Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗೋಚಾರ 2025: ಈ 6 ರಾಶಿಗಳ ಮೇಲೆ ಧನಾತ್ಮತ-ಋಣಾತ್ಮಕ ಪರಿಣಾಮ...!
ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯ ನಮ್ಮ ಗ್ರಹಗಳ ಪ್ರಮುಖ ಹಾಗೆ ಕೇಂದ್ರ ಬಿಂದು ಎಂದು ಪರಿಗಣಿಸಲಾಗಿದೆ. ಸೂರ್ಯನ ಸಂಚಾರದಿಂದ ಪ್ರತಿಯೊಂದು ರಾಶಿಯಲ್ಲೂ ಬದಲಾವಣೆಗಳ ನೋಡಬಹುದು. ಹಾಗೆ ಇಂದು ಸೂರ್ಯನು ವೃಷಭ ರಾಶಿಗೆ ಚಲಿಸಲಿದ್ದಾನೆ. ಹೀಗಾಗಿ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಮೇಷ ರಾಶಿಯಲ್ಲಿ ಸೂರ್ಯನ ಸ್ಥಾನವು ಒಳ್ಳೆಯ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಮೇಷ ರಾಶಿಯಲ್ಲಿ ಸೂರ್ಯನ ಸಂಚಾರವು ಎಲ್ಲಾ 12 ರಾಶಿ ಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಸೂರ್ಯ ಸಂಚಾರದ ಪರಿಣಾಮವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಸೂರ್ಯನು ನಿಮ್ಮ ಜಾತಕದ ಐದನೇ ಮನೆಯ ಅಧಿಪತಿಯಾಗಿದ್ದು ಮೊದಲ ಮನೆಯಲ್ಲಿ ಸೂರ್ಯ ಸಂಚಾರ ಇರಲಿದೆ. ಇದರಿಂದ ಹಲವು ಸಮಯದಿಂದ ನಿಮ್ಮ ಆತಂಕಕ್ಕೆ ಕಾರಣವಾದ ವಿಚಾರವೊಂದು ನಿವಾರಣೆಯಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಹಲವು ಕಾರ್ಯಗಳ ಮಾಡುವಿರಿ. ಇದರಿಂದ ಸಕಾರಾತ್ಮಕ ಫಲಿತಾಂಶಗಳ ನೋಡುವಿರಿ. ಪ್ರೇಮ ಸಂಬಂಧಗಳು ಹಾಗೆ ದಾಂಪತ್ಯದಲ್ಲಿ ಶಾಂತತೆ ಇರಲಿದೆ. ನಿಮ್ಮ ದೈನಂದಿನ ಕೆಸಗಳಲ್ಲಿ ಯಶಸ್ಸು ನೋಡಬಹುದು.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಸೂರ್ಯನು ನಾಲ್ಕನೇ ಮನೆಯ ಅಧಿಪತಿ. ಆದರೆ ಈಗ 12ನೇ ಮನೆಯಲ್ಲಿ ಸಂಚರಿಸುತ್ತಾನೆ. ಇದರಿಂದ ಮನೆಯ ಖರ್ಚುಗಳ ನಿಭಾಯಿಸುವುದು ಸುಲಭವಾಗುತ್ತದೆ. ವಿವಾದಗಳು ಜಗಳಗಳು ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿಯೂ ಜಾಗರೂಕರಾಗಿರಿ. ಈ ಸಮಯದಲ್ಲಿ ಯಾರಿಗೂ ಹೆಚ್ಚು ಸಾಲ ನೀಡಬೇಡಿ. ಇಲ್ಲದಿದ್ದರೆ ನಿಮಗೆ ಸಮಯಕ್ಕೆ ಸರಿಯಾಗಿ ಹಣ ಸಿಗುವುದಿಲ್ಲ. ಆದ್ರೆ ನಿಮ್ಮ ಕೆಲಸದಲ್ಲಿ ಯಶಸ್ಸು ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸೂರ್ಯನು ಮೂರನೇ ಮನೆಯ ಅಧಿಪತಿಯಾಗಿದ್ದು. 11ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದ ಮೂಲದಲ್ಲಿ ಹೆಚ್ಚಳ ಆಗುವುದು ನೋಡಬಹುದು. ನಿಮ್ಮ ಮನೆಯಲ್ಲಿದ್ದ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ. ದೀರ್ಘಕಾಲದವರೆಗೆ ನೀಡಿದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ನಿಮ್ಮ ಸಮಸ್ಯೆಗಳ ಬಗೆಹರಿಸಲು ನೀವು ಬಯಸಿದಂತೆ ಹಣಕಾಸಿನ ನೆರವು ಕೂಡ ಸಿಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಎರಡನೇ ಮನೆಯ ಅಧಿಪತಿಯಾದ ಸೂರ್ಯನು ಈಗ ಹತ್ತನೇ ಮನೆಗೆ ಸಾಗಲಿದ್ದಾನೆ. ಇದರಿಂದ ಪ್ರತಿಯೊಂದು ವ್ಯಾಪಾರಿಗಳಲ್ಲಿ ಯಶಸ್ಸು ಗಳಿಸಬಹುದು. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ, ಮತ್ತು ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕಾದರೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಎಲ್ಲಾ ಕೆಲಸಗಳಲ್ಲಿ ನಿಮ್ಮ ಪರವಾದ ಒಲವು ನೋಡಬಹುದು.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಅಧಿಪತಿಯಾದ ಸೂರ್ಯನು ಈಗ ಒಂಬತ್ತನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ನಿಮ್ಮಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ ಆಸಕ್ತಿ ಹೆಚ್ಚಾಗುತ್ತದೆ. ಧಾರ್ಮಿಕ ಚಟುವಟಿಕೆಗಳು ದಾನ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ಶುಭ ಕಾರ್ಯಗಳ ಮೂಲಕ ಶಾಂತಿಗೆ ಕಾರಣವಾಗಲಿದ್ದೀರಿ. ಹಾಗೆ ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಏನಾದರು ಸಣ್ಣ ಮನಸ್ತಾಪ ಇದ್ದರೆ ಈ ಸಮಯದಲ್ಲಿ ಕುಳಿತು ಶಾಂತವಾಗಿ ಬಗೆಹರಿಸಿಕೊಳ್ಳಿ. ಇಲ್ಲವೆ ಅದನ್ನು ಮರೆತುಬಿಡಿ.
ಕನ್ಯಾ ರಾಶಿ
ಕನ್ಯಾ ರಾಶಿ 12 ನೇ ಮನೆಯ ಅಧಿಪತಿಯಾದ ಸೂರ್ಯನು ಈಗ 8ನೇ ಮನೆಗೆ ಚಲಿಸಲಿದ್ದಾನೆ. ಇದರಿಂದ ಈ ರಾಶಿಯವರಲ್ಲಿ ಹೆಚ್ಚಿನವರಿಗೆ ಲಾಭದಾಯಕವಾಗಿರುವುದಿಲ್ಲ ಆದರೆ ಬಹುತೇಕರಲ್ಲಿ ಸಮಸ್ಯೆಗಳು ಬಗೆಹರಿಯುವ ಎಲ್ಲಾ ಲಕ್ಷಣಗಳಿವೆ. ಆಸ್ಪತ್ರೆಗಳು, ಔಷಧಿಗಳ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮ ವೈಫಲ್ಯಗಳಿಂದ ನೀವು ಕಲಿಯುತ್ತೀರಿ. ಪ್ರವಾಸದಂತಹ ಕೆಲಸಕ್ಕೆ ಮುಂದಾಗುವ ಮುನ್ನ ಆಲೋಚಿಸಿ ಏಕೆಂದರೆ ಪ್ರಯಾಣದಿಂದ ಹಲವು ರೀತಿ ಸಮಸ್ಯೆ ಎದುರಿಸಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications