Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ದೇಶ-ಪ್ರಪಂಚದ ಮೇಲೆ ಬೀರುವ ಪ್ರಭಾವವೇನು?
ಜ್ಯೋತಿಷ್ಯದಲ್ಲಿ, ಸೂರ್ಯ ದೇವರನ್ನು ತಂದೆಯ ಅಂಶವೆಂದು ಹೇಳಲಾಗುವುದು, ಸೂರ್ಯ ಜನವರಿ 15ಕ್ಕೆ ಮಕರ ರಾಶಿಗೆ ಸಂಚರಿಸಲಿದೆ. ಆದರೆ ಮಕರ ರಾಶಿಯ ಅಧಿಪತಿ ಶನಿ. ಸೂರ್ಯ ಹಾಗೂ ಶನಿ ಪರಸ್ಪರ ಶತ್ರು ಗ್ರಹಗಳು ಎಂದು ಹೇಳಲಾಗುವುದು. ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಅದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಇರಲಿದೆ.

ಮಕರ ರಾಶಿಯಲ್ಲಿ ಸೂರ್ಯ ಸಂಚಾರ ದೇಶ ಮತ್ತು ಪ್ರಪಂಚದ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ:
ಸರ್ಕಾರ ಮತ್ತು ರಾಜಕೀಯ
ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ, ಅದು ಶನಿ ಅಧಿಪತಿಯಾಗಿರುವ ಮಕರ ರಾಶಿಗೆ ಸಂಚರಿಸಲಿದೆ, ಆ ಸಮಯದಲ್ಲಿ ಭಾರತ ಸೇರಿದಂತೆ ವಿಶ್ವದ ರಾಜಕೀಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಕಾಣಬಹುದು. ಆದರೆ ಈ ಬದಲಾವಣೆಗಳು ಸಕಾರಾತ್ಮಕವಾಗಿರುತ್ತವೆ. ಇದಲ್ಲದೆ, ದೇಶ ಮತ್ತು ಪ್ರಪಂಚದಲ್ಲಿ ಸರ್ಕಾರ ಮತ್ತು ಆಡಳಿತದಲ್ಲಿ ಸುಧಾರಣೆಗಳು ಕಂಡುಬರುತ್ತವೆ.
ಸೂರ್ಯನು ಶನಿಯ ಮಕರ ರಾಶಿಗೆ ಪ್ರವೇಶಿಸಿದಾಗ, ದೇಶದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುತ್ತದೆ.
ಮಕರ ರಾಶಿಯಲ್ಲಿ ಸೂರ್ಯನ ಸಂಚಾರವು ಯುದ್ಧವನ್ನು ಎದುರಿಸುತ್ತಿರುವ ಪ್ರಪಂಚದಾದ್ಯಂತದ ದೇಶಗಳಿಗೆ ಪರಿಹಾರವನ್ನು ನೀಡುತ್ತದೆ.
ಸೂರ್ಯನ ಈ ಸಂಕ್ರಮಣವು ನ್ಯಾಯಾಧೀಶರು ಮತ್ತು ವಕೀಲರಿಗೆ ಫಲದಾಯಕವಾಗಿರುತ್ತದೆ. ಈ ಅವಧಿಯಲ್ಲಿ ನ್ಯಾಯಾಲಯದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಸಾಮಾಜಿಕ ಕೆಲಸ
ಮಕರ ಸಂಕ್ರಾಂತಿಯಲ್ಲಿ ಸೂರ್ಯನ ಸಂಚಾರವು ಎನ್‌ಜಿಒಗಳು ಮತ್ತು ದತ್ತಿ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ.
ಶನಿ ಮಹಾರಾಜನ ರಾಶಿಯಾದ ಮಕರ ರಾಶಿಗೆ ಸೀರ್ಯ ಸಂಚರಿಸಿದಾಗ ಪ್ರಪಂಚದಾದ್ಯಂತ ದಾನವನ್ನು ಉತ್ತೇಜಿಸುತ್ತದೆ.
ಷೇರು ಮಾರುಕಟ್ಟೆ ಭವಿಷ್ಯ
ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದಾಗ ಷೇರು ಮಾರುಕಟ್ಟೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ರಾಸಾಯನಿಕ ಗೊಬ್ಬರ, ಚಹಾ, ಕಾಫಿ, ಸ್ಟೀಲ್ ಮತ್ತು ಉಣ್ಣೆಗೆ ಸಂಬಂಧಿಸಿದ ಕೈಗಾರಿಕೆಗಳು ವೇಗವನ್ನು ಪಡೆಯುತ್ತವೆ.ರಿಲಯನ್ಸ್, ಸುಗಂಧ ದ್ರವ್ಯ, ಕಾಸ್ಮೆಟಿಕ್, ಕಂಪ್ಯೂಟರ್ ಸಾಫ್ಟ್‌ವೇರ್ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಇತರ ಉದ್ಯಮಗಳಲ್ಲಿ ತಿಂಗಳ ಅಂತ್ಯದವರೆಗೆ ಹಿಂಜರಿತ ಮುಂದುವರಿಯುವ ಸಾಧ್ಯತೆಯಿದೆ.
ಈ ಅವಧಿಯಲ್ಲಿ ಎನ್‌ಜಿಒಗಳು ಮತ್ತು ದತ್ತಿ ಸಂಸ್ಥೆಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ.
ಸೂರ್ಯನ ಮಕರ ಸಂಕ್ರಮಣದಿಂದಾಗಿ ಚಿನ್ನದ ಬೆಲೆ ಹೆಚ್ಚಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











