Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೂರ್ಯನು ಧನು ರಾಶಿಯಲ್ಲಿರುವ ಈ ಸಮಯ 6 ರಾಶಿಗಳಿಗೆ ದೊಡ್ಡ ಚಿಂತೆ ಇರಲ್ಲ, ಅದ್ಭುತ ಸಮಯವಿದು
ಸೂರ್ಯನು ಧನು ರಾಶಿಗೆ ಸಂಚರಿಸಿದ್ದಾನೆ, ಈ ಧನು ಸಂಚಾರ ದ್ವಾದಶ ರಾಶಿಗಳ ಮೇಲೆ ಅದರ ಸ್ಥಾನಕ್ಕೆ ತಕ್ಕಂತೆ ಪ್ರಭಾವ ಬೀರಿದೆ. ಈ ಸಂಚಾರ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ. ಸೂರ್ಯನು ಜನವರಿ 14ರವರೆಗೆ ಸೂರ್ಯನು ಧನು ರಾಶಿಯಲ್ಲಿಯೇ ಇರಲಿದೆ. ಈ ಸಮಯದಲ್ಲಿ ಸೂರ್ಯ ದೇವನು ಈ ರಾಶಿಗಳ ಮೇಲೆ ಅನುಕೂಲಕರ ಪ್ರಭಾವ ಬೀರಲಿದೆ. ಧನು ರಾಶಿಯಲ್ಲಿ ಸೂರ್ಯ ಸಂಚಾರ ಯಾವೆಲ್ಲಾ ರಾಶಿಗಳಿಗೆ ಅನುಕೂಲಕರವಾಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಸೂರ್ಯನು ಧನು ರಾಶಿಯಲ್ಲಿರುವ ಈ ಅವಧಿ ಮೇಷ ರಾಶಿಯವರಿಗೆ ಅದೃಷ್ಟಕರವಾಗಿದೆ. ಈ ಹಿಂದಿಗಿಂತಲೂ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಈ ಅವಧಿ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ತಮ್ಮ ಸ್ಪರ್ಧಿಗಳಿಗಿಂತ ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಚೆನ್ನಾಗಿರಲಿದೆ.
ಮಿಥುನ ರಾಶಿ
ಡಿಸೆಂಬರ್ 15ರಿಂದ ಸೂರ್ಯ 15ನೇ ಮನೆಯಲ್ಲಿ ಇರಲಿದೆ, ಇದರಿಂದ ವೃತ್ತಿ ಜೀವನದ ದೃಷ್ಟಿಯಿಂದ ನಿಮಗೆ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆದರೆ ಈ ಸಮಯದಲ್ಲಿ ಯಾರಿಗೂ ಹೆಚ್ಚು ಹಣ ನೀಡದಂತೆ ಸಲಹೆ ನೀಡಲಾಗುವುದು. ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯವಿದ್ದರೆ ಆ ಮುನಿಸು ದೂರಾಗಲಿದೆ.
ತುಲಾ ರಾಶಿ
ಸೂರ್ಯ ಧನು ರಾಶಿಗೆ ಸಂಚಾರ ಮಾಡಿರುವ ಈ ಅವಧಿ ತುಲಾ ರಾಶಿಯವರಿಗೆ ಅನುಕೂಲಕರವಾಗಲಿದೆ. ಈ ಸಂಚಾರ ನಿಮ್ಮ ಧೈರ್ಯ-ಶೌರ್ಯ ಹೆಚ್ಚಿಸಲಿದೆ. ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ನಡೆಯುವುದರಿಂದ ಆತ್ಮವಿಶ್ವಾಸ ಬಲವಾಗಲಿದೆ. ಹಣಕಾಸಿನ ದೃಷ್ಟಿಯಿಂದ ಈ ಅವಧಿ ಚೆನ್ನಾಗಿರಲಿದೆ.
ಧನು ರಾಶಿ
ಸೂರ್ಯನು ನಿಮ್ಮ ಲಗ್ನ ಮನೆಯಲ್ಲಿರುವ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಸಮಯ ನಿಮಗೆ ತುಂಬಾ ಚೆನ್ನಾಗಿರಲಿದೆ. ನೀವು ಎಲ್ಲಾದರು ಕೆಲಸಕ್ಕೆ ಶ್ರಮಿಸಿದ್ದರೆ ಈ ಅವಧಿಯಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿದೆ. ನ್ಯಾಯಾಲಯದಲ್ಲಿ ಏನಾದರು ಪ್ರಕರಣವಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ 11ನೇ ಮನೆಯಲ್ಲಿದೆ. ಇದರಿಂದ ಸೂರ್ಯ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದೆ. ಆರ್ಥಿಕ ದೃಷ್ಟಿಯಿಂದ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ನಿಮಗೆ ಬರಬೇಕಾಗಿರುವ ಹಣ ಕೈ ಸೇರಲಿದೆ. ಗ್ರಹಗತಿಗಳ ಸ್ಥಾನ ಅನುಕೂಲಕರವಾಗಿರುವುದರಿಂದ ಈ ಸಮಯ ನಿಮಗೆ ತುಂಬಾನೇ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ
ಮೀನ ರಾಶಿ
ಈ ಸೂರ್ಯ ಸಂಚಾರ ಮೀನ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರಲಿದೆ. ಸೂರ್ಯ ನಿಮ್ಮ 10ನೇ ಮನೆಯಲ್ಲಿ ಇರಲಿದೆ. ಆಸ್ತಿ ಸಂಬಂಧಿಸಿದ ವಿವಾದವಿದ್ದರೆ ಅದು ಬಗೆಹರಿಯಲಿದೆ. ನೀವು ವಾಹನ ಖರೀದಿಸಲು ಬಯಸಿದರೆ ಈ ಅವಧಿ ಅನುಕೂಲಕರವಾಗಿರಲಿದೆ. ಆರ್ಥಿಕ ದೃಷ್ಟಿಯಿಂದಲೂ ಈ ಸೂರ್ಯ ಸಂಚಾರ ನಿಮಗೆ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
