Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿ ಪ್ರವೇಶಿಸಲಿದ್ದಾನೆ ಸೂರ್ಯ: ಈ ರಾಶಿಯವರಲ್ಲಿ ಹಣಬಲ, ಜನಬಲ ವೃದ್ಧಿ!
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ ಸೂರ್ಯನ ಚಲನೆಯಿಂದ ಹಲವು ರೀತಿಯಾಗಿ ಗ್ರಹಗಳು ಹಾಗೆ ರಾಶಿಗಳ ಮೇಲೆ ಪ್ರಭಾವ ಉಂಟಾಗುವುದು ನೋಡಬಹುದು. ಸೂರ್ಯನು ಸೌರಮಂಡಲದ ಆತ್ಮವಿದ್ದಂತೆ. ಅಲ್ಲದೆ ಸೂರ್ಯನ ಯಾವ ರಾಶಿಯಲ್ಲಿ ಚಲಿಸುತ್ತಾನೋ ಆ ರಾಸಿ ಸೇರಿದಂತೆ ಆತನ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗಿರುತ್ತದೆ.
ಸೂರ್ಯ ಸಂಪತ್ತು, ಧೈರ್ಯ, ಆಡಳಿತ, ನಾಯಕತ್ವ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಪ್ರಮುಖ ಅಂಶ ಎಂದು ಹೇಳಲಾಗಿದೆ. ಈ ಸೂರ್ಯನು ಈಗ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಫೆಬ್ರವರಿ 7ರಂದು ಸೂರ್ಯನು ಕುಂಭ ರಾಶಿಯ ಪ್ರವೇಶಿಸುತ್ತಾನೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಈ ಮೂರು ರಾಶಿಯವರ ಅದೃಷ್ಟವೇ ಬದಲಾಗಬಹುದು.

ಮೇಷ ರಾಶಿ
ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಸೂರ್ಯ ನಿಮ್ಮಲ್ಲಿ ಆದಾಯ ಸಂಬಂಧಿತ ಶುಭ ಸೂಚನೆಯನ್ನು ತರಲಿದ್ದಾನೆ. ಈ ಸಮಯದಿಂದ ನೀವು ಹಣಕಾಸಿಗೆ ಸಂಬಂಧಿಸಿದ ಲಾಭಗಳನ್ನು ಪಡೆಯಲಿದ್ದೀರಿ. ಅದ್ರಲ್ಲೂ ಹಳೆಯ ಹೂಡಿಕೆಗಳು, ಜೀವವಿಮೆ, ಷೇರುಪೇಟೆ, ಸಾಲ, ಬಡ್ಡಿ ವ್ಯವಹಾರದಂತಹ ವಿಚಾರದಲ್ಲಿ ನೀವು ಬಯಸದ ಲಾಭಗಳ ಪಡೆಯಬಹುದು. ಕೌಟುಂಬಿಕ ವಿಚಾರದಲ್ಲಿ ಇದ್ದ ಹಣಕಾಸಿನ ಸಮಸ್ಯೆಯನ್ನು ಸಹ ನೀವು ನಿವಾರಿಸಿಕೊಳ್ಳುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣವನ್ನು ಪ್ರಯತ್ನದ ಮೂಲಕ ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ. ಆದಾಯ ಮೂಲಗಳು ಹೆಚ್ಚಾಗಬಹುದು. ಹೊಸ ಕೆಲಸಗಳಿಗೆ ನಿಮಗೆ ಹಣಕಾಸಿನ ಅಡ್ಡಿ ಇರುವುದಿಲ್ಲ. ಹಾಗೆ ಹಳೆಯ ಸಾಲಗಳ ಪ್ರಮಾಣ ಕಡಿಮೆಯಾಗುವುದು ನೋಡಬಹುದು. ಇದರಿಂದ ನಿಮ್ಮ ಮಾನಸಿಲ ನೆಮ್ಮದಿ ಸಿಗಲಿದೆ.
ಧನು ರಾಶಿ
ಸೂರ್ಯನ ಸಂಚಾರವು ಧನು ರಾಶಿಯ ಜನರಿಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಸೂರ್ಯ ನಿಮ್ಮ ರಾಶಿಯಲ್ಲಿ ಧನಬಲ ಹೆಚ್ಚಿಸಲು ಕಾರಣವಾಗಲಿದ್ದಾನೆ. ನೀವು ಬಹು ಸಮಯದಿಂದ ಮಾಡಲು ಇಚ್ಛಿಸಿದ್ದ ಕೆಲಸಗಳನ್ನು ಈ ಸಮಯದಲ್ಲಿ ಮಾಡಿ ಮುಗಿಸುವಿರಿ. ಮಕ್ಕಳ ಹಣಕಾಸು ಸಂಬಂಧಿ ವಿಚಾರದಲ್ಲಿ ನಿಮ್ಮ ನೆರವು ಇರಲಿದೆ. ಸಂಬಂಧಿಕರಿಗೆ ನೀವು ಹಣಕಾಸಿನ ನೆರವು ನೀಡಬಹುದು. ನಿಮ್ಮ ಆರೋಗ್ಯ ವಿಚಾರದಲ್ಲಿ ಬಹಳ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ. ವಾಹನ ಖರೀದಿ ವಿಚಾರವಾಗಿ ನೀವು ಬಹಳ ಸಮಯದಿಂದ ಹಣ ಒಟ್ಟುಗೂಡಿಸಿಟ್ಟಿದ್ದರೆ ಈ ಸಮಯದಲ್ಲಿ ಅದರಿಂದ ಶುಭವಿದೆ. ನಿಮ್ಮ ದೊಡ್ಡ ಖರ್ಚುಗಳು ಕಡಿಮೆಯಾಗಲಿದೆ. ಐಷಾರಾಮಿ ವಸ್ತುಗಳ ಖರೀದಿಯ ಸಮಯವೂ ಹೌದು.
ಕುಂಭ ರಾಶಿ
ಸೂರ್ಯನ ಸಂಚಾರವು ನಿಮಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಈ ಸಂಚಾರವು ನಿಮ್ಮ ಲಗ್ನ ಮನೆಯಲ್ಲಿ ನಡೆಯುತ್ತಿದೆ. ಇದು ನಿಮ್ಮಲ್ಲಿದ್ದ ಅಸಹಾಯಕತೆ ದೂರಾಗಿಸಲಿದೆ. ನಿಮಗೆ ಬರಬೇಕಿದ್ದ ಹಣ, ವಸ್ತುಗಳು ಕೈ ಸೇರಲಿದೆ. ಸರ್ಕಾರಿ ಉದ್ಯೋಗ ಸಂಬಂಧಿತ ಕನಸುಗಳು, ಅಥವಾ ಬಡ್ತಿ, ವರ್ಗಾವಣೆ ಅಂತಹ ವಿಚಾರದಲ್ಲಿ ಶುಭವಾಗುವುದು ನೋಡಬಹುದು. ಆರೋಗ್ಯ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ನಿಮ್ಮ ಪ್ರಯಾಣಗಳು ಸಂತಸಕ್ಕೆ ಕಾರಣವಾಗಲಿದೆ. ಜಂಟಿ ವ್ಯವಹಾರಗಳು ನಿಮಗೆ ನೆಮ್ಮದಿಯ ತರಲಿದೆ. ಸ್ವಂತ ಉದ್ಯೋಗದಲ್ಲಿ ಬಹಳ ಸಮಯದಿಂದ ಕಂಟಕಗಳು ಎದುರಿಸಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ. ಉದ್ಯಮದಲ್ಲಿ ನಿಮಗೆ ಲಾಭವಿದೆ. ವ್ಯಾಪಾರಿಗಳು ಸಹ ಸಮಸ್ಯೆಗಳಿಂದ ದೂರಾಗಲಿದ್ದಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



