ಸಂಬಂಧಿಸಿದೆ. ಡಿಸೆಂಬರ್ 16 ರವರೆಗೆ ಸೂರ್ಯದೇವನ ಈ ಸಂಕ್ರಮಣದಿಂದಾಗಿ, ನೀವು ಹಣ ಸಂಪಾದಿಸಲು ಕಷ್ಟಪಡಬೇಕಾಗುತ್ತದೆ. ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ನೀವು ಕೋಪವನ್ನು ನಿಯಂತ್ರಿಸಿ. ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
ವೃಶ್ಚಿಕ ರಾಶಿ
ಸೂರ್ಯ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಸೂರ್ಯನ ಈ ಸಂಕ್ರಮಣದ ಪ್ರಭಾವದಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ, ಈ ಸಮಯದಲ್ಲಿ ನೀವು ಹೇಳುವ ಮಾತುಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಸೂರ್ಯ ದೇವರ ಮಂಗಳಕರ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು, ಡಿಸೆಂಬರ್ 16 ರವರೆಗೆ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ಇದರಿಂದ ಹೆಚ್ಚಿನ ಮಂಗಳಕರ ಫಲಿತಾಂಶ ಪಡೆಯಬಹುದು.
ಧನು ರಾಶಿ
ಧನು ರಾಶಿಯಲ್ಲಿ ಸೂರ್ಯ 12ನೇ ಮನೆಯಲ್ಲಿ ಇರಲಿದೆ. ಸೂರ್ಯನ ಸಂಚಾರದ ಸಮಯದಲ್ಲಿ ನೀವು ಹೆಚ್ಚಿನ ಸೌಕರ್ಯವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಆರ್ಥಿಕವಾಗಿ ಉತ್ತಮವಾಗಿದೆ. ಡಿಸೆಂಬರ್ 16 ರವರೆಗೆ, ನೀವು ನಿಮ್ಮ ಹಣವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸೂರ್ಯ ದೇವರ ಈ ಮಂಗಳಕರ ಸ್ಥಾನದ ಲಾಭವನ್ನು ಪಡೆಯಲು ಸೂರ್ಯೋದಯಕ್ಕೆ ಮುನ್ನ ಎದ್ದು ನಿಮ್ಮ ಮನೆ ಬಾಗಿಲು, ಕಿಟಕಿಗಳನ್ನು ತೆರೆದು ಸೂರ್ಯನ ಕಿರಣಗಳನ್ನು ಸ್ವಾಗತಿಸಿ.
ಮಕರ ರಾಶಿ
ಮಕರ ರಾಶಿಯಲ್ಲಿ ಸೂರ್ಯ 11ನೇ ಮನೆಯಲ್ಲಿ ಇರಲಿದೆ. ಜಾತಕದ ಹನ್ನೊಂದನೇ ಸ್ಥಾನವು ನಿಮ್ಮ ಆದಾಯ ಮತ್ತು ನಿಮ್ಮ ಇಚ್ಛೆಯ ನೆರವೇರಿಕೆಗೆ ಸಂಬಂಧಿಸಿದೆ. ಸೂರ್ಯನ ಈ ಸಂಕ್ರಮಣದಿಂದಾಗಿ ನಿಮ್ಮ ಆದಾಯದಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬರುವುದಿಲ್ಲ. ಖರ್ಚು ನೋಡಿಕೊಂಡು ಮಾಡಿದರೆ ಒಳ್ಳೆಯದು. ಮುಂದಿನ 30 ದಿನಗಳಲ್ಲಿ, ನಿಮ್ಮ ಆಸೆಗಳನ್ನು ಪೂರೈಸಲು ನೀವು ಹೆಚ್ಚಿನ ಶ್ರಮಹಾಕಬೇಕು.
ಕುಂಭ ರಾಶಿ
ಕುಂಬ ರಾಶಿಯಲ್ಲಿ ಸೂರ್ಯ 10ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸಂಕ್ರಮಣದಿಂದ, ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ನಿಮ್ಮ ವೃತ್ತಿಯಲ್ಲಿ ನೀವು ಪ್ರಗತಿ ಹೊಂದುವಿರಿ. ಹಲವಾರು ದಿನಗಳಿಂದ ಬಾಕಿ ಉಳಿದಿರುವ ಯಾವುದೇ ಆಡಳಿತಾತ್ಮಕ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದ್ದರಿಂದ, ಸೂರ್ಯ ದೇವರ ಮಂಗಳಕರ ಸ್ಥಾನವನ್ನು ಕಾಪಾಡಿಕೊಳ್ಳಲು, ನಿಮ್ಮ ತಲೆಯ ಮೇಲೆ ಬಿಳಿ ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಇಟ್ಟು ಮಲಗಿ. ಹಲವಾರು ದಿನಗಳಿಂದ ಬಾಕಿ ಉಳಿದಿರುವ ಯಾವುದೇ ಆಡಳಿತಾತ್ಮಕ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮೀನ ರಾಶಿ
ಮೀನ ರಾಶಿಯಲ್ಲಿ ಸೂರ್ಯ 9ನೇ ಮನೆಯಲ್ಲಿ ಇರಲಿದೆ. ಜಾತಕದ ಒಂಬತ್ತನೇ ಸ್ಥಾನವು ನಿಮ್ಮ ಅದೃಷ್ಟಕ್ಕೆ ಸಂಬಂಧಿಸಿದೆ,. ಸೂರ್ಯನ ಈ ಸಾಗಣೆ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ, ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. ಆದ್ದರಿಂದ, ಸೂರ್ಯನಿಂದ ಮತ್ತಷ್ಟು ಅದೃಷ್ಟವನ್ನು ಪಡೆಯಲು ಹಿತ್ತಾಳೆ ಪಾತ್ರೆಯಲ್ಲಿ ಆರ್ಘ್ಯ ಅರ್ಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











