Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಕೊನೆಯ ಸೌರ ಸಂಕ್ರಮಣ: ಧನು ರಾಶಿಗೆ ಸೂರ್ಯ ಸಂಚಾರದಿಂದ ಯಾರಿಗೆಲ್ಲಾ ಲಾಭ!?
ಸೌರ ಮಂಡಲದ ರಾಜ ಎಂದು ಕರೆಯ್ಪಡುವ ಸೂರ್ಯನು ಧನು ರಾಶಿಗೆ ಚಲಿಸುತ್ತಿದ್ದಾನೆ. ಡಿಸೆಂಬರ್ 15ರಂದು ಸೂರ್ಯ ಧನು ರಾಶಿಗೆ ಚಲಿಸಲಿದ್ದಾನೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತಿದೆ. ಸೂರ್ಯ ನಿಮ್ಮ ಗ್ರಹಗತಿಗಳ ರಾಶಿಯ ಮುಖ್ಯ ಕೇಂದ್ರ ಬಿಂದು ಆಗಿರುವುದರಿಂದ ಎಲ್ಲಾ ರಾಶಿಗಳ ಮೇಲೂ ಆತನ ಪ್ರಭಾವ ಇದ್ದೇ ಇರುತ್ತದೆ.
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಕೇಂದ್ರೀಯ ಗ್ರಹವೆಂದು, ಶಕ್ತಿಯುತ ಗ್ರಹವೆಂದು ಪರಿಗಣಿಸಲಾಗುತ್ತದೆ, ಶಕ್ತಿ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತದೆ. ಗುರುವಿನ ಆಳ್ವಿಕೆಯ ಧನು ರಾಶಿಯಲ್ಲಿ ಸೂರ್ಯನು ಸಾಗಿದಾಗ, ನಾಯಕತ್ವದ ಗುಣ ಹಾಗೂ ಸಮೃದ್ಧಿಯನ್ನು ಅದು ಸೂಚಿಸಲಿದೆ. ಹೀಗಾಗಿ ಕೆಲವೊಂದು ರಾಶಿಯವರಲ್ಲಿ ಇದು ವರದಾನವಾಗಲಿದೆ.

ಇನ್ನು ಧನು ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ ರಾಶಿಯಲ್ಲಿ ಗುರುಬಲ ಹೆಚ್ಚಾಗಲಿದೆ. ನಿಮ್ಮ ಆತ್ಮವಿಶ್ವಾಸ, ಕೆಲಸದಲ್ಲಿ ಯಶಸ್ಸು, ದೀರ್ಘಕಾಲದ ಲಾಭಗಳು ನಿಮಗೆ ಒಲಿಯಲಿದೆ. ಹಾಗಾದ್ರೆ ವರ್ಷದ ಕೊನೆಯ ಸೌರ ಸಂಕ್ರಮಣದಿಂದಾಗಿ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಧನು ರಾಶಿಯಲ್ಲಿ ಸೂರ್ಯನ ಸಂಚಾರವು ಹಲವು ರೀತಿಯಲ್ಲಿ ಲಾಭದಾಯಕವಾಗುತ್ತಿದೆ. ಅದರಲ್ಲೂ ನೀವು ಹಲವು ಕಡೆ ಪ್ರಯಾಣಿಸಬಹುದಾದ ಕೆಲಸಗಳು ಸಿಗಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತಹ ಪ್ರಯಾಣ, ಈ ಪ್ರಯಾಣವು ನಿಮಗೆ ಲಾಭದಾಯಕವಾಗಲಿದೆ. ಆಧ್ಯಾತ್ಮಿಕವಾಗಿ ನೀವು ಮತ್ತಷ್ಟು ಬಲವಾಗುತ್ತೀರಿ. ನಿಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ವೈಯಕ್ತಿಕವಾಗಿ ನಿಮ್ಮ ಆದಾಯ ಹೆಚ್ಚಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ ಮತ್ತು ಈ ಗ್ರಹಗಳ ಸಂಚಾರವು ಅವರ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ವ್ಯವಹಾರದಲ್ಲಿನ ಸುಧಾರಣೆಗಳು ಮತ್ತು ಪ್ರತಿಭೆಯನ್ನು ಗುರುತಿಸುವುದು ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಪ್ರಗತಿಯನ್ನು ತರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಪರವಾಗಿ ಕೆಲಸ ಮಾಡಲಿದೆ. ಹಾಗೆ ನಿಮ್ಮ ಕೆಲಸಗಳು ಸ್ಪೂರ್ತಿಯಾಗುವಂತೆ ಇರಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಮಾತುಗಳಿಗೆ ಪ್ರಾತಿನಿಧ್ಯ ಸಿಗಲಿದೆ.
ಧನು ರಾಶಿ
ಸೂರ್ಯನ ಕೊನೆಯ ಸಂಕ್ರಮಣವು ಧನು ರಾಶಿಯಲ್ಲಿ ಉಂಟಾಗುತ್ತಿರುವುದು ಈ ರಾಶಿಯವರಿಗೆ ಎಲ್ಲಿಲ್ಲದ ಲಾಭ ತರಲಿದೆ. ನೀವು ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ ಎಲ್ಲವೂ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ವಾಹನ ಲಾಭ, ಧನ ಲಾಭದಂತಹ ಯೋಗವಿದೆ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಮತ್ತಷ್ಟು ಆಯ್ಕೆಗಳು ಮುಂದೆ ಬರಲಿದೆ.
ಮಕರ ರಾಶಿ
ವರ್ಷದ ಕೊನೆಯ ಸೂರ್ಯ ಸಂಚಾರವು ಮಕರ ರಾಶಿಯವರಿಗೆ ಜೀವನದಲ್ಲಿ ಧನಾತ್ಮಕ ಬಲ ನೀಡಲಿದೆ. ಹೊಸ ಜವಾಬ್ದಾರಿಗಳು, ಹೊಸ ಚಿಂತನೆಗಳಿಗೆ ದಾರಿಯಾಗುತ್ತದೆ. ನಿಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಒತ್ತಡ, ಹಲವು ದಿನಗಳ ಸಮಸ್ಯೆಗಳು ದೂರಾಗಲಿದೆ. ಗೃಹಿಣಿಯರಿಗೆ ಲಾಭದಾಯಕ ದಿನಗಳು ಬರಲಿವೆ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಸೂಕ್ತವಾಗಿರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಸೂರ್ಯನ ಸಂಚಾರವು ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ತರುತ್ತದೆ. ಹಣಕಾಸಿನ ಸ್ಥಿರತೆ ಮತ್ತು ಸುಧಾರಿತ ಸಂಬಂಧಗಳು ಮುಂಬರುವ ವರ್ಷದಲ್ಲಿ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕಾರಣವಾಗುತ್ತವೆ. ಹಲವು ವರ್ಷಗಳಿಂದ ನೀವು ಮಾಡಬೇಕು ಅಂದುಕೊಂಡಿದ್ದ ಕಾರ್ಯಗಳು ಕೈಗೂಡಲಿವೆ. ಮನೆಗೆ ನಿಮ್ಮಿಂದ ಸಂತೋಷದ ಕ್ಷಣಗಳು ಬರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications