Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕರ ರಾಶಿಗೆ ಸೂರ್ಯ ಸಂಚಾರ: ಯಾವ ರಾಶಿಗೆ ಹೇಗಿರಲಿದೆ ಇದೆ ಈ ಸಂಚಾರದ ಪ್ರಭಾವ?
ಸೂರ್ಯನು ಜನವರಿ 14ಕ್ಕೆ ಮಕರ ರಾಶಿಗೆ ಸಂಚರಿಸಲಿದೆ, ನಂತರ 30 ದಿನಗಳವರೆಗೆ ಅದೇ ರಾಶಿಯಲ್ಲಿ ಇರಲಿದೆ, ಸೂರ್ಯನು ಮಕರ ರಾಶಿಗೆ ಸಂಚಾರ ಮಾಡಿದಾಗ ಕೆಲ ರಾಶಿಗಳಿಗೆ ಅನುಕೂಲಕರ, ಇನ್ನು ಕೆಲವರಿಗೆ ಅಷ್ಟೊಂದು ಒಳ್ಳೆಯದಲ್ಲ, ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ
ಸೂರ್ಯ ಮಕರ ರಾಶಿಗೆ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೆಚ್ಚು ಒತ್ತಡಿರಲಿದೆ, ಆರ್ಥಿಕವಾಗಿ ನೋಡುವುದಾದರೆ ಈ ಅವಧಿ ಅನುಕೂಲಕರವಲ್ಲ, ನೀವು ಖರ್ಚಿನ ಕಡೆ ಹೆಚ್ಚಿನ ಗಮನಹರಿಸಬೇಕು. ಇನ್ನು ಕುಟುಂಬ ಬದುಕಿನಲ್ಲಿಯೂ ಕೆಲ ಭಿನ್ನಾಭಿಪ್ರಾಯ ಬರಬಹುದು, ನೀವು ಹೆಚ್ಚು ತಾಳ್ಮೆಯಿಂದ ವರ್ತಿಸಿ, ಅನಗ್ಯತ ವಿವಾದಗಳಲ್ಲಿ ಸಿಲುಕಿಕೊಳ್ಳದಂತೆ ಜಾಗ್ರತೆವಹಿಸಿ.
ವೃಷಭ ರಾಶಿ
ಈ ಸೂರ್ಯ ಸಂಚಾರ ವೃಷಭ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಚೆನ್ನಾಗಿದೆ, ಆದರೆ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಆರೋಗ್ಯದ ಬಗ್ಗೆ ನೋಡುವುದಾದರೆ ಅಲರ್ಜಿ ಸಮಸ್ಯೆವಿರಬಹುದು.
ಮಿಥುನ ರಾಶಿ
ಸೂರ್ಯನು ಮಕರ ರಾಶಿಯಲ್ಲಿರುವಾಗ ಸಂಬಂಧದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮ ನಡುವೆ ಏನೇ ಸಮಸ್ಯೆಯಾಗಿದ್ದರೆ ಮುಕ್ತ ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು. ವೃತ್ತಿ ಬದುಕಿನಲ್ಲಿ ಕೆಲಸದ ಹೊರೆ ಅಧಿಕವಿರಲಿದೆ. ಈ ಅವಧಿ ಆರ್ಥಿಕವಾಗಿ ನೀವು ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು, ಈ ಮಾಸ ನೀವು ಸ್ವಲ್ಪ ಜಾಗ್ರತೆವಹಿಸಿ.
ಕರ್ಕ ರಾಶಿ
ಸೂರ್ಯನು ಮಕರ ರಾಶಿಗೆ ಸಂಚರಿಸಿದ ಈ ಅವಧಿ ಕರ್ಕ ರಾಶಿಯವರಿಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿಯೂ ಈ ಸಮಯ ನಿಮಗೆ ಅನುಕೂಲಕರವಾಗಿದೆ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಆರ್ಥಿಕವಾಗಗಿ ಜಾಗ್ರತೆವಹಿಸುವುದು ಒಳ್ಳೆಯದು, ಖರ್ಚು ಹೆಚ್ಚಿರುವುದರಿಂದ ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಆರ್ಥಿಕವಾಗಿ ಈ ಅವಧಿ ಏರಳಿತದಿಂದ ಕೂಡಿರಲಿದೆ. ಇನ್ನು ಕೆಲಸದಲ್ಲಿಯೂ ಒತ್ತಡ ಅಧಿಕವಿರಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಏರಳಿತವಿರಬಹುದು, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಕನ್ಯಾ ರಾಶಿ
ಈ ಸಮಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು, ಅಲ್ಲದೆ ನಿಮ್ಮಲ್ಲಿ ಕೋಪ ಹೆಚ್ಚಾಗಬಹುದು. ವೃತ್ತಿ ಜೀವನದಲ್ಲಿ ಹಲವು ಅಡೆತಡೆಗಳು ಎದುರಾಗುವುದು. ಹಣದ ದೃಷ್ಟಿಯಿಂದ ನೋಡುವುದಾದರೆ ಹಣದ ಉಳಿತಾಯಕಷ್ಟವಾಗಬಹುದು, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ, ಕುಟುಂಬ ಬದುಕಿನಲ್ಲಿ ಸಮನ್ವಯ ಕಾಪಾಡಿಕೊಂಡು ಹೋಗಲು ಪ್ರಯತ್ನಿಸಿ.
ತುಲಾ ರಾಶಿ
ಸುರ್ಯನು ನಿಮ್ಮ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿರುವುದರಿಂದ ಸಂತೋಷ ತರಲಿದ್ದಾನೆ.ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳುವುದರಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ, ಈ ಸಮಯದ ಆರ್ಥಿಕವಾಗಿಯೂ ಉತ್ತಮವಾಗಿದೆ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಸಂಬಂಧದ ಕಡೆಗೆ ಗಮನಹರಿಸಬೇಕು. ಒಡಹುಟ್ಟಿದವರ ಜೊತೆಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ವ್ಯಾಪಾರಸ್ಥರಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ, ಹಣವನ್ನು ಉಳಿಸಲು ಸಾಧ್ಯವಾಗುವುದು. ಸೂರ್ಯನ ಪ್ರಭಾವದಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಧನು ರಾಶಿ
ಮಕರ ರಾಶಿಯವರಿಗೆ ಈ ಅವಧಿ ಅದೃಷ್ಟದಿಂದ ಕೂಡಿದೆ, ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿದ. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು, ಈ ಸಮಯದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ.
ಮಕರ ರಾಶಿ
ಸೂರ್ಯನು ಮಕರ ರಾಶಿಗೆ ಸಂಚರಿಸಿದಾಗ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಕೆಲಸದ ಒತ್ತಡ ಇರಲಿದೆ. ದೊಡ್ಡ ಹೂಡಿಕೆ ಬಗ್ಗೆ ಜಾಗ್ರತೆವಹಿಸಬೇಕು. ಆರೋಗ್ಯದ ಬಗ್ಗೆ ನೋಡುವುದಾದರೆ ಕಣ್ಣಿನ ಸಮಸ್ಯೆ ಅಥವಾ ಮೈಕೈ ನೋವಿನ ಸಮಸ್ಯೆವಿರಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ಅವಧಿಯಲ್ಲಿ ಯಾವುದೇ ಅನಗ್ಯತ ವಿವಾದಕ್ಕೆ ಸಿಲುಕಿಕೊಳ್ಳದಂತೆ ಜಾಗ್ರತೆವಹಿಸಿ. ಇನ್ನು ಈ ಸಮಯದಲ್ಲಿ ದೂರ ಪ್ರಯಾಣ ಮಾಡುವಾಗ ಹೆಚ್ಚು ಜಾಗ್ರತೆವಹಿಸಿ. ವೃತ್ತಿ ಬದುಕಿನಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ, ವ್ಯಾಪಾರಿಗಳು ಹೆಚ್ಚು ಜಾಗ್ರತೆವಹಿಸಬೇಕು. ಸಂಬಂಧದ ದೃಷ್ಟಿಯಿಂದಲೂ ಸೂರ್ಯನ ಪ್ರಭಾವ ಅಷ್ಟೊಂದು ಅನುಕೂಕರವಲ್ಲ.
ಮೀನ ರಾಶಿ
ಮೀನ ರಾಶಿಯವರು ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗುವುದು, ವ್ಯಾಪಾರಸ್ಥರು ಲಾಭ ಗಳಿಸುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಇರಲಿದೆ.ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಸಮಯನಿಮಗೆ ಅನುಕೂಲಕರವಾಗಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











