ಧನು ಸಂಚಾರ: ಇದರ ಪ್ರಭಾವ ಯಾವ ರಾಶಿಗೆ ಹೇಗಿರಲಿದೆ?

ಸೂರ್ಯನು ಡಿಸೆಂಬರ್ 15ಕ್ಕೆ ಧನು ರಾಶಿಗೆ ಸಂಚರಿಸಿದಾಗ ದ್ವಾದಶ ರಾಶಿಗಳಲ್ಲಿ ಯಾವ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ನೋಡೋಣ ಬನ್ನಿ:

ಮೇಷ ರಾಶಿ
ಸೂರ್ಯನು ಧನು ರಾಶಿಗೆ ಸಂಚರಿಸಿದಾಗ ನಿಮ್ಮ ರಾಶಿಯಲ್ಲಿ 9ನೇ ಮನೆಯಲ್ಲಿ ಇರಲಿದ್ದಾನೆ, ಈ ಸಂಚಾರ ನಿಮಗೆ ಆರ್ಥಿಕ ಲಾಭ ತರಲಿದೆ, ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ಈ ಅವಧಿಯಲ್ಲಿ ನೀವು ಹೂಡಿಕೆಯಿಂದ ಉತ್ತಮ ಲಾಭ ಒಡೆಯುತ್ತೀರಿ. ಈ ಸಂಚಾರ ನಿಮ್ಮ ಸೌಕರ್ಯ ಕೂಡ ಹೆಚ್ಚಿಸಲಿದೆ.

Sun Transit in Sagittarius 2024

ವೃಷಭ ರಾಶಿ
ವೃತ್ತಿ ಬದುಕಿನಲ್ಲಿ ಅನೇಕ ಏರಳಿತವಿರಲಿದೆ,ಕೆಲಸದ ಜಾಗದಲ್ಲಿ ನೀವು ಒಳ ರಾಜಕೀಯದ ಬಗ್ಗೆ ಜಾಗ್ರತೆವಹಿಸಬೇಕು. ಕೆಲವೊಂದು ಪ್ರಕರಣಗಳನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥ ಮಾಡಲು ಯತ್ನಿಸಿದರೆನಿಮಗೆ ಒಳ್ಳೆಯದು.

ಮಿಥುನ ರಾಶಿ
ಈ ಸಂಚಾರ ನಿಮಗೆ ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ತುಂಬಾ ಒಳ್ಳೆಯದಿದೆ, ವ್ಯಾಪಾರಿಗಳು ಉತ್ತಮ ಲಾಭ ಗಳಿಸುತ್ತೀರಿ, ಆದರೆ ಹಣದ ವ್ಯವಹಾರದಲ್ಲಿ ಜಾಗ್ರತೆವಹಿಸಿ, ಸಾಲ ಮಾಡಲು ಹೋಗಬೇಡಿ.

ಕರ್ಕ ರಾಶಿ
ಈ ಸೂರ್ಯ ಸಂಚಾರ ಕರ್ಕ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅನುಕೂಲಕರ ಫಲಿತಾಂಶ ತರಲಿದೆ. ಆಸ್ತಿ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ಆದರೆ ನೀವು ಆರ್ಥಿಕವಾಗಿ ಗಮನಹರಿಸಬೇಕು, ದೊಡ್ಡ ಸಾಲದ ವ್ಯವಹಾರ ಮಾಡಲು ಹೋಗಬೇಡಿ.

ಸಿಂಹ ರಾಶಿ
ಸೂರ್ಯನು ಧನು ರಾಶಿಗೆ ಸಂಚರಿಸಿದಾಗ ನಿಮ್ಮ ರಾಶಿಯಲ್ಲಿ 5 ಮನೆಯಲ್ಲಿರುತ್ತಾನೆ. ಸೂರ್ಯನ ಪ್ರಭಾವದಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಬಡ್ತಿ ನಿರೀಕ್ಷೆಯಲ್ಲಿದ್ದರೆ ಈ ಅವಧಿಯಲ್ಲಿ ಸಿಗಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ನಿಮಗೆ ಉತ್ತಮವಾಗಿದೆ.

ಕನ್ಯಾ ರಾಶಿ
ಈ ಸೂರ್ಯ ಸಂಚಾರದ ಅವಧಿಯಲ್ಲಿ ನೀವು ಕುಟುಂಬ ಬದುಕಿನ ಕಡೆಗೆ ಗಮನಹರಿಸಬೇಕು,ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು, ನಿಮ್ಮ ಸಂಗಾತಿಯ ಭಾವನೆ ಗೌರವಿಸಿ.

ತುಲಾ ರಾಶಿ
ಈ ಅವಧಿಯಲ್ಲಿ ನೀವು ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ, ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ನೀವು ಧಾರ್ಮಿಕ ಕಾರ್ಯದಲ್ಲಿ ಒಲವು ತೋರಿಸುತ್ತೀರಿ, ಆರ್ಥಿಕ ದೃಷ್ಟಿಯಿಂದ ಈ ಸಮಯ ನಿಮಗೆ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ

ಸೂರ್ಯನು ಧನು ರಾಶಿಗೆ ಸಂಚರಿಸಿದಾಗ ಆ ಅವಧಿಯು ವೃಶ್ಚಿಕ ರಾಶಿಯವರಿಗೆ ತುಂಬಾನೇ ಅದ್ಭುತವಾಗಿರಲಿದೆ, ಕೆಲಸದ ಸ್ಥಳದಲ್ಲಿ ನೀವು ಅತ್ಯುತ್ತಮವಾದ ಅವಕಾಶ ಪಡೆಯುತ್ತೀರಿ, ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಲಿದೆ ಅಲ್ಲದೆ ಅದಕ್ಕೆ ನೀವು ಅದ್ಭುತವಾದ ಪ್ರತಿಫಲ ಕೂಡ ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದಲೂ ಸೂರ್ಯ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದ್ದಾನೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.

ಧನು ರಾಶಿ
ಸೂರ್ಯನು ನಿಮ್ಮ ಲಗ್ನ ಮನೆಯಲ್ಲಿ ಸಂಚರಿಸಲಿದ್ದಾನೆ. ಈ ಸಂಚಾರ ನಿಮಗೆ ಅನಕೂಲಕರ ಫಲಿತಾಂಶ ತರಲಿದೆ, ನ್ಯಾಯಾಲಯದ ಪ್ರಕರಣಗಳಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ, ಆರ್ಥಿಕವಾಗಿ ಈ ದಿನ ನಿಮಗೆ ತುಂಬಾನೇ ಉತ್ತಮವಾಗಿರಲಿದೆ. ನಿಮ್ಮ ಖ್ಯಾತಿ ಹೆಚ್ಚಾಗಲಿದೆ.

ಮಕರ ರಾಶಿ
ಮಕರ ರಾಶಿಯವರು ಈ ಸಮಯದಲ್ಲಿ ಆರ್ಥಿಕವಾಗಿ ತುಂಬಾನೇ ಜಾಗ್ರತೆವಹಿಸಬೇಕು,ಆರೋಗ್ಯದ ದೃಷ್ಟಿಯಿಂದಲ ಈ ಅವಧಿ ಅನುಕೂಲಕರವಲ್ಲ, ಮನೆಯ ವಾತಾವರಣ ಕೂಡ ಅಷ್ಟೊಂದು ಸಂತೋಷದಾಯಕವಾಗಿರಲ್ಲ.

ಕುಂಭ ರಾಶಿ
ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ಹಣಕ್ಕೆ ಸಂಬಂಧಿಸಿದ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ದೊರೆಯಲಿದೆ.

ಮೀನ ರಾಶಿ
ಮೀನ ರಾಶಿಯವರು ಕುಟುಂಬ ಜೀವನದ ಕಡೆ ಗಮನಹರಿಸಬೇಕು, ಆಸ್ತಿ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ವಾಹನ ಖರೀದಿಗೆ ಈ ಅವಧಿ ಅನುಕೂಲಕರವಾಗಿದೆ. ಸೂರ್ಯನು ಕರ್ಮದ ಮನೆಯಲ್ಲಿರುವಾಗ ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಫಲ ಸಿಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sun Transit in Sagittarius: Surya Sanchar In Dhanu Rashi Effects On Zodiac Signs In Kannada

Sun Transit in Sagittarius 2024:How It Effects On 12 Zodiac Signs In Kannada,
X
Desktop Bottom Promotion