Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
12 ತಿಂಗಳ ನಂತರ ಪ್ರಬಲ ರಾಜಯೋಗ: ಬುಧ-ಸೂರ್ಯನಿಂದ ಈ ರಾಶಿಯಲ್ಲಿ ಅಚ್ಚರಿ ಫಲಿತಾಂಶ
ವೈದಿಕ ಜ್ಯೋತಿಷ್ಯದ ಪ್ರಕಾರ ಬುಧನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಬುಧನು ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವಾಗಿದ್ದು ಮಿಥುನ ಮತ್ತು ಕನ್ಯಾರಾಶಿಯ ಅಧಿಪತಿಯಾಗಿದ್ದಾನೆ. ಬುಧನ ಆಶೀರ್ವಾದ ಪಡೆಯುವ ಮಂದಿಗೆ ಹಲವು ರೀತಿಯಲ್ಲಿ ಲಾಭಗಳ ನೋಡುತ್ತಾರೆ. ಅದ್ರಲ್ಲೂ ವಿಶೇಷ ಲಾಭಗಳನ್ನು ಅವರು ನೋಡಬಹುದು.
ಇನ್ನೊಂದು ಕಡೆ ಸೂರ್ಯನನ್ನು ಕೂಡ ಬಹಳ ಮುಖ್ಯ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಬುಧ ಹಾಗೂ ಸೂರ್ಯನ ಸಂಯೋಗವಾದರೆ ಬಹಳಷ್ಟು ಲಾಭ ನೋಡಬಹುದು. ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸುವುದರಿಂದ ಅಲ್ಲಿ ಬುಧನ ಜೊತೆ ಚಲಿಸಲಿದ್ದಾನೆ. ಸೂರ್ಯ ಪ್ರಸ್ತುತ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.

ಅದೇ ಸಮಯದಲ್ಲಿ ಬುಧನು ತನ್ನ ಅತ್ಯುನ್ನತ ರಾಶಿಯಾದ ಕನ್ಯಾ ರಾಶಿಯಲ್ಲಿ ಪ್ರವೇಶಿಸಿ ಪ್ರಯಾಣಿಸುತ್ತಾನೆ. ಇದರಿಂದಾಗಿ ಕನ್ಯಾ ರಾಶಿಯಲ್ಲಿ ಸೂರ್ಯ ಮತ್ತು ಬುಧದ ಸಂಯೋಜನೆಯು ಪ್ರಬಲವಾದ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ರಾಜಯೋಗದ ಪ್ರಭಾವವು ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಕಂಡುಬರುತ್ತದೆ. ಕನ್ಯಾ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗದಿಂದಾಗಿ ಯಾವ ರಾಶಿಚಕ್ರಗಳು ಅದೃಷ್ಟಶಾಲಿಯಾಗುತ್ತವೆ ಎಂದು ನೋಡೋಣ.
ಮಿಥುನ ರಾಶಿ
ಮಿಥುನ ರಾಶಿಯ 4ನೇ ಮನೆಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದು ಉತ್ತಮ ಭೌತಿಕ ಸುಖಗಳನ್ನು ತರುತ್ತದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ನೀವು ಪಿತ್ರಾರ್ಜಿತ ಆಸ್ತಿಗಳಿಂದ ಸಂತೋಷವಾಗಿರುತ್ತೀರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಇರಲಿದೆ. ನೀವು ಇಲ್ಲಿಯವರೆಗೆ ನಿಮ್ಮ ಕೆಲಸದಲ್ಲಿ ಯಾವುದೇ ಪ್ರಗತಿಯನ್ನು ಕಾಣದಿದ್ದರೆ, ಈ ತಿಂಗಳು ನೀವು ಅನಿರೀಕ್ಷಿತ ಪ್ರಗತಿಯನ್ನು ನೋಡುತ್ತೀರಿ. ವಿಶೇಷವಾಗಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ
ಧನು ರಾಶಿಯ 10ನೇ ಮನೆಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ ನಿಮ್ಮಲ್ಲಿ ಹೊಸ ಕೆಲಸಗಳು ಕೈಗೂಡಲಿವೆ. ನಿಮ್ಮ ಅನೇಕ ಕೆಲಸಗಳಲ್ಲಿ ಲಾಭಕರ ಹಾಗೆ ಶುಭಕರ ದಿನಗಳ ನೋಡುವಿರಿ. ವ್ಯಾಪಾರಿಗಳಿಗೆ ಈ ಸಮಯವು ಉತ್ತಮ ಆಗಿರಲಿದೆ. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲು ನಿಮಗೆ ಉತ್ತಮ ಕೆಲಸಗಳು ಬರಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ, ನಿಮಗೆ ಉತ್ತಮ ಲಾಭ ಸಿಗುತ್ತದೆ. ಸೃಜನಶೀಲತೆ ಮತ್ತು ನಾಯಕತ್ವ ಕೌಶಲ್ಯಗಳು ಸುಧಾರಿಸುತ್ತವೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ನೀಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮೊದಲ ಮನೆಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಕನ್ಯಾ ರಾಶಿಯವರಲ್ಲಿ
ವಿವಾಹಿತರ ದಾಂಪತ್ಯ ಜೀವನವು ಸಂತೋಷಕರವಾಗಿರುತ್ತದೆ. ಅವಿವಾಹಿತರಿಗೆ ಉತ್ತಮ ವರ ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಹೊಸ ಆದಾಯ ಮೂಲಗಳು ನಿಮ್ಮ ಹುಡುಕಿ ಬರಲಿದೆ. ಆಪ್ತರೊಬ್ಬರಿಂದ ಹಣ ಬರುವ ನಿರೀಕ್ಷೆ ಇದೆ. ನಿರುದ್ಯೋಗಿಗಳಾಗಿದ್ರೆ ಬಹಳ ಸಮಯದ ಬಳಿಕ ನಿಮಗೆ ಉತ್ತಮ ಅವಕಾಶಗಳು ಬರಲಿವೆ. ಪ್ರಯಾಣಗಳಲ್ಲಿ ಶುಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications