Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಸೂರ್ಯ-ಶನಿಯಿಂದ ನವಪಂಚಮಿ ಯೋಗ: ಲಾಭ ಪಡೆಯೋದು ಇದೇ ಮೂರು ರಾಶಿ..!!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರ ಮತ್ತು ರಾಶಿಗಳು ಮತ್ತು ನಕ್ಷತ್ರಗಳ ನಡುವಿನ ಬದಲಾವಣೆಗಳು, ಸ್ಥಾನ ಪಲ್ಲಟವನ್ನು ಅತ್ಯಂತ ಶುಭಕರ ಹಾಗೆ ಪ್ರಮುಖ ವಿದ್ಯಮಾನಗಳಾಗಿ ಪರಿಗಣಿಸಲಾಗಿದೆ. ಈ ಕಾರಣದಿಂದಾಗಿಯೇ ಶುಭ ಹಾಗೂ ಅಶುಭ ಯೋಗಗಳು ಉಂಟಾಗುವುದನ್ನು ನಾವು ನೋಡಬಹುದು. ಹಾಗೆ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದರಿಂದ ವ್ಯಕ್ತಿಯೊಬ್ಬರ ಜೀವನದಲ್ಲಿ ಹಲವು ರೀತಿಯ ಬದಲಾವಣೆ ನೋಡಲು ಸಾಧ್ಯವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ನಾವು ಸೂರ್ಯನನ್ನು ಕೇಂದ್ರ ಗ್ರಹ, ರಾಜ ಗ್ರಹವೆಂದು ಪರಿಗಣಿಸಿದರೆ ಶನಿಯನ್ನು ಕರ್ಮ ಫಲದ ಗ್ರಹ ಎಂದು ಪರಿಗಣಿಸಿದ್ದೇವೆ.
ಸೂರ್ಯ ಮತ್ತು ಶನಿ ಎರಡೂ ಕೂಡ ಶಕ್ತಿಶಾಲಿ ಗ್ರಹಗಳೆಂದು ಪರಿಗಣಿಸಲಾಗಿದೆ. ಅವುಗಳ ಚಲನೆಗಳು ಎಲ್ಲಾ ರಾಶಿ ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಶನಿ ನ್ಯಾಯವನ್ನು ನೀಡುವವನು, ಆದರೆ ಸೂರ್ಯ ಗ್ರಹಗಳ ಅಧಿಪತಿ ಎಂಬ ವಿವರಣೆ ಕೂಡ ಇದೆ.

ಹಾಗೆ ವೈದಿಕ ಶಾಸ್ತ್ರದಲ್ಲಿ ಸೂರ್ಯನನ್ನು ಶನಿಯ ತಂದೆ ಅಂತಲೂ ಕರೆಯಲಾಗಿದೆ. ಈಗ ಈ ಎರಡೂ ಗ್ರಹಗಳು 120 ಡಿಗ್ರಿಯಲ್ಲಿ ಚಲಿಸುವುದರಿಂದ
ಹೊಸ ರೀತಿಯ ಯೋಗ ಸೃಷ್ಟಿಗೆ ಕಾರಣವಾಗುತ್ತಿದೆ. ಈ ಎರಡು ಗ್ರಹಗಳ ಚಲನೆಯು ನವಪಂಚಮಿ ಯೋಗವನ್ನು ರೂಪಿಸುತ್ತಿದೆ. ಇದು ಹಲವು ರಾಶಿಗಳಿಗೆ ಲಾಭದಾಯಕ ದಿನಗಳ ತರಲಿದೆ.
ಶನಿ ಈಗ ಮೀನ ರಾಶಿಯಲ್ಲಿದ್ದಾನೆ, ಆತ ಒಂದೂವರೆ ವರ್ಷ ಅದೇ ರಾಶಿಯಲ್ಲಿ ಚಲಿಸಲಿದ್ದಾನೆ. ಹಾಗೆ ಸೂರ್ಯ ಕರ್ಕ ರಾಶಿಯಲ್ಲಿ ಚಲಿಸಲಿದ್ದಾನೆ, ಇದು ಎರಡೂ ಗ್ರಹಗಳ 120 ಡಿಗ್ರಿಯ ಸಮಾಂತರ ಚಲನೆಗೆ ಕಾರಣವಾಗುತ್ತಿದೆ. ಇದರಿಂದ ನವಪಂಚಮಿ ಯೋಗ ರೂಪುಗೊಳ್ಳಲಿದೆ. ಹಾಗಾದ್ರೆ ಈ ಯೋಗದಿಂದ ಯಾರಿಗೆ ಲಾಭದಾಯಕ ದಿನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯ-ಶನಿಯಿಂದ ರೂಪುಗೊಂಡ ನವಪಂಚಮಿ ಯೋಗಕ್ಕೆ ಕಾರಣವಾಗಿತ್ತಿರುವುದು ಮೇಷ ರಾಶಿಯವರಿಗೆ ಅಧಿಕ ಲಾಭ ತರಲಿದೆ. ಕಾನೂನು ವಿಷಯಗಳು ನಿಮಗೆ ತುಂಬಾ ಅನುಕೂಲಕರವಾಗಿ ಕೊನೆಗೊಳ್ಳುತ್ತವೆ. ನೀವು ಶತ್ರುಗಳ ವಿರುದ್ಧ ಗೆಲುವು ಸಾಧಸಲಿದ್ದೀರಿ. ಹಲವು ಸಮಯದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗಿದ್ದ ವಿಚಾರವೊಂದು ನಿಮಗೆ ಯಶಸ್ಸು ತರಲಿದೆ. ಹಣಕಾಸು ವಿಚಾರವಾಗಿಯು ನಿಮಗೆ ಉತ್ತಮ ಸಮಯ. ನಿಮ್ಮ ಆರ್ಥಿಕ ಸ್ವಾವಲಂಬನೆ ಹೆಚ್ಚಾಗಲಿದೆ. ಹಲವು ರೀತಿಯಲ್ಲಿ ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ. ಹೊಸ ಉದ್ಯೋಮಗಳಲ್ಲಿ ಲಾಭ ಇರಲಿದೆ. ವ್ಯಾಪಾರಿಗಳಿಗೂ ಶುಭಕಾಲವಾಗಿದೆ. ಗೃಹಿಣಿಯರ ಉಳಿತಾಯ ಹೆಚ್ಚಾಗುವ ಕಾಲ.
ಮಿಥುನ ರಾಶಿ
ಸೂರ್ಯ-ಶನಿ ಸೃಷ್ಟಿಸಿದ ನವಪಂಚಮಿ ಯೋಗವು ಮಿಥುನ ರಾಶಿಯವರಲ್ಲಿ ಲಾಭದಾಯಕ. ಶನಿ ವಕ್ರ ಸ್ಥಾನದಲ್ಲಿ ಚಲಿಸುವುಉ ವೃತ್ತಿಪರ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರವಾಗಲಿದೆ. ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿಗಳಲ್ಲಿ ದೊಡ್ಡ ಬದಲಾವಣೆ ನೋಡಲಿದ್ದೀರಿ, ಹಿಂದಿನ ಹಲವು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಲಿದ್ದೀರಿ. ನಿರುದ್ಯೋಗಿಗಳಿಗೆ ಕೆಲಸಗಳು ಹುಡುಕಿ ಬರಲಿದೆ. ಹಳೆಯ ಸಾಲಗಳ ಮರುಪಾವತಿಗೆ ನೀವು ಮುಂದಾಗುತ್ತೀರಿ. ಆಸ್ತಿ, ಜಮೀನು ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಈ ಸಮಯ ಧನಾತ್ಮಕವಾಗಿರಲಿದೆ.
ಮೀನ ರಾಶಿ
ನವಪಂಚಮಿ ಯೋಗವು ಮೀನ ರಾಶಿಯವರಿಗೆ ಉತ್ತಮ ಪ್ರಯೋಜನಗಳನ್ನು ತರುತ್ತದೆ. ಈ ಅವಧಿಯು ಹೊಸ ಆದಾಯದ ಮೂಲಗಳನ್ನು ಹುಡುಕಲು ಸೂಕ್ತವಾಗಿದೆ. ವ್ಯಾಪಾರಿ ವರ್ಗವು ಅಧಿಕ ಲಾಭ ನೋಡುವ ಸಮಯ. ಅವಿವಾಹಿತರ ವಿವಾಹ ಸಂಬಂಧವಾಗಿ ಎದುರಾಗಿದ್ದ ಅಡ್ಡಿಗಳು ನಿವಾರಣೆಯಾಗುತ್ತದೆ. ವೃತ್ತಿಪರ ಹೊಸ ಅವಕಾಶಗಳಿಗೆ ಈ ಸಮಯ ನೆರವಾಗಲಿದೆ. ನಿಮ್ಮಲ್ಲಿ ದೀರ್ಘಕಾಲದ ಯಾವುದಾದರು ಅನಾರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications