100 ವರ್ಷಗಳ ಬಳಿಕ ಶನಿ ಸಂಕ್ರಮಣದ ದಿನವೇ ಸೂರ್ಯಗ್ರಹಣ: 3 ರಾಶಿಯವರ ಅದೃಷ್ಟವೇ ಬದಲು

ಹೊಸ ವರ್ಷಕ್ಕೆ ಸ್ವಾಗತಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಈಗ ಹೊಸ ವರ್ಷದ ಆರಂಭದಿಂದಲೇ ಹಲವು ಯೋಗಗಳು, ಗ್ರಹಗಳಲ್ಲಿ ಬದಲಾವಣೆ ಸೇರಿ ಹಲವು ರೀತಿಯ ಬದಲಾವಣೆಗಳು ನಿಮ್ಮ ಜಾತಕದಲ್ಲಿ ಹಲವು ಲಾಭ ನಷ್ಟಗಳು ಕಾಣಿಸಲಿದೆ. ಇನ್ನು 2025ರಲ್ಲಿ ಹಲವು ಗ್ರಹಗಳ ಸಂಯೋಗ ಹಲವು ಗ್ರಹಗಳ ಸಂಯೋಗವು ಒಂದಿಷ್ಟು ಲಾಭಕ್ಕೆ ಕಾರಣವಾಗುತ್ತಿದೆ.

ಮುಂಬರುವ 2025 ರಲ್ಲಿ ಅನೇಕ ಅಪರೂಪದ ಮತ್ತು ಮಂಗಳಕರ ಘಟನೆಗಳು ನಡೆಯಲಿವೆ. ಈ ಘಟನೆಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಶನಿ ಸಂಕ್ರಮಣವು ಅನೇಕ ರಾಶಿಗಳ ಜನರಲ್ಲಿ ಬದಲಾವಣೆಗಳ ನಾವು ನೋಡಬಹುದಾಗಿದೆ. ಮಾರ್ಚ್‌ನಲ್ಲಿ ಸಂಭವಿಸುತ್ತಿರುವ ಶನಿ ಹಾಗೂ ಸೂರ್ಯ ಸಂಕ್ರಮಣವು ಹಲವು ಲಾಭಗಳಿಗೆ ಕಾರಣವಾಗುತ್ತಿದೆ.

Solar Eclipse Will Occur After 100 Years On The Day Of Saturn Transit

2025ರ ಮಾರ್ಚ್‌ನಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಶನಿ ಗ್ರಹದಲ್ಲಿ ಸಂಭವಿಸುತ್ತಿದೆ. ಇದು ಸುಮಾರು 100 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಶನಿ ಸಂಕ್ರಮಣದ ಈ ಅಪರೂಪದ ಸಮಯದಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿರುವುದು ಈ ಸಮಯದಲ್ಲಿ ಹಲವು ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ.

ಮಾರ್ಚ್‌ ತಿಂಗಳಲ್ಲಿ ಸಂಭವಿಸುವ ಈ ಸೂರ್ಯಗ್ರಹಣದಿಂದಾಗಿ ಯಾವ ರಾಶಿಯವರಲ್ಲಿ ಲಾಭದಾಯಕವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಿಥುನ ರಾಶಿ

ಶನಿ ಸಂಚಾರದ ದಿನದಂದು ಸಂಭವಿಸುವ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ವಿಶೇಷವಾಗಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಹಲವು ದಿನದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗಿಗಳಿಗೆ ಬಡ್ತಿಯ ಸಾಧ್ಯತೆಗಳಿವೆ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಮೇಲುಗೈ ಸಾಧಿಸುವರು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಲಿದ್ದೀರಿ.

ಧನು ರಾಶಿ

ಧನು ರಾಶಿಯವರಿಗೆ ಶನಿ ಸಂಕ್ರಮಣದ ದಿನದಂದು ಸೂರ್ಯಗ್ರಹಣದಿಂದ ಜೀವನದ ಪ್ರಮುಖ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಕೆಲಸಗಳನ್ನು ಆರಂಭಿಸಿದರೆ ಯಶಸ್ಸು ಸಿಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವ್ಯಾಪಾರಿಗಳು ಸುಧಾರಣೆಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕುಟುಂಬಸ್ಥರಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಗಳಿಸಲಿದ್ದೀರಿ. ಹಲವು ಕನಸುಗಳಲ್ಲಿ ಕೆಲವೊಂದು ಈ ವರ್ಷವೇ ನನಸಾಗಲಿದೆ. ನೀವು ಅವಿವಾಹಿತರಾಗಿದ್ದರೆ ಈ ವರ್ಷ ವಿವಾಹ ಯೋಗವಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ನೀವು ಪೂರ್ಣಗೊಳಿಸಲಿದ್ದೀರಿ.

ಮಕರ ರಾಶಿ

ಶನಿಯ ಸಂಚಾರದ ದಿನದಂದು ಸಂಭವಿಸುವ ಸೂರ್ಯಗ್ರಹಣವು ಮಕರ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ನೀಡುತ್ತದೆ. ಆಸ್ತಿ ಹೆಚ್ಚಳವಾಗಲಿದೆ. ನಿಮ್ಮ ಆದಾಯದಲ್ಲಿ ಲಾಭದಾಯಕ ಬೆಳವಣಿಗೆ ನೋಡಬಹುದು. ಹೊಸ ವಿಚಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ. ಈ ವರ್ಷ ಮನೆಗೆ ಹೊಸ ವಸ್ತು ಖರೀದಿಸಬೇಕಾಗಬಹುದು. ಅದರಲ್ಲೂ ನೀವು ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳ ಖರೀದಿಗೆ ಮುಂದಾಗುತ್ತೀರಿ. ದೇವಾಲಯ ಭೇಟಿ, ಪುಣ್ಯಕ್ಷೇತ್ರ, ಶುಭ ಸಮಾರಂಭದಂತಹ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Solar Eclipse Will Occur After 100 Years On The Day Of Saturn Transit

Occurring once every 100 years, the solar eclipse occurring during this rare time of Saturn transit will prove beneficial for many zodiac signs.
Story first published: Friday, December 20, 2024, 15:59 [IST]
X
Desktop Bottom Promotion