Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ನಕ್ಷತ್ರ ಬದಲಾವಣೆ: ಅಕ್ಟೋಬರ್ 10ರ ವರೆಗೂ ಇವರಿಗೆಲ್ಲಾ ಅಚ್ಚರಿ ಫಲಿತಾಂಶ!
ಜ್ಯೋತಿಷ್ಯದ ಪ್ರಕಾರ ಸೂರ್ಯನ ಸಂಚಾರ ಮತ್ತು ನಕ್ಷತ್ರಪುಂಜದ ಬದಲಾವಣೆಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿ ಬದಲಾಯಿಸುತ್ತಾನೆ, ಹಾಗೆ ಈ ಸಮುದಲ್ಲಿ ನಕ್ಷತ್ರವನ್ನು ಸಹ ಬದಲಾಯಿಸುತ್ತಾನೆ. ಸೆಪ್ಟೆಂಬರ್ 27 ರ ಬೆಳಗ್ಗೆ, ಸೂರ್ಯನು ಉತ್ತರಫಲ್ಗುಣಿ ನಕ್ಷತ್ರದಿಂದ ಹಸ್ತ ನಕ್ಷತ್ರಕ್ಕೆ ಸ್ಥಳಾಂತರಗೊಂಡಿದ್ದಾನೆ.
ಸೂರ್ಯನ ನಕ್ಷತ್ರ ಬದಲಾವನೆಯಿಂದಾಗಿ ಹಲವು ರಾಶಿಗಳ ಮೇಲೆ ಧನಾತ್ಮಕ ಪರಿಣಾಮಗಳ ನೋಡಬಹುದು. ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ, ಇದು ಶಕ್ತಿ, ಆತ್ಮವಿಶ್ವಾಸ, ನಾಯಕತ್ವ ಮತ್ತು ಜೀವನದ ಅಗತ್ಯ ಅಂಶಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಸೂರ್ಯನು ಈಗ ಹಸ್ತ ನಕ್ಷತ್ರಕ್ಕೆ ಸಾಗುವುದು ಹಲವರ ಮೇಲೆ ನೇರ ಪರಿಣಾಮ ಬೀರುವುದು ನೋಡಬಹುದು.

ಅಕ್ಟೋಬರ್ 10 ರ ಸಂಜೆಯವರೆ ಸೂರ್ಯನು ಹಸ್ತ ನಕ್ಷತ್ರದಲ್ಲಿ ಇರುತ್ತಾನೆ. ಈ ಸಮಯದಲ್ಲಿ ಸೂರ್ಯನಿಂದ ಹಲವು ರಾಶಿಗಳಿಗೆ ಲಾಭ ನೋಡಬಹುದು. ಅದ್ರಲ್ಲೂ ಈ ಮೂರು ರಾಶಿಗಳ ಮೇಲೆ ಸೂರ್ಯನ ನಕ್ಷತ್ರ ಬದಲಾವಣೆಯಿಂದ ಅದ್ಭುತ ಲಾಭಗಳಿವೆ. ಹಾಗಾದ್ರೆ ಯಾರಿಗೆ ಲಾಭವಾಗಲಿದೆ ನೋಡಿ.
ವೃಷಭ ರಾಶಿ
ಸೂರ್ಯನು ಹಸ್ತ ನಕ್ಷತ್ರ ಪ್ರವೇಶವು ವೃಷಭ ರಾಶಿಯವರಿಗೆ ಅತ್ಯಂತ ಶುಭಕರವಾಗಿರುತ್ತದೆ. ಈ ಸಮಯವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನೀವು ಎಂದಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ನಿಮ್ಮ ಆರ್ಥಿಕ ಸಮಸ್ಯೆಗೆ ಕಡಿವಾಣ ಅಥವಾ ದೊಡ್ಡ ಸಂಕಟದಿಂದ ಮುಕ್ತಿ ಪಡೆಯಬಹುದು. ವ್ಯವಹಾರಗಳಿಂದ ನೀವು ಲಾಭ ಪಡೆಯುತ್ತೀರಿ. ಹಾಗೆ ನಿಮ್ಮ ಬಹಳ ಸಮಯದ ಉಳಿತಾಯದಲ್ಲಿ ಹೆಚಳ ನೋಡಬಹುದು. ನಿಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಯಶಸ್ಸಿನ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ, ಆರ್ಥಿಕ ಲಾಭಗಳು ಮತ್ತು ಒಳ್ಳೆಯ ಸುದ್ದಿಗಳನ್ನು ತರುತ್ತವೆ. ಕುಟುಂಬ, ವೃತ್ತಿ ಅಥವಾ ಆರೋಗ್ಯವಾಗಿರಲಿ, ನಿಮ್ಮ ಜೀವನದ ವಿವಿಧ ಅಂಶಗಳಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಬಹಳ ಸಕಾರಾತ್ಮಕ ಬದಲಾವಣೆಗಳ ತರಲಿದೆ.
ಕನ್ಯಾ ರಾಶಿ
ಸೂರ್ಯನು ಹಸ್ತ ನಕ್ಷತ್ರಕ್ಕೆ ಸಂಚರಿಸುವುದು ಕನ್ಯಾ ರಾಶಿಯವರಿಗೆ ಸಹ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ವೃತ್ತಿಜೀವನದ ಪ್ರಗತಿಯ ಸಾಧ್ಯತೆಯಿದೆ. ಕೆಲವು ಕಾರಣಗಳಿಂದ ಕೆಲಸ ಸ್ಥಗಿತಗೊಂಡಿರುವವರು ವೇಗವನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ಬಾಕಿ ಇರುವ ಹಣವನ್ನು ಸಹ ಪಡೆಯಬಹುದು. ನಿಮ್ಮ ಬಹುದಿನದ ಬಯಕೆಯನ್ನು ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ. ಹಲವು ದಿನದಿಂದ ನಿಮಗೆ ಕಾಡಿದ್ದಂತಹ ವಿಚಾರವೊಂದರಲ್ಲಿ ವಿರಾಮ ಸಿಗಲಿದೆ. ವ್ಯಾಪಾರಿಗಳು ದೊಡ್ಡ ಮಟ್ಟದ ಲಾಭ ನೋಡುವಿರಿ. ದುಡಿಯುವ ವರ್ಗ ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯಲು ಪ್ರಾರಂಭಿಸುತ್ತಾರೆ.
ಧನು ರಾಶಿ
ಹಸ್ತ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ಧನು ರಾಶಿಗೆ ವಿಶೇಷವಾಗಿ ಶುಭವಾಗಿರುತ್ತದೆ. ಇತರ ಗ್ರಹ ಸ್ಥಾನಗಳು ಸಹ ನಿಮ್ಮ ಪರವಾಗಿ ಕಾರ್ಯನಿರ್ವಹಿಸುತ್ತಿವೆ, ನಿಮ್ಮ ಅದೃಷ್ಟವನ್ನು ಇನ್ನಷ್ಟು ಬಲಪಡಿಸುತ್ತವೆ. ನಿಮ್ಮ ಅನೇಕ ಕೆಲಸಗಳಲ್ಲಿ ಇದ್ದಂತಹ ಅಡ್ಡಿಯು ನಿವಾರಣೆಯಾಗಲಿದೆ. ಹಣಗಳಿಸುವ ನಿಮ್ಮ ದಾರಿಗಳು ಸುಗಮವಾಗಲಿವೆ. ಹೊಸ ವ್ಯವಹಾರಗಳನ್ನು ನೀವು ಆರಂಭಿಸಿದ್ದರೆ ಅದರಿಂದ ಹೊಸ ಆದಾಯ ಬರಬಹುದು. ಆಪ್ತರೊಬ್ಬರಿಂದ ಪಡೆಯಬೇಕಿದ್ದ ವಸ್ತು ನಿಮ್ಮದಾಗಲಿದೆ. ಸಾಲ ತೆಗೆದುಕೊಳ್ಳುವ ನಿಮ್ಮ ಉದ್ದೇಶ ಈಡೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications