Latest Updates
-
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ?
1 ವರ್ಷದ ಬಳಿಕ ಸೂರ್ಯ-ಮಂಗಳ ಸಮ್ಮಿಲನ: ಧನು ರಾಶಿಯಲ್ಲಿ ಮಹಾಧನ ರಾಜಯೋಗದಿಂದ ಯಾರಿಗೆಲ್ಲಾ ಶುಭ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹವನ್ನು ಬಹಳ ಮುಖ್ಯವೆಂದು, ಹಾಗೆ ಅವುಗಳ ಸ್ಥಾನ ಪಲ್ಲಟವು ಮುಂದಿನ ದಿನಗಳಲ್ಲಿ ಯಾವ ರಾಶಿಯವರಿಗೆ ಪರಿಣಾಮ ಬೀರಲಿದೆ ಎಂಬುದನ್ನು ವಿವರಿಸಲಾಗುತ್ತದೆ. ಹಾಗೆ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ನಾಯಕ ಎಂದು ಪರಿಗಣಿಸಲಾಗುತ್ತದೆ. ಸೌರಮಂಡಲದ ಕೇಂದ್ರಬಿಂದು ಆಗಿರುವ ಸೂರ್ಯನು ಆಗಾಗ ರಾಶಿ ಬದಲಾಯಿಸುವುದು, ನಕ್ಷತ್ರ ಬದಲಾವಣೆ ನೋಡಬಹುದು.
ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ಆತ ಪ್ರತಿ ರಾಶಿಯನ್ನು ಒಂದು ವೃತ್ತದಲ್ಲಿ ಸುತ್ತಲು 1 ವರ್ಷ ತೆಗೆದುಕೊಳ್ಳುತ್ತಾನೆ. ಅಂದರೆ 1 ತಿಂಗಳು ಒಂದೇ ರಾಶಿಯಲ್ಲಿ ಚಲಿಸಲಿದ್ದಾನೆ. ಸೂರ್ಯನ ಸ್ಥಾನ ಬದಲಾದಾಗಲೆಲ್ಲಾ ಅದರ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಗೋಚರಿಸುತ್ತದೆ.

ಸೂರ್ಯ ರಾಶಿ ಬದಲಾಯಿಸಿದಾಗಲೆಲ್ಲಾ ಹಲವು ರೀತಿಯ ಬದಲಾವಣೆಗಳ ನೋಡಬಹುದಾಗಿದೆ. ಈಗ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿ ಪ್ರವೇಶಿಸಲಿದ್ದಾನೆ. ಈ ಧನು ರಾಶಿಗೆ ಗುರು ಅಧಿಪತಿ ಆಗಿದ್ದಾನೆ. ಹಾಗೆ 1 ವರ್ಷದ ಬಳಿಕ ಸೂರ್ಯನು ಈಗ ಗುರು ಅಧಿಪತ್ಯ ಇರುವ ರಾಶಿಗೆ ಚಲಿಸುತ್ತಿದ್ದಾನೆ. ಆದ್ರೆ ಮಂಗಳ ಈಗಾಗಲೆ ಧನು ರಾಶಿಯಲ್ಲಿದ್ದಾನೆ.
ಹೀಗಾಗಿ ಧನು ರಾಶಿಯಲ್ಲಿ ಮಂಗಳ ಹಾಗೂ ಸೂರ್ಯನ ಅಪರೂಪದ ಸಂಯೋಗವಾಗುತ್ತದೆ. ಇದು ಅಪರೂಪದ ಮಂಗಳ ಆದಿತ್ಯನಿಂದ ಮಹಾಧನ ಯೋಗ ರೂಪುಗೊಳ್ಳಲಿದೆ. ಇದು ಸೂರ್ಯನ ಪ್ರಭಾವ ದುಪ್ಪಟ್ಟಾಗಿಸಲಿದೆ. ಹಾಗೆ ಈ ಅಪರೂಪದ ಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಹಾಗಾದ್ರೆ ಸೂರ್ಯ ಮಂಗಳನ ಸಮ್ಮಿಲನದಿಂದ ಯಾವ ರಾಶಿಯವರಿಗೆ ಅನುಕೂಲಕರ ದಿನವಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ಸೂರ್ಯ ಹಾಗೂ ಮಂಗಳನ ಸಂಯೋಗದಿಂದ ಮಹಾಧನ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ.
ಈ ರಾಶಿ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ಅದ್ರಲ್ಲೂ ಅದೃಷ್ಟದ ಪರೀಕ್ಷೆಯಲ್ಲಿ ನಿಮಗೆ ಅನೇಕ ಲಾಭವಿದೆ. ಹೊಸ ಆದಾಯ ಮೂಲಗಳು ಈ ಸಮಯದಲ್ಲಿ ತೆರೆದುಕೊಳ್ಳಲಿವೆ. ನಿಮ್ಮಿಂದ ಯಾವುದಾದರು ಹೊಸ ವ್ಯಾಪಾರ, ವ್ಯವಹಾರಗಳ ಆರಂಭವಿಸಬಹುದು. ಉದ್ಯೋಗಿಗಳು ಲಾಭದಾಯಕ ದಿನಗಳ ನೋಡಲಿದ್ದೀರಿ. ಬಡ್ತಿ, ವೇತನ ಹೆಚ್ಚಳದಂತಹ ವಿಚಾರದಲ್ಲಿ ಶುಭವಿದೆ.
ಮೇಷ ರಾಶಿ
ಮಹಾಧನ ರಾಜಯೋಗವು ಮೇಷ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಸೂರ್ಯ 9ನೇ ಮನೆಗೆ ಚಲಿಸುವುದು ನಿಮ್ಮ ಹಲವು ಆರ್ಥಿಕ ವಿಚಾರದಲ್ಲಿ ಶುಭ ತರಲಿದೆ. ಆರ್ಥಿಕ ಸ್ವಾವಲಂಬಿಗಳಾಗಿ ಮಾಡಲಿದೆ. ಅದೃಷ್ಟದ ಬೆಂಬಲ ಪಡೆಯಬಹುದು. ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ವೃತ್ತಿಪರವಾಗಿ ಅನುಕೂಲಕರವಾಗಿರುತ್ತದೆ. ಕೆಲಸದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಯೋಜಿತ ರೀತಿಯಲ್ಲಿ ಖರ್ಚು ಮಾಡಿದರೆ, ನೀವು ಹಣವನ್ನು ಉಳಿಸಬಹುದು. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ ಸಿಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಮಹಾಧನ ರಾಜಯೋಗದಿಂದ ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ಪಡೆಯುತ್ತಾರೆ. ಅವಿವಾಹಿತರು ವಿವಾಹ ಸಂಬಂಧಿತ ವಿಚಾರದಲ್ಲಿ ಅನುಭವಿಸುತ್ತಿದ್ದ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದು. ಕೆಲಸದ ಪ್ರಗತಿಗೆ ಉತ್ತಮ ಅವಕಾಶಗಳ ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅನೇಕ ಮೂಲಗಳಿಂದ ಹಣ ಬರುವುದು ನೋಡಬಹುದು. ದಾಂಪತ್ಯ ವಿಚಾರದಲ್ಲಿ ಶುಭವಾಗುತ್ತದೆ. ಹೊಸ ವಾಹನ ಖರೀದಿಯ ಲಾಭವಿದೆ. ಮಕ್ಕಳ ವಿದ್ಯಭ್ಯಾಸ ವಿಚಾರದಲ್ಲಿ ಶುಭ ಸುದ್ದಿಗಳ ಕೇಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications