Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧನು ರಾಶಿಯಲ್ಲಿ ಸೂರ್ಯ-ಮಂಗಳ ಮಿಲನ: ಈ ರಾಶಿಯವರಿಗೆ 2026ನೇ ವರ್ಷ ಅದೃಷ್ಟಕರ!
ವರ್ಷದ ಅಂತ್ಯದಲ್ಲಿ ಪ್ರಮುಖ ಗ್ರಹಗತಿಗಳ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ. ಅದ್ರಲ್ಲೂ ಮಂಗಳನು ವರ್ಷದ ಅಂತ್ಯದ ತಿಂಗಳಿನಲ್ಲಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಇದೇ ಡಿಸೆಂಬರ್ 7ರಂದು ಧನು ರಾಶಿಗೆ ಪ್ರವೇಶಿಸಿದ್ದಾನೆ. ಇದು ಹಲವು ಗ್ರಹಗಳ ಮೇಲೆ ಒಂದಲ್ಲಾ ಒಂದು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಇದಾದ ಬಳಿಕ 2026ರಲ್ಲಿ ಮಂಗಳನೊಂದಿಗೆ ಮತ್ತೊಂದು ಗ್ರಹ ಸಂಯೋಗವಾಗಲಿದೆ.
ಫೆಬ್ರವರಿ 1, 2026ರ ವರೆಗೆ ಗುರುವಿನ ರಾಶಿಯಲ್ಲಿ ಮಂಗಳ ನೆಲೆಸುತ್ತಾನೆ. ಆದ್ರೆ ಇದೇ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಗೆ ಪ್ರವೇಶಿಸುತ್ತಾನೆ. ಇದು ಧನು ರಾಶಿಯಲ್ಲಿ ಸೂರ್ಯ ಹಾಗೂ ಮಂಗಳನ ಅಪರೂಪದ ಮಿಲನಕ್ಕೆ ಕಾರಣವಾಗುತ್ತದೆ. ಇಂತಹ ಅಪರೂಪದ ಸಂಯೋಗವು ಮಂಗಳಾದಿತ್ಯಾ ಯೋಗಕ್ಕೆ ಕಾರಣವಾಗುತ್ತದೆ. ಇದು ಅತ್ಯಂತ ಪ್ರಬಲ ರಾಜಯೋಗ ಎಂದು ಗುರುತಿಸಲಾಗಿದೆ.

ಸೂರ್ಯ ಹಾಗೂ ಮಂಗಳನ ಸಂಯೋಗ ಬಹಳ ಅಪರೂಪಕ್ಕೆ ಸಂಭವಿಸಲಿದೆ. ಅದು ಕೂಡ ಧನಾತ್ಮಕ ಮನೆಯಲ್ಲಿ ಎರಡು ಪ್ರಭಾವಶಾಲಿ ಗ್ರಹಗಳ ಸಂಯೋಗವು ಹಲವು ರೀತಿ ಲಾಭಗಳಿಗೆ ಕಾರಣವಾಗುತ್ತದೆ. ಧನು ರಾಶಿಯಲ್ಲಿ ಸೂರ್ಯ ಮತ್ತು ಮಂಗಳನ ಈ ಸಂಯೋಗವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಹಾಗಾದ್ರೆ ಸೂರ್ಯ ಹಾಗೂ ಮಂಗಳನ ಈ ಸಂಯೋಗದಿಂದ ಯಾರಿಗೆಲ್ಲಾ ಶುಭದಾಯಕ? ಯಾರ ಭವಿಷ್ಯದ ದಿನಗಳು ಉತ್ತಮವಾಗುತ್ತಿವೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಈ ಅವಧಿಯು ಮೇಷ ರಾಶಿಯವರಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಲಿದೆ. ಮಂಗಳಾದಿತ್ಯ ಯೋಗವು ಪ್ರಭಾವವು ನಿಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲಸದಲ್ಲಿ ಹೊಸ ಅವಕಾಶಗಳನ್ನು ತರಲಿದೆ. ಆರ್ಥಿಕ ಲಾಭದ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಹಣಕಾಸು ವಿಚಾರಗಳಲ್ಲಿ ನೆಮ್ಮದಿ ತರಲಿದೆ. ಸ್ವಂತ ಉದ್ಯೋಗ ಆರಂಭಿಸುವ ನಿಮ್ಮ ಬಯಕೆಗಳು ಈಡೇರಲಿವೆ. ವಾಹನ ಖರೀದಿಯ ಬಯಕೆಗಳು ಸಹ ಈಡೇರುವ ಸಮಯ ಹತ್ತಿರವಾಗುತ್ತಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸೂರ್ಯ ಹಾಗೂ ಮಂಗಳನ ಸಂಯೋಗ ಶುಭ ತರಲಿದೆ. ಸೂರ್ಯನ ಅಧಿಪತ್ಯ ಇರುವ ರಾಶಿಯಾಗಿದೆ. ಇದು ಹಲವು ನಿರ್ಧಾರಗಳಿಗೆ ನಿಮಗೆ ಬೆಂಬಲವಾಗಿ ನಿಲ್ಲಲಿದೆ. ನಿಮ್ಮ ನಾಯಕತ್ವದ ಲಕ್ಷಣಗಳು ಈ ವರ್ಷದಲ್ಲಿ ಹೊರಬರಲಿವೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರಗಳು ಧನಾತ್ಮಕವಾಗುತ್ತವೆ. ಕುಟುಂಬದ ಸಮಸ್ಯೆಗಳು ನಿವಾರಣೆಯಾಗಲಿದೆ, ಹಾಗೆ ದೊಡ್ಡ ಹಣಕಾಸು ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿ ಪಡೆಯಬಹುದು. ನಿಮ್ಮ ಬಹಳ ಹಿಂದಿನ ಸಮಸ್ಯೆಗಳ ನಿವಾರಣೆ ಮಾಡಲು ಅವಕಾಶಗಳು ಸಿಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಆಪ್ತರೊಬ್ಬರಿಂದ ಹಣ ಸಿಗಬಹುದು. ನಿಮ್ಮ ಬಹು ವರ್ಷದ ಉಳಿತಾಯವು ದೊಡ್ಡ ಕೆಲಸವೊಂದಕ್ಕೆ ಬಳಕೆ ಮಾಡುವಿರಿ. ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ ಮತ್ತು ಸಂಬಂಧಗಳು ಹೆಚ್ಚು ಸೌಹಾರ್ದಯುತವಾಗುತ್ತವೆ. ಈ ಸಮಯವು ಆರ್ಥಿಕ ಮತ್ತು ವೈಯಕ್ತಿಕ ದೃಷ್ಟಿಕೋನಗಳಿಂದ ಪ್ರಯೋಜನಕಾರಿಯಾಗಿದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುವುದು ನೋಡಬಹುದು. ನಿಮ್ಮ ಸಂಬಂಧಗಳು ಇತರರೊಂದಿಗೆ ಗಟ್ಟಿಯಾಗುತ್ತದೆ. ಪ್ರೇಮಿಗಳಿಗೆ ಈ ಸಮಯ ಬಹಳ ಉತ್ತಮ.
ಧನು ರಾಶಿ
ಈ ಅಪರೂಪದ ಯೋಗವು ಧನು ರಾಶಿಯವರಿಗೆ ಅನುಕೂಲಕರವಾಗಿದೆ. ಸೂರ್ಯ ಮತ್ತು ಮಂಗಳ ಗ್ರಹಗಳ ಸಂಯೋಜಿತ ಶಕ್ತಿಯು ನಿಮ್ಮ ಕೆಲಸದಲ್ಲಿ ವೇಗ ಮತ್ತು ಉತ್ಸಾಹವನ್ನು ತುಂಬುತ್ತದೆ. ಆರ್ಥಿಕ ಲಾಭ, ಬಡ್ತಿ ಮತ್ತು ವೃತ್ತಿ ಪ್ರಗತಿಗೆ ಅವಕಾಶಗಳು ಸಿಗಲಿದೆ. ಮನೆ ನಿರ್ಮಾಣ, ಕಟ್ಟಡ ನಿರ್ಮಾಣ, ನಿವೇಶನ ಖರೀದಿಯಂತಹ ವಿಚಾರದಲ್ಲಿ ಈ ಸಮಯದಲ್ಲಿ ನಿಮ್ಮ ಆಲೋಚನೆಗಳು ಫಲಿತಾಂಶ ತರಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



