ಕನ್ಯಾ ರಾಶಿಯಲ್ಲಿ ಸೂರ್ಯ ಗ್ರಹಣ: ಹಣಕಾಸು, ಕೌಟುಂಬಿಕ ವಿಚಾರದಲ್ಲಿ ಕಂಟಕ..!

ಈ ವರ್ಷದ ಕೊನೆಯ ಹಾಗೆ ಎರಡನೇ ಸೂರ್ಯ ಗ್ರಹಣವು ಇದೇ ಸೆಪ್ಟೆಂಬರ್‌ನಲ್ಲಿ ಸಂಭವಿಸಲಿದೆ. ಮಹಾಲಯ ಅಮಾವಾಸ್ಯೆಯ ದಿನವಾದ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಈ ಗ್ರಹಣವು ಹಲವು ರೀತಿಯಾಗಿ ವಿಶೇಷ ಹಾಗೆ ಹಲವು ಕಾರಣದಿಂದ ಅಶುಭಕ್ಕೆ ಕಾರಣವಾಗುತ್ತಿದೆ. ಭಾರತದಲ್ಲಿ ಗೋಚರ ಆಗದೆ ಇದ್ದರೂ ಅದರ ಪರಿಣಾಮ ಎದುರಿಸಬೇಕಾಗಿದೆ.

ಸೂರ್ಯ ಗ್ರಹಣದ ಸಮಯದಲ್ಲಿ ಎಲ್ಲಾ ರಾಶಿಗಳು, ಗ್ರಹಗಳ ಮೇಲೆಯೂ ಅದರ ಪರಿಣಾಮ ಬೀರುವುದು ನೋಡಬಹುದು. ಹೀಗಾಗಿ ಎಲ್ಲಾ ರಾಶಿಗಳ ಮೇಲೆಯೂ ಇದರ ಪರಿಣಾಮ ಇದ್ದೇ ಇರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಈ ಗ್ರಹಣವು ಕನ್ಯಾರಾಶಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಸಂಭವಿಸುತ್ತದೆ.

Solar Eclipse In Virgo These Signs Will Be Unlucky

ಈ ಗ್ರಹಣ ಸಂಭವಿಸುವುದು 12 ಗ್ರಹಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಸೂರ್ಯಗ್ರಹಣದ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು, ಆದರೆ ಕೆಲವು ರಾಶಿ ಜನರು ಜಾಗರೂಕರಾಗಿರಬೇಕು. ಈ ಬಾರಿ ಕೆಲವು ರಾಶಿ ಜನರು ಸೂರ್ಯಗ್ರಹಣದ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು.

ಕನ್ಯಾ ರಾಶಿಯಲ್ಲಿ ಸಂಭವಿಸುತ್ತಿರುವ ಗ್ರಹಣವು ಹಲವರಿಗೆ ಆರೋಗ್ಯ, ಆರ್ಥಿಕ, ಕುಟುಂಬ ಜೀವನ, ಔದ್ಯೋಗಿಕ ಜೀವನ ಸಂಬಂಧವಾಗಿ ಸಮಸ್ಯೆಗಳ ತರಬಹುದು. ಹಾಗಾದ್ರೆ ಈ ಸೂರ್ಯ ಗ್ರಹಣವು ಯಾರಿಗೆಲ್ಲಾ ಸಮಸ್ಯೆ ತರಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಿಥುನ ರಾಶಿ

ಕನ್ಯಾ ರಾಶಿಯಲ್ಲಿ ಗ್ರಹಣ ಸಂಭವಿಸುವುದು ಮಿಥುನ ರಾಶಿಯವರಿಗೆ ಅತ್ಯಂತ ಕಷ್ಟಕಾಲ ತರಲಿದೆ. ನಿಮ್ಮ ಹಣಕಾಸು ಸಂಬಂಧವಾಗಿ ಹೇಳುವುದಾದರೆ ನಿಮ್ಮ ಸಾಲದ ಪ್ರಮಾಣ ಏರಿಕೆಯಾಗಬಹುದು. ಹಾಗೆ ಬಹಳ ಅಗತ್ಯ ಸಮಯಕ್ಕೆ ಅಥವಾ ಅಗತ್ಯ ಕೆಲಸದಲ್ಲಿ ಹಣಕಾಸಿನ ಅಡ್ಡಿ ಎದುರಾಗಬಹುದು. ಅನಗತ್ಯ ಖರ್ಚುಗಳು ನಿಮ್ಮ ಭವಿಷ್ಯ ದಿನದಲ್ಲಿ ಹಣಕಾಸು ಕೊರತೆಗೆ ಕಾರಣವಾಗಬಹುದು. ಉದ್ಯೋಗ ಸಂಬಂಧವಾಗಿ ನಿಮ್ಮ ವೇತನ ಹೆಚ್ಚಳ, ವರ್ಗಾವಣೆಯಂತಹ ವಿಚಾರಗಳು ನಿಧಾನವಾಗಬಹುದು. ಕೌಟುಂಬಿಕ ವಿಚಾರದಲ್ಲಿಯೂ ಕಗ್ಗಂಟುಗಳು ಎದುರಾಗಬಹುದು. ಮನೆಯ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಮಾಡುವ ಕುರಿತು ನೀವು ಚಿಂತಿಸಬಹುದು. ವಿವಾಹ ಸಂಬಂಧಿ ವಿಚಾರದಲ್ಲಿ ಮತ್ತೆ ಅಡ್ಡಿ ಎದುರಾಗಬಹುದು.

ಕನ್ಯಾ ರಾಶಿ

ವರ್ಷದ ಕೊನೆಯ ಸೂರ್ಯಗ್ರಹಣವು ಕನ್ಯಾ ರಾಶಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ಅನೇಕ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿ ಮತ್ತು ವೈಯಕ್ತಿಕ ಜೀವನದಲ್ಲಿ ಜಾಗರೂಕರಾಗಿರಿ. ಆರ್ಥಿಕವಾಗಿ ಜಾಗರೂಕರಾಗಿರಿ ಮತ್ತು ಯಾವುದೇ ರೀತಿಯ ದೊಡ್ಡ ವಹಿವಾಟುಗಳ ಮಾಡದೆ ಇರುವುದು ಉತ್ತಮ, ನಿಮ್ಮ ವ್ಯಾಪಾರದಲ್ಲಿ ನಷ್ಟ ಸಂಭವವಿದೆ. ಮನೆ ಖರೀದಿ, ನಿವೇಶನ ಖರೀದಿಯಲ್ಲಿ ಮತ್ತೆ ಹಿನ್ನಡೆ ಅನುಭವಿಸುವಿರಿ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವುದು ಕಷ್ಟವಾಗಬಹುದು.

ಮೀನ ರಾಶಿ

ಮೀನ ರಾಶಿಯ ಜನರಲ್ಲಿ ಈ ಸೂರ್ಯ ಗ್ರಹಣವು ಹಲವು ರೀತಿಯಲ್ಲಿ ಪರಿಣಾಮಕಾರಿಯಾಗುತ್ತಿದೆ. ಅದ್ರಲ್ಲೂ ನಿಮ್ಮ ಹಳೆಯ ಆರ್ಥಿಕ ಸಮಸ್ಯೆಗಳಿಂದ ದೊಡ್ಡ ಮಟ್ಟದ ಸಮಸ್ಯೆ ಎದುರಿಸಬಹುದು. ಆನ್‌ಲೈನ್ ಪಾವತಿಗಳು, ಬ್ಯಾಂಕಿಂಗ್ ಕುರಿತ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಿದೆ. ನ್ಯಾಯಾಲಯ ಸಂಬಂಧ ಯಾವುದಾದರು ವಿಚಾರದಲ್ಲಿ ನೀವು ಅಲೆದಾಟ ಮಾಡುತ್ತಿದ್ದರೆ ಅದರಿಂದ ಮತ್ತಷ್ಟು ಸಮಸ್ಯೆ ಬರಬಹುದು. ಆಸ್ತಿ ಖರೀದಿ ಮುಂದೂಡುವುದು ಉತ್ತಮ. ಪೋಷಕರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)

English summary

Solar Eclipse In Virgo: These Signs Will Be Unlucky

It can be seen that the occurrence of an eclipse affects all 12 planets. Some zodiac signs may get good results during a solar eclipse, but some zodiac signs should be careful.
Story first published: Thursday, September 11, 2025, 14:57 [IST]
X
Desktop Bottom Promotion