Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಫೆಬ್ರವರಿಯಲ್ಲಿ ಸೂರ್ಯ-ಮಂಗಳನ ಸಂಯೋಗ: ಈ ರಾಶಿಯವರಿಗೆ ಹಲವು ವರ್ಷದ ಹಿಂದಿನ ಸಮಸ್ಯೆಗಳು ನಿವಾರಣೆ
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಎಲ್ಲಾ ಗ್ರಹಗಳಿಗೂ ಕೇಂದ್ರಬಿಂದುವಾಗಿ ನೋಡಲಾಗುತ್ತದೆ. ಸೂರ್ಯನ ಸ್ಥಾನದ ಆಧಾರದ ಮೇಲೆ ಸೌರಮಂಡಲದಲ್ಲಿನ ಗ್ರಹಗತಿಗಳ ಸ್ಥಾನಮಾನವು ನಿರ್ಧರಿತವಾಗುತ್ತದೆ. ಸೂರ್ಯನ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ತನ್ನ ಪರಿಣಾಮ ಉಂಟು ಮಾಡುವುದು ಸಹ ನಾವು ನೋಡಬಹುದು. ಸೂರ್ಯನನ್ನು ಗೌರವ, ಪ್ರತಿಷ್ಠೆ, ಸ್ವಾವಲಂಬನೆ, ಉದ್ಯೋಗ, ಜವಾಬ್ದಾರಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗೆ ಸೂರ್ಯನು ಈಗ ಉತ್ತರಾಯಣಕ್ಕೆ ಪ್ರವೇಶಿಸಿರುವುದು ಹಲವು ರೀತಿಯ ಬದಲಾವಣೆಗಳ ತರಲಿದ್ದಾನೆ.
ಇದರ ಜೊತೆಗೆ ಮಂಗಳ ಗ್ರಹದ ಸಂಚಾರದಲ್ಲಿನ ಬದಲಾವಣೆ ಸಹ ಇದೇ ಸಮಯದಲ್ಲಿ ತನ್ನ ಸ್ಥಾನ ಬದಲಾಯಿಸುವುದು ಹಲವು ರೀತಿಯಲ್ಲಿ ಶುಭ ಸಮಯವನ್ನು ತರಲು ಕಾರಣವಾಗುತ್ತದೆ. ಮಂಗಳ ಧೈರ್ಯ, ಶಕ್ತಿ, ಶೌರ್ಯ, ಆಸ್ತಿ, ಉತ್ಸಾಹ, ಉದ್ವೇಗ, ಶೌರ್ಯ ಮತ್ತು ಕೋಪದ ಅಂಶವಾಗಿದೆ. ಈ ಎರಡು ಗ್ರಹಗಳ ಸಂಯೋಗವು ಈ ಅಂಶಗಳ ಮೇಲೆ ಪರಿಣಾಮ ಉಂಟು ಮಾಡಲಿವೆ.

ಫೆಬ್ರವರಿಯಲ್ಲಿ ಈ ಎರಡು ಗ್ರಹಗಳ ಸಂಯೋಗ ಆಗಲಿದೆ. ಇದು ಹಲವು ರಾಶಿಯವರಿಗೆ ಅಚ್ಚರಿಯ ಫಲಿತಾಂಶದ ಜೊತೆಗೆ ಹಲವು ರೀತಿಯ ಶುಭಕರ ಯೋಗಗಳನ್ನು ತರಲಿದೆ. ಹಾಗಾದ್ರೆ ಈ ಸಮಯದಲ್ಲಿ ಯಾರಿಗೆಲ್ಲಾ ಲಾಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ಸೂರ್ಯ ಮತ್ತು ಮಂಗಳನ ಸಂಯೋಗವು ನಿಮಗೆ ಅನುಕೂಲಕರವಾಗಿದೆ. ಈ ಸಂಯೋಗವು ನಿಮ್ಮ ರಾಶಿ ಜನರಿಗೆ ವೃತ್ತಿ ಮತ್ತು ವ್ಯವಹಾರದ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗಬಹುದು, ಅಥವಾ ಬ್ಯಾಂಕ್ ಠೇವಣಿಯಲ್ಲಿ ಉಳಿತಾಯ ಹೆಚ್ಚಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಲ್ಲಿ ಲಾಭದಾಯಕ ಸಮಯ ಆಗಿರಲಿದೆ. ನಿರುದ್ಯೋಗಿಗಳು ಈ ಸಮಯದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತಹ ಉದ್ಯೋಗವನ್ನು ಪಡೆಯಬಹುದು. ಅಥವಾ ಉದ್ಯೋಗದಲ್ಲಿರುವ ಮಂದಿಗೆ ಬಡ್ತಿ, ವೇತನ ಹೆಚ್ಚಳ ವಿಚಾರದಲ್ಲಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗುವ ಸಮಯ ಇದಾಗುತ್ತದೆ.
ಕುಂಭ ರಾಶಿ
ಸೂರ್ಯ ಮತ್ತು ಮಂಗಳನ ಸಂಯೋಜನೆಯು ಕುಂಭ ರಾಶಿ ಜನರಿಗೆ ಧನಾತ್ಮಕ ಫಲಿತಾಂಶ ತರಲಿದೆ ಎಂದು ಸಾಬೀತಾಗಲಿದೆ. ಈ ಸಂಯೋಜನೆಯು ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ಸಂಭವಿಸಲಿದೆ. ಇದು ಹೊಸ ಜನರೊಂದಿಗೆ ಸಂಬಂಧವನ್ನು ವೃದ್ಧಿಸಲಿದೆ. ನಿಮ್ಮ ವ್ಯಕ್ತಿತ್ವವೂ ಸುಧಾರಿಸುತ್ತದೆ. ಅಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತೀರಿ. ಆರೋಗ್ಯದ ವಿಚಾರದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸು ಸಮಸ್ಯೆಗಳು ಈ ಸಮಯದಲ್ಲಿ ದೂರಾಗಲಿವೆ.
ಧನು ರಾಶಿ
ಸೂರ್ಯ ಮತ್ತು ಮಂಗಳನ ಸಂಯೋಜನೆಯು ಧನು ರಾಶಿಯವರಿಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಧನು ರಾಶಿಯ 3ನೇ ಮನೆಯಲ್ಲಿ ಈ ಸಂಯೋಗವಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರಲಿದೆ. ನಿಮಗೆ ಬಹುಸಮಯದಿಂದ ಖರ್ಚುಗಳಗೆ ಕಾರಣವಾದ ವಿಚಾರವೊಂದರಿಂದ ನೀವು ಮುಕ್ತಿ ಪಡೆಯಬಹುದು. ವಾಹನ ಸಂಬಂಧಿ ಸಮಸ್ಯೆಗಳು ದೂರಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಲಾಭ ಗಳಿಸಲು ಉತ್ತಮ ಅವಕಾಶಗಳನ್ನು ಪಡೆಯಬಹುದು. ನ್ಯಾಯಾಲಯ ಸಂಬಂಧಿ ವಿಚಾರವಾಗಿ ನಿಮಗೆ ಗೆಲುವುಗಳಿವೆ. ದಾಂಪತ್ಯ ಸಂಬಂಧಿತ ವಿಚಾರದಲ್ಲೂ ಮಧುರ ಕ್ಷಣಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











