Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ಶಿವರಾತ್ರಿಗೂ ಮುನ್ನವೇ.. ಈ 3 ರಾಶಿಯವರಿಗೆ ಕುಬೇರ ಯೋಗ! ಕೆಲಸದಲ್ಲಿ ಬಡ್ತಿ.. ಸ್ವಂತ ಮನೆ ಕನಸು ನನಸು
ಕೆಲಸದಲ್ಲಿ ಬಡ್ತಿ, ಕೈತುಂಬಾ ಹಣ! ಸೂರ್ಯ ಸಂಚಾರದಿಂದ ಈ ಮೂರು ರಾಶಿಯವರಿಗೆ ಕುಬೇರ ಯೋಗ. ಮನೆ ಮತ್ತು ಉದ್ಯೋಗದ ಕನಸು ನನಸಾಗುವ ಸಮಯ. ಹೌದು, ಗ್ರಹಗಳ ಅಧಿಪತಿ ಸೂರ್ಯನು (Surya Gochar 2026) ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಿಸುತ್ತಾನೆ. 2026ರ ಫೆಬ್ರವರಿ 13ರಂದು ಸೂರ್ಯ ಗ್ರಹವು ಶನಿ ದೇವನ ಸ್ವಂತ ರಾಶಿಯಾದ ಕುಂಭಕ್ಕೆ ಪ್ರವೇಶಿಸಿದೆ.
ಈ ಸಂಕ್ರಮಣವು ಹಲವು ವಿಶಿಷ್ಟ ಯೋಗಗಳನ್ನು ಸೃಷ್ಟಿಸಲಿದ್ದು, ಕುಂಭ ರಾಶಿಯಲ್ಲಿ ಈಗಾಗಲೇ ಇತರ ಪ್ರಮುಖ ಗ್ರಹಗಳ ಉಪಸ್ಥಿತಿ ಚತುರ್ಗ್ರಹಿ ಅಥವಾ ಪಂಚಗ್ರಹಿ ಯೋಗಗಳಿಗೆ ಕಾರಣವಾಗಲಿದೆ. ಸೂರ್ಯ ದೇವನು ಆತ್ಮವಿಶ್ವಾಸ, ಯಶಸ್ಸು ಮತ್ತು ಅಧಿಕಾರದ ಪ್ರತೀಕವಾಗಿದೆ. ಕುಂಭ ರಾಶಿಗೆ ಸೂರ್ಯನ (Sun Transit in Aquarius 2026) ಈ ಪ್ರವೇಶವು ಕೆಲವು ನಿರ್ದಿಷ್ಟ ರಾಶಿಗಳಿಗೆ ರಾಜಯೋಗವನ್ನು ತರಲಿದೆ.

ವಿಶೇಷವಾಗಿ ಈ ಮೂರು ರಾಶಿಯವರು (Sun Transit impact on your zodiac sign) ಈ ಅವಧಿಯಲ್ಲಿ ಆರ್ಥಿಕವಾಗಿ ಮತ್ತು ವೃತ್ತಿಜೀವನದಲ್ಲಿ ಹೊಸ ಎತ್ತರಗಳನ್ನು ತಲುಪುವ ಸಾಧ್ಯತೆ ಇದೆ. ಈ ಮೂರು ರಾಶಿಗಳವರ ಮನೆ ಮತ್ತು ಉದ್ಯೋಗದ ಕನಸುಗಳು ನನಸಾಗುವ ಸಮಯವಿದು.
ಮೇಷ: ಶ್ರಮಕ್ಕೆ ಫಲ
ಸೂರ್ಯನ ಈ ಸಂಚಾರವು ಅದೃಷ್ಟದ ಬಾಗಿಲು ತೆರೆಯಲಿದೆ. ಉದ್ಯೋಗದಲ್ಲಿರುವವರಿಗೆ ಕಚೇರಿಯಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಅವರ ಕಠಿಣ ಪರಿಶ್ರಮವನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಗೌರವಿಸುತ್ತಾರೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಹಣಕಾಸಿನ ಸ್ಥಿತಿ ಗಣನೀಯವಾಗಿ ಸುಧಾರಿಸಲಿದ್ದು, ದೀರ್ಘಕಾಲಿಕ ಹೂಡಿಕೆಗಳು ಹೆಚ್ಚಿನ ಲಾಭವನ್ನು ತಂದುಕೊಡಲಿವೆ.
ಈ ಅವಧಿಯಲ್ಲಿ ವಿದೇಶ ಪ್ರವಾಸ ಅಥವಾ ದೂರದ ಪ್ರಯಾಣದ ಯೋಗವಿದೆ. ಇಂತಹ ಪ್ರಯಾಣಗಳು ವ್ಯವಹಾರದಲ್ಲಿ ಹೊಸ ಅನುಭವ ಮತ್ತು ಆರ್ಥಿಕ ಲಾಭ ಎರಡನ್ನೂ ತರುತ್ತವೆ. ಮೇಷ ರಾಶಿಯವರ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ, ಇದು ಹೊಸ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದೆ.
ತುಲಾ: ಸ್ವಂತ ಮನೆ
ಸೂರ್ಯನ ಈ ಸಂಚಾರವು ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ತರುವ ಸಾಧ್ಯತೆ ಇದೆ. ಸ್ವಂತ ಮನೆ ಅಥವಾ ವಾಹನ ಖರೀದಿ ಸಬೇಕೆಂಬ ನಿಮ್ಮ ಬಹುದಿನದ ಕನಸು ಈ ಅವಧಿಯಲ್ಲಿ ನನಸಾಗಬಹುದು. ಆಸ್ತಿಯ ಮೇಲೆ ಮಾಡುವ ಯಾವುದೇ ಹೂಡಿಕೆಯು ಭವಿಷ್ಯದಲ್ಲಿ ದೊಡ್ಡ ಲಾಭ ತರುವ ಸಾಧ್ಯತೆಯಿದೆ. ಮನೆಯ ವಾತಾವರಣವು ಶಾಂತಿಯುತವಾಗಿರುತ್ತದೆ. ವಿಶೇಷವಾಗಿ ಮಕ್ಕಳಿಂದ ಶುಭ ವಾರ್ತೆಗಳು ಕೇಳಿಬರಲಿವೆ.
ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ ಎಂದು ಜ್ಯೋತಿಷ್ಯ ತಿಳಿಸಿದೆ. ಬಾಕಿ ಇರುವ ಕಾನೂನು ಕೆಲಸಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಒಟ್ಟಾರೆಯಾಗಿ, ಈ ಕಾಲಘಟ್ಟದಲ್ಲಿ ಕು ಟುಂಬ ಮತ್ತು ವೃತ್ತಿ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಎ ದುರಿಸುತ್ತೀರಿ.
ಕುಂಭ: ಹೊಸ ಹಾದಿ
ಸೂರ್ಯನು ಸ್ವತಃ ಕುಂಭ ರಾಶಿಗೆ ಪ್ರವೇಶಿಸುತ್ತಿರುವುದರಿಂದ, ಈ ರಾಶಿಯವರಿಗೆ ಇದು ಅತ್ಯಂತ ಪ್ರಭಾವಶಾಲಿ ಸಮಯ. ನಿಮ್ಮ ಮಾತು ಮತ್ತು ನಾಯಕತ್ವ ಗುಣದಿಂದ ಜನರನ್ನು ಆಕರ್ಷಿಸುವಿರಿ. ಹೊಸ ಜನರೊಂದಿಗೆ ಸಂಪರ್ಕ ಬೆಳೆ ಯ ಲಿದ್ದು, ಇದು ಭವಿಷ್ಯದ ವ್ಯವಹಾರಕ್ಕೆ ಹೊಸ ಮಾರ್ಗಗಳನ್ನು ತೆರೆಯಲಿದೆ. ಹೊಸ ವ್ಯಾಪಾರ ಅಥವಾ ಕೆಲಸವನ್ನು ಪ್ರಾರಂಭಿಸಲು ಇದು ಒಂದು ಸುವರ್ಣಾವಕಾಶ. ನೀವು ಕೈಗೊಳ್ಳುವ ಪ್ರತಿ ಹೆಜ್ಜೆಯಲ್ಲೂ ಸೂರ್ಯ ದೇವರ ಆಶೀರ್ವಾದ ದೊರೆಯಲಿದೆ.
ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೌಶಲ್ಯಗಳಿಗೆ ತಕ್ಕ ಮನ್ನಣೆ ಸಿಗಲಿದೆ. ಹಿರಿಯ ಅಧಿಕಾರಿಗಳ ಬೆಂಬಲವು ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದ್ದು, ಸಮುದಾಯದಲ್ಲಿ ಹೆಚ್ಚಿನ ಗೌರವ ಗಳಿಸುತ್ತೀರಿ.
ಸೂರ್ಯ ದೇವನ ಅನುಗ್ರಹಕ್ಕಾಗಿ ಪರಿಹಾರಗಳು
- ಸೂರ್ಯ ಗೋಚರದ ಸಂಪೂರ್ಣ ಲಾಭ ಪಡೆಯಲು ಭಕ್ತರು ಕೆಲವು ಸರಳ ಪರಿಹಾರಗಳನ್ನು ಅನುಸರಿಸಬಹುದು.
- ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ತಾಮ್ರದ ಪಾತ್ರೆಯಲ್ಲಿ ಸೂರ್ಯನಿಗೆ ನೀರನ್ನು (ಅರ್ಘ್ಯ) ಅರ್ಪಿಸಿ.
- 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸುವುದು ಶುಭಕರ.
- ಭಾನುವಾರದಂದು ಗೋಧಿ ಅಥವಾ ಬೆಲ್ಲವನ್ನು ದಾನ ಮಾಡುವುದು ಸಹ ಮಂಗಳಕರ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











