30 ವರ್ಷಗಳ ಬಳಿಕ ಸಮಸಪ್ತಕ ಯೋಗ: ಈ 4 ರಾಶಿಯವರು ಹೆಚ್ಚು ಪ್ರಯೋಜನ ಪಡೆಯುವಿರಿ

ಶನಿ ಮತ್ತು ಸೂರ್ಯನಿಂದಾಗಿ ಸಮಸಪ್ತಕ ಯೋಗ ಉಂಟಾಗಿದೆ. ಆಗಸ್ಟ್‌ 16ಕ್ಕೆ ಸೂರ್ಯನು ಸಿಂಹ ರಾಶಿಗೆ ಸಂಚರಿಸಿದೆ, ಸೆಪ್ಟೆಂಬರ್‌ 16ರವರೆಗೆ ಇದೇ ರಾಶಿಯಲ್ಲಿ ಇರಲಿದೆ, ಸೆಪ್ಟೆಂಬರ್ ಬೆಳಗ್ಗೆ 7:22ಕ್ಕೆ ಕನ್ಯಾ ರಾಶಿಗೆ ಸಂಚರಿಸುವುದು.

ಇದೀಗ ಸೂರ್ಯ ಸಿಂಹ ರಾಶಿಯಲ್ಲಿದೆ, ಶನಿಯು ಕುಂಭ ರಾಶಿಯಲ್ಲಿದೆ ಜ್ಯೋತಿಷ್ಯದ ಪ್ರಕಾರ ಈ ಸಮಯದಲ್ಲಿ ಈ ಎರಡೂ ಗ್ರಹಗಳು 180 ಡಿಗ್ರಿ ಕೋನದಲ್ಲಿ ಬಂದಿರುತ್ತದೆ, ಅಲ್ಲದೆ ಶನಿಯು ಸಿಂಹದಲ್ಲಿ 7ನೇ ಮನೆಯಲ್ಲಿದ್ದರೆ, ಸೂರ್ಯನು ಕುಂಭ ರಾಶಿಯಲ್ಲಿ 7ನೇ ಮನೆಯಲ್ಲಿ ಇದೆ, ಇದರಿಂದಾಗಿ ಸಮಸಪ್ತಕ ಯೋಗ ಉಂಟಾಗಿದೆ.

Samasaptak Yog

ಮತ್ತೊಂದು ವಿಶೇಷವೆಂದರೆ ಸುಮಾರು 30 ವರ್ಷಗಳ ಬಳಿಕ ಈ ಯೋಗ ಸಿಂಹ ರಾಶಿಯಲ್ಲಿ ಸೂರ್ಯ, ಕುಂಭದಲ್ಲಿ ಶನಿಯಿಂದಾಗಿ ಉಂಟಾಗಿದೆ. ಈ ಯೋಗದ ಪ್ರಯೋಜ ಈ ರಾಶಿಗಳ ಮೇಲೆ ಹೆಚ್ಚಿರಲಿದೆ ನೋಡಿ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಯೋಗದಿಂದಾಗಿ ತುಂಬಾನೇ ಒಳ್ಳೆಯದು, ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ತುಂಬಾನೇ ಅಧಿಕ ಪ್ರಯೋಜನ ಪಡೆಯುತ್ತೀರಿ, ವೃತ್ತಿ ಬದುಕಿನಲ್ಲಿನ ಅಡೆತಡೆಗಳು ದೂರಾಗಲಿದೆ. ಆರ್ಥಿಕ ಭದ್ರತೆ ಅನುಭವಿಸುವಿರಿ.

ವೃತ್ತಿ ಬದುಕಿನಲ್ಲಿ ನೀವು ಊಹಿಸಿದಂತೆಯೇ ಪ್ರಯೋಜನಗಳನ್ನು ಪಡೆಯುತ್ತೀರಿ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ಹೊಸ ವ್ಯವಹಾರ ಪ್ರಾರಂಭಿಸಿದ್ದರೆ ಅದರಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಸೂರ್ಯ ಹಾಗೂ ಶನಿಯಿಂದ ಉಂಟಾದ ಈ ಸಮಸಪ್ತಕ ಯೋಗ ನಿಮ್ಮ ವೃತ್ತಿ ಬದುಕಿನಲ್ಲಿ ಭದ್ರತೆಯ ಭಾವ ಮೂಡಿಸಲಿದೆ.

ಮಿಥುನ ರಾಶಿ

ಸೂರ್ಯ ಮತ್ತು ಶನಿಯಿಂದ ಉಂಟಾದ ಸಮಸಪ್ತಕ ಯೋಗದಿಂದ ಮಿಥುನ ರಾಶಿಯವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ಉತ್ತಮ ಪ್ರಯೋಜನ ಪಡೆಯುತ್ತೀರಿ, ಅಲ್ಲದೆ ಈ ಅವಧಿಯಲ್ಲಿ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯವಾಗುವುದು. ಆರ್ಥಿಕವಾಗಿ ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತೀರಿ, ನಿಮ್ಮ ಪ್ರತಿಯೊಂದು ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತೀರಿ.
ಖರ್ಚು ಕಡಿಮೆ ಇರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು, ಕುಟುಂಬದೊಂದಿಗೆ ಸಂತೋಷವಾಗಿ ಇರುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೂ ಈ ಸಮಸಪ್ತಕ ಯೋಗ ತುಂಬಾ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಇರುವುದರಿಂದ ನಿಮ್ಮ ಪ್ರಯತ್ನಕ್ಕೆ ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ. ಈ ಸಮಯದಲ್ಲಿ ಅದಿಕ ಖರ್ಚುಗಳು ಕೂಡ ಇರಲ್ಲ, ಹಾಗಾಗಿ ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ.

ಕುಂಭ ರಾಶಿ

ಶನಿ ಮತ್ತು ಸೂರ್ಯನಿಂದ ರೂಪುಗೊಂಡ ಸಮಸಪ್ತಕ ಯೋಗವು ಕುಂಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಅವಧಿ ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ತುಂಬಾ ಉತ್ತಮವಾಗಿದೆ. ಕೆಲಸ ಹುಡುಕುತ್ತಿದ್ದರೆ ಅಥವಾ ಕೆಲಸದ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ತುಂಬಾ ಉತ್ತಮವಾಗಿರಲಿದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sun Surya Formed Samasaptak Yog: Benefits To These 4 Zodiac Signs

Sun Surya Formed Samasaptak Yog after 30 years: these 4 zodiac gets more benefits,
Story first published: Tuesday, August 20, 2024, 21:26 [IST]
X
Desktop Bottom Promotion