Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿಯಲ್ಲಿ ಮೂರು ಬಾರಿ ಸೂರ್ಯ ಸ್ಥಾನ ಬದಲಾವಣೆ: ಯಾವೆಲ್ಲಾ ರಾಶಿಯವರಿಗೆ ಇದು ಶುಭಕರ, ಯಾರಿಗೆ ಲಾಭಕರ
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಜ ಅಥವಾ ಕೇಂದ್ರಬಿಂದು ಎಂದು ಸೂರ್ಯನನ್ನು ಕರೆಯಲಾಗಿದೆ. ಹಾಗೆ ಸೂರ್ಯನಿಂದ ಹಲವು ರೀತಿಯ ಯೋಗಗಳು ರೂಪುಗೊಳ್ಳುವುದು ಸಹ ನೋಡಿದ್ದೇವೆ. ಇನ್ನು ಸೂರ್ಯನ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ಸಹ ನೋಡಲಿದ್ದೇವೆ. ಸೂರ್ಯನು ಫೆಬ್ರವರಿ 6ರಂದು ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಇದನ್ನು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ.
ಸೂರ್ಯ ಫೆ.6ರಂದು ಧನಿಷ್ಠ ನಕ್ಷತ್ರ ಪ್ರವೇಶಿಸಲಿದ್ದಾನೆ. ಹಾಗೆ ಇದೇ ರಾಶಿಯಲ್ಲಿದ್ದಾಗ ಕುಂಭ ರಾಶಿಗೂ ಪ್ರವೇಶಿಸುತ್ತಾನೆ. ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಅನಂತರ ಫೆಬ್ರವರಿ 19ರಂದು ಶತಭಿಷ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಈ ರೀತಿ ಸೂರ್ಯನು ಮೂರು ಬಾರಿ ಚಲನೆಯ ಸ್ಥಿತಿಯಲ್ಲಿರುತ್ತಾನೆ. ಫೆಬ್ರವರಿಯ ಎಲ್ಲಾ ದಿನವೂ ಸೂರ್ಯನ ಪ್ರಭಾವ ಅಧಿಕವಾಗಿರುವುದು ನೋಡಬಹುದು.

ಸೂರ್ಯ ಉತ್ತಮ ಲಾಭಗಳ ತರುವ ಗ್ರಹವೆಂದು ಪರಿಗಣಿಸಲಾಗಿದೆ. ಸೂರ್ಯನು ಸಮೃದ್ಧಿ, ಸಂತೋಷ, ಉದ್ಯೋಗ, ಕುಟುಂಬ ವಿಚಾರಗಳಲ್ಲಿ ಶುಭ ತರುವ ಗ್ರಹವೆಂದು ಹೇಳಲಾಗಿದೆ. ಹಾಗಾದ್ರೆ ಫೆಬ್ರವರಿಯಲ್ಲಿ ಸೂರ್ಯನ ಸಂಚಾರವು ಯಾವೆಲ್ಲಾ ರಾಶಿಗಳಿಗೆ ಅನುಕೂಲಕರ ದಿನಗಳ ತರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ಸೂರ್ಯನ ಚಲನೆಯಲ್ಲಿನ ಮೂರು ಬದಲಾವಣೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿಸುವ ಕಾರ್ಯಗಳು ನಡೆಯಲಿವೆ. ನಿಮ್ಮ ಕೌಟುಂಬಿಕ ವಿಚಾರವಾಗಿ ನಿಮ್ಮ ಮಾತುಗಳಿಗೆ ಪ್ರಾಮುಖ್ಯತೆ ಸಿಗಲಿದೆ. ದಾಂಪತ್ಯ ವಿಚಾರವಾಗಿಯೂ ಕೂಡ ನಿಮಗೆ ಸಂತಸದ ದಿನಗಳಿವೆ. ಉದ್ಯೋಗದಲ್ಲಿರುವವರು ಬಡ್ತಿ, ವೇತನ ಹೆಚ್ಚಳ, ವರ್ಗಾವಣೆಯಂತಹ ವಿಚಾರದಲ್ಲಿ ಶುಭ ನೋಡಬಹುದು. ಪೂರ್ವ ಯೋಚಿತ ಕೆಲಸಗಳಲ್ಲಿ ನಿಮಗೆ ಯಶಸ್ಸು ಒಲಿದು ಬರಲಿದೆ. ನಿಮ್ಮ ಹಣಕಾಸಿನ ಬೇಡಿಕೆ ಈ ಸಮಯದಲ್ಲಿ ಈಡೇರಲಿದೆಲಿದೆ. ಆಪ್ತರ ಭೇಟಿಯಿಂದ ನಿಮಗೆ ಸಂತಸದ ಸಮಯವಿದೆ.
ಮೇಷ ರಾಶಿ
ಸೂರ್ಯನ ಚಲನೆಯಲ್ಲಿ ಮೂರು ಬಾರಿ ಬದಲಾವಣೆಯು ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಹಲವು ವರ್ಷದಿಂದ ಈಡೇರದೆ ಇದ್ದಂತಹ ವಿಚಾರಗಳು ಈ ಸಮಯದಲ್ಲಿ ಈಡೇರಲಿದೆ. ವ್ಯಾಪಾರ ಸಂಬಂಧಿತಗ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಸ್ವಂತ ಉದ್ಯೋಗದಿಂದ ನೀವು ಲಾಭ ನೋಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಸಮಯ ಇದಾಗಿರಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಪಡೆಯುವ ಸಮಯ ಇದಾಗಿರಲಿದೆ. ಉದ್ಯೋಗ ಸಂಬಂಧಿತ ವಿಚಾರವಾಗಿ ನೀವು ಬಹಳಷ್ಟು ಶುಭ ಸಮಾಚಾರಗಳ ಕೇಳುವಿರಿ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗುವ ಸಂಭವವಿದೆ.
ಸಿಂಹ ರಾಶಿ
ಸೂರ್ಯನ ಚಲನೆಯಲ್ಲಿನ ಬದಲಾವಣೆಯು ನಿಮಗೆ ಪ್ರಯೋಜನಕಾರಿ. ಸೂರ್ಯನು ಸಿಂಹ ರಾಶಿಯ ಆಡಳಿತ ಗ್ರಹ. ಹೀಗಾಗಿ ನಿಮ್ಮಲ್ಲಿ ಅನೇಕ ರೀತಿಯ ಧನಾತ್ಮಕ ಬದಲಾವಣೆಗಳ ನೋಡಬಹುದು. ಅದ್ರಲ್ಲೂ ನಿಮ್ಮ ಹಣಕಾಸು ಸಂಬಂಧಿತ ವಿಚಾರಗಳು, ವ್ಯವಹಾರಗಳಲ್ಲಿ ಶುಭವಿದೆ. ಬ್ಯಾಂಕಿಂಗ್ ವಿಚಾರಗಳು ನೀವು ಅಂದುಕೊಂಡ ಫಲಿತಾಂಶಗಳ ತರಲಿವೆ. ಆಸ್ತಿ, ಮನೆ, ನಿವೇಶನ, ನ್ಯಾಯಾಲಯ ಸಂಬಂಧಿತ ಯಾವುದೇ ವಿಚಾರಗಳಲ್ಲಿ ನಿಮಗೆ ಮೇಲುಗೈ ಸಿಗಲಿದೆ. ಮನೆಗಾಗಿ ನೀವು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲಿದ್ದೀರಿ. ಅವಿವಾಹಿತರಲ್ಲಿನ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಆರಂಭಗಳು ನಿಮ್ಮನ್ನು ಹುಡುಕಿ ಬರಲಿವೆ. ಅನೇಕರಲ್ಲಿ ಈ ಸಮಯವು ಸಾಮರಸ್ಯ ಕಾಪಾಡಿಕೊಳ್ಳುವ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications