Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ಶುಕ್ರನಿಂದಾಗಿ ರೂಪುಗೊಂಡಿದೆ ಮಾಲವ್ಯ ಯೋಗ: ಈ 3 ರಾಶಿಯವರಿಗೆ ಶುಕ್ರದೆಸೆ ಸಮಯವಿದು, ಸಂಪತ್ತು ವೃದ್ಧಿಸುವುದು
ಶುಕ್ರಗ್ರಹವನ್ನು ಸಂಪತ್ತು, ಐಶ್ವರ್ಯ, ವೈಭವ ಮತ್ತು ಸಂತೋಷದ ಗ್ರಹವೆಂದು ಹೇಳಲಾಗುವುದು. ಶುಕ್ರನ ಕೃಪೆಯಿದ್ದರೆ ಮುಟ್ಟಿದ್ದೆಲ್ಲಾ ಚಿನ್ನ, ಸಂಪತ್ತು ಹೆಚ್ಚಾಗುವುದು. ಇದೀಗ ಶುಕ್ರ ಮೇ 19ಕ್ಕೆ ವೃಷಭ ರಾಶಿಯನ್ನು ಪ್ರವೇಶಸಿದೆ.
ವೃಷಭದಲ್ಲಿ ಶುಕ್ರ ಇರುವಾಗ ಮಾಲವ್ಯ ಯೋಗ ಉಂಟಾಗಿದೆ. ಈ ಮಾಲವ್ಯ ಯೋಗ 3 ರಾಶಿಯವರಿಗೆ ಅದ್ಭುತವಾಗಿದೆ, ಈ ಯೋಗದಿಂದಾಗಿ ಆ ಮೂರು ರಾಶಿಯವರ ಸಂಪತ್ತು ಹೆಚ್ಚಾಗಲಿದೆ.

ಮಾಲವ್ಯ ಯೋಗ ಯಾವಾಗ ರೂಪುಗೊಳ್ಳುತ್ತದೆ?
ಜ್ಯೋತಿಷ್ಯದ ಪ್ರಕಾರ ಶುಕ್ರನು ಲಗ್ನ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿ ಪ್ರಬಲ ಸ್ಥಾನದಲ್ಲಿದ್ದಾಗ ಮಾಲವ್ಯ ಯೋಗವು ರೂಪುಗೊಳ್ಳುತ್ತದೆ. ಮಾಲವ್ಯ ಯೋಗದಿಂದಾಗಿ ಆ ವ್ಯಕ್ತಿ ಅನೇಕ ಪ್ರಯೋಜನ ಪಡೆಯುತ್ತಾನೆ. ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತಾರೆ, ಅವನು ವೃತ್ತಿ ಬದುಕಿನಲ್ಲಿ ತುಂಬಾನೇ ಯಶಸ್ವಿ ಕಾಣುತ್ತಾನೆ, ತನ್ನ ಕೆಲಸದಲ್ಲಿ ಯಶಸ್ವಿಯಾಗುತ್ತಾನೆ. ಕುಟುಂಬ ಜೀವನ, ಆರೋಗ್ಯ ಚೆನ್ನಾಗಿರಲಿದೆ.
ಒಂದು ವರ್ಷದ ಬಳಿಕ ಶುಕ್ರ ಸಂಚಾರದಿಮದ ಉಂಟಾದ ಈ ಮಾಲವ್ಯ ಯೋಗದಿಂದಾಗಿ ಈ ಮೂರು ರಾಶಿಯವರು ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತಾರೆ:
ವೃಷಭ ರಾಶಿ
ಮಾಲವ್ಯ ಯೋಗವು ವೃಷಭ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿ. ಮಾಲವ್ಯ ಯೋಗ ಲಗ್ನ ಮನೆಯಲ್ಲಿ ಉಂಟಾಗಿದೆ. ವೃಷಭ ರಾಶಿಯ ರಾಜಕಾರಣಿಗೆ ಒಳ್ಳೆಯದು. ವೃತ್ತಿ ಬದುಕಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ದೊಡ್ಡ ಸ್ಥಾನವನ್ನು ಪಡೆಯಬಹುದು. ವೈವಾಹಿಕ ಜೀವನಕ್ಕೂ ಈ ಸಮಯ ಉತ್ತಮವಾಗಿರುತ್ತದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದು, ವೈವಾಹಿಕ ಜೀವನ ಚೆನ್ನಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಮಾಳವ್ಯ ಯೋಗ ಉತ್ತಮವಾಗಿರಲಿದೆ, ಈ ಯೋಗ ನಿಮ್ಮ 5ನೇ ಮನೆಯಲ್ಲಿ ಉಂಟಾಗಲಿದೆ. ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಮಗುವಿಗಾಗಿ ಪ್ರಯತ್ನಿಸುತ್ತಿರುವ ದಂಪತಿ ಶುಭ ಸುದ್ದಿ ಪಡೆಯುತ್ತೀರಿ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಪ್ರೇಮಿಗಳಿಗೆ ಈ ಅವಧಿ ತುಂಬಾ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮ್ಮ ಪ್ರಮುಖ ಆಸೆ ಈಡೆರಲಿದೆ, ನೀವು ವಾಹನ ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯ 11ನೇ ಮನೆಯಲ್ಲಿ ಮಾಲವ್ಯ ಯೋಗ ಉಂಟಾಗಿದೆ, ಇದು ಆದಾಯ ಮತ್ತು ಲಾಭದ ಮನೆಯಾಗಿದೆ. ಈ ಸಂಯೋಜನೆಯು ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ಆದಾಯ ಹೆಚ್ಚಾಗಲಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ಇನ್ನು ಹಣದ ಹೂಡಿಕೆಗೆ ಈ ಅವಧಿ ಚೆನ್ನಾಗಿರಲಿದೆ. ಈ ಸಮಯದಲ್ಲಿ ಹೂಡಿಕೆಯಿಂದ ನೀವು ಉತ್ತಮ ಲಾಭ ಗಳಿಸುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











