Latest Updates
-
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ!
ಸೂರ್ಯ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶ ಮಾಡಿದಾಗ ಈ ರಾಶಿಯವರ ಸಮಸ್ಯೆ ದೂರಾಗಲಿದೆ, ಪ್ರಗತಿ ಕಂಡು ಬರಲಿದೆ
ಗ್ರಹಗಳು ರಾಶಿ ಬದಲಾವಣೆ ಮಾಡುವಂತೆ ನಕ್ಷತ್ರ ಬದಲಾವಣೆ ಕೂಡ ಮಾಡುತ್ತದೆ . ಸೂರ್ಯನು ಸೆಪ್ಟೆಂಬರ್ 16ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತದೆ. ಅಲ್ಲದೆ ಸೆಪ್ಟೆಂಬರ್ 30ಕ್ಕೆ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶ ಮಾಡುತ್ತದೆ. ಈ ನಕ್ಷತ್ರದ ಅಧಿಪತಿ ಶುಕ್ರ.
ಜ್ಯೋತಿಷ್ಯ ಪ್ರಕಾರ ಸೂರ್ಯ ಮತ್ತು ಶುಕ್ರನ ಸಂಬಂಧ ಅಷ್ಟೊಂದು ಅನುಕೂಲಕರವಲ್ಲ.
ಸೂರ್ಯ: ಜೀವನ, ಶಕ್ತಿ, ಆತ್ಮವಿಶ್ವಾಸ, ಶಕ್ತಿ, ಧೈರ್ಯದ ಗ್ರಹ
ಶುಕ್ರ: ಇದು ಪ್ರೀತಿ, ಹಣ, ಖುಷಿ, ಸೌಂದರ್ಯ, ಭೌತಿಕ ಸಂತೋಷದ ಸಂಕೇತ
ಹಾಗಾಗಿ ಈ ಎರಡು ಗ್ರಹಗಳ ಸಂಬಂಧ ಅನುಕೂಲಕರವಲ್ಲ.

ಹಾಗಾಗಿ ಸೂರ್ಯನು ಫಲ್ಗುಣಿ ನಕ್ಷತ್ರದಲ್ಲಿರುವ ಅವಧಿ ಕೆಲ ರಾಶಿಗಳಿಗೆ ಅನುಕೂಲಕರವಲ್ಲ, ಈ ಅವಧಿಯಲ್ಲಿ ಅ ರಾಶಿಯವರು ತುಂಬಾನೇ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಈ ಸಂಚಾರ ಕೆಲ ರಾಶಿಯವರಿಗೆ ಅನುಕೂಲಕರವಾಗಿದೆ.
ಮೇಷ ರಾಶಿ
ಮೇಷ ರಾಶಿಯವರ ಸಂಪತ್ತು ಹೆಚ್ಚಾಗಲಿದೆ, ಕೆಲಸದ ಜಾಗದಲ್ಲಿ ಉತ್ತಮ ಅವಕಾಶ ಸಿಗುವುದು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗುವುದು, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುವುದು. ಇನ್ನು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ನೀವು ಹೆಚ್ಚಿನ ಲಾಭ ಗಳಿಸಬಹುದು. ವ್ಯಾಪಾರದಲ್ಲಿ ಪ್ರಗತಿ ಕಂಡು ಬರುವುದು.
ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ. ನಿಮ್ಮ ಕುಟುಂಬದಲ್ಲಿನ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಎನಾದರೂ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಕೂಡ ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತೀರಿ, ಈ ಅವಧಿಯಲ್ಲಿ ಆರ್ಥಿಕ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆ ದೂರಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಗೌರವ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಉದ್ಯೋಗಿಗಳಿಗೂ ಈ ಸಮಯ ಉತ್ತಮವಾಗಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಹೊಸ ಯೋಜನೆಯಲ್ಲಿ ಕೆಲಸ ಪ್ರಾರಂಭಿಸಲು ಈ ಅವಧಿ ತುಂಬಾ ಉತ್ತಮವಾಗಿದೆ.
ವೈವಾಹಿಕ ಬದುಕು ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಪ್ರೀತಿ ಹೆಚ್ಚಾಗಲಿದೆ.
ಕನ್ಯಾರಾಶಿ
ಸೂರ್ಯ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶಸಿದಾಗ ಕನ್ಯಾ ರಾಶಿಯವರು ಎದುರಿಸುತ್ತಿರುವ ಸಮಸ್ಯೆಗಳು ದೂರಾಗುವುದು. ಈ ಅವಧಿಯಲ್ಲಿ ನೀವು ಬಯಸಿದಂತೆ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುವುದರಿಂದ ಖುಷಿಯಾಗಿರುತ್ತೀರಿ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರುವುದು. ಆದಾಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಆರ್ಥಿಕವಾಗಿ ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಈ ಸಮಯದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ನೀವು ತುಂಬಾ ಸಮಯದಿಂದ ವಾಹನ ಅಥವಾ ಆಸ್ತಿ ಖರೀದಿಸಲು ಬಯಸುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ತುಲಾ ರಾಶಿ
ಸೂರ್ಯನು ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದಾಗ ತುಲಾ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆಸ್ತಿ ಖರೀದಿಗೆ ಈ ಸಮಯ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
