Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೂರ್ಯ-ರಾಹುವಿನ ಸಂಯೋಗ: ಗ್ರಹಣ ಯೋಗದಿಂದ ಕಾಡಲಿದೆ ನೋವು, ಸೋಲು, ಕಲಹ!
ಜನವರಿಯಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಾಯಿಸಿವೆ. ಅದು ಹಾಗೆ ಮುಂದುವರೆದು ಫೆಬ್ರವರಿಯಲ್ಲಿಯೂ ಸಹ ಹಲವು ರಾಶಿಗಳ ಬದಲಾವಣೆ ನೋಡಬಹುದು. ಫೆಬ್ರವರಿಯ ಆರಂಭದಲ್ಲೇ ಸೂರ್ಯನು ಕುಂಭ ರಾಶಿ ಪ್ರವೇಶಿಸುತ್ತಾನೆ. ಸೌರಮಂಡಲದ ಕೇಂದ್ರ ಬಿಂದು ಸೂರ್ಯನ ಈ ಸಂಚಾರವು ಹಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದ್ರೆ ರಾಹುವಿನ ಪ್ರಭಾವದಿಂದ ಸೂರ್ಯನ ಸಂಚಾರವು ಮತ್ತಷ್ಟು ಪರಿಣಾಮಕಾರಿಯಾಗಲಿದೆ.
ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಆದ್ರೆ ರಾಹು ಈಗಾಗಲೇ ಕುಂಭ ರಾಶಿಯಲ್ಲಿದ್ದು, ಅಲ್ಲಿ ಸೂರ್ಯ ಹಾಗೂ ರಾಹುವಿನ ಸಂಯೋಗವಾಗುವುದು ನೋಡಬಹುದು. ಇದರಿಂದ ಗ್ರಹಣ ಯೋಗ ರೂಪುಗೊಳ್ಳುವುದು ನೋಡಬಹುದು. ಈ ಸಂಯೋಗವು ಮಾರ್ಚ್ 15ರ ವರೆಗೂ ಮುಂದುವರೆಯಲಿದೆ.

ಈ ಒಂದು ತಿಂಗಳ ಸಮಯದಲ್ಲಿ ಹಲವು ರಾಶಿಗಳ ಮೇಲೆ ಗ್ರಹಣ ಯೋಗವು ಪರಿಣಾಮಕಾರಿಯಾಗಲಿದೆ. ಸೂರ್ಯ ಅಥವಾ ಚಂದ್ರರು ಒಂದೇ ರಾಶಿಯಲ್ಲಿದ್ದಾಗ ಅಥವಾ ರಾಹು ಅಥವಾ ಕೇತುವಿಗೆ ಬಹಳ ಹತ್ತಿರ ಬಂದಾಗ ಈ ಯೋಗ ಸಂಭವಿಸುತ್ತದೆ. ರಾಹು ಹಾಗೂ ಸೂರ್ಯನ ಈ ಸಂಯೋಗವು ಹಲವು ರಾಶಿಗಳಿಗೆ ಅಶುಭ ಯೋಗ ತರಲಿದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಕೆಟ್ಟ ಘಟನೆಗಳು ಅಥವಾ ದಿನಗಳಿಗೆ ಕಾರಣವಾಗುವ ಸಮಯ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಗ್ರಹಣ ಯೋಗದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಅನಾನುಕೂಲವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಈ ಗ್ರಹಣ ಯೋಗವು ಕರ್ಕ ರಾಶಿಯ ಜನರಿಗೆ ಅನಾನುಕೂಲಗಳ ತರಲಿದೆ. ಅದ್ರಲ್ಲೂ ಮಕ್ಕಳ ವಿಚಾರದಲ್ಲಿ ಈ ಒಂದು ತಿಂಗಳ ಕಾಲ ನೋವಿನ ಸಂಗತಿಯನ್ನೇ ಕೇಳಬಹುದು. ವಿದ್ಯಾರ್ಥಿಗಳು ಸಹ ಈ ಸಮಯದಲ್ಲಿ ಸಮಸ್ಯೆಗಳು, ಪ್ರತಿಕೂಲ ಪರಿಣಾಮಗಳ ನೋಡುವರು. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ದೊಡ್ಡ ಹೂಡಿಕೆಗಳು, ಒಪ್ಪಂದಗಳು, ಮಾತುಕತೆಗಳಲ್ಲಿ ಈ ಸಮಯ ಅದೃಷ್ಟ ಇರುವುದಿಲ್ಲ. ವ್ಯಾಪಾರ ವಲಯದಲ್ಲಿ ಕ್ಷಿಪ್ರ ಬೆಳವಣಿಗೆ ಇಲ್ಲದೆ ಇರಬಹುದು. ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳು ನಿಧಾನವಾಗಬಹುದು. ಹಾಗೆ ಬಹುಸಮಯದ ಕೌಟುಂಬಿಕ ಸಮಸ್ಯೆಗಳು ಮತ್ತಷ್ಟು ಜಟಿಲವಾಗುವ ಸಂಭವಗಳು ಹೆಚ್ಚಾಗಲಿದೆ.
ಮಕರ ರಾಶಿ
ಕುಟುಂಬ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕಾಗಬಹುದು. ಆದ್ರೆ ಗ್ರಹಣ ಯೋಗದಿಂದ ಆಪ್ತರ ಜೊತೆ ಅಥವಾ ಕುಟುಂಬದಲ್ಲಿ ಮನಸ್ತಾಪಗಳು ಹುಟ್ಟಿಕೊಳ್ಳಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಮತ್ತಷ್ಟು ಬಿಕ್ಕಟ್ಟು ಎದುರಾಗಬಹುದು. ದಾಂಪತ್ಯ ವಿಚಾರವಾಗಿಯೂ ಬಹು ಸಮಯದಿಂದ ಇದ್ದ ಮನಸ್ತಾಪಗಳು ಪರಿಹಾರವಾಗದೆ ಇರಬಹುದು. ಉದ್ಯೋಗದ ವಿಚಾರದಲ್ಲಿ ನಿಮಗೆ ಹಲವು ರೀತಿಯ ಸಮಸ್ಯೆಗಳಿವೆ. ಅದ್ರಲ್ಲೂ ಬಡ್ತಿ, ವೇತನ ಹೆಚ್ಚಳದಂತಹ ವಿಚಾರದಲ್ಲಿ ಹಿನ್ನಡೆ ಅನುಭವಿಸುವಿರಿ. ಹೂಡಿಕೆಗಳ ಬಗ್ಗೆ ಎಚ್ಚರಿಕೆ ಇಡಿ. ನಿಮ್ಮ ಬಹುಸಮಯದ ಬಾಕಿ ಕೆಲಸವನ್ನು ಮುಗಿಸುವ ಸಲುವಾಗಿ ಹಣ ಪಡೆಯಬಹುದು.
ಕುಂಭ ರಾಶಿ
ಕುಂಬ ರಾಶಿ ಜನರಿಗೆ ಈ ಗ್ರಹಣ ಯೋಗವು ಹಲವು ರೀತಿಯಲ್ಲಿ ಸಮಸ್ಯೆಗಳ ತರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಕಠಿಣ ದಿನಗಳಿವೆ. ಅದ್ರಲ್ಲೂ ನೀವು ಮಾಡಬೇಕಿದ್ದ ಕೆಲಸವನ್ನು ಮತ್ತೆ ಮುಂದೂಡುತ್ತೀರಿ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ಕೈ ಸೇರದೆ ಇರಬಹುದು. ವ್ಯಹಾರದಲ್ಲಿ ಏರಳಿತ ಇರಲಿದೆ. ಅದ್ರಲ್ಲೂ ನೀವು ಬಟ್ಟೆ, ಕಬ್ಬಿಣ ವ್ಯವಹಾರದಲ್ಲಿದ್ದರೆ ಈ ಸಮಯ ಕಠಿಣವಾಗಬಹುದು. ತಂದೆ ತಾಯಿಯ ಆರೋಗ್ಯದ ವಿಚಾರವಾಗಿ ನೀವು ಬಹಳಷ್ಟು ಖರ್ಚು ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯದ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ಮನಸ್ತಾಪಗಳಿಗೆ ಕಾರಣವಾಗಬಹುದು. ನ್ಯಾಯಾಲಯ ಸಂಬಂಧಿತ ವಿಚಾರದಲ್ಲೂ ಯಶಸ್ಸು ಇರುವುದಿಲ್ಲ.



Click it and Unblock the Notifications
