Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣ 2025: ಈ ಮೂರು ರಾಶಿಯವರ ಬದುಕು ಬದಲಾಗುತ್ತೆ.! ಹಣ ಕೈ ಸೇರುತ್ತೆ!
ವೈದಿಕ ಶಾಸ್ತ್ರದಲ್ಲಿ ಗ್ರಹಣಗಳನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಹಾಗೆ ಈ ವರ್ಷದ ಕೊನೆಯ ಹಾಗೂ 2ನೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಈ ಕುರಿತಾಗಿ ಈಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ನಾವು ನೋಡಬಹುದು. ಸೆಪ್ಟೆಂಬರ್ 21ರಂದು ಸಂಭವಿಸುತ್ತಿರುವ ಸೂರ್ಯ ಗ್ರಹಣವು ಹಲವು ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮ ತರಲಿದೆ.
ಈ ಸೂರ್ಯಗ್ರಹಣವು ಬುಧನ ರಾಶಿಯಾದ ಕನ್ಯಾರಾಶಿ ಮತ್ತು ಸೂರ್ಯನ ನಕ್ಷತ್ರಪುಂಜವಾದ ಉತ್ತರ ಫಲ್ಗುಣಿಯಲ್ಲಿ ಸಂಭವಿಸುತ್ತದೆ. ಈ ಸಮಯದಲ್ಲಿ, ಸೂರ್ಯನು ಸ್ವತಃ ಕನ್ಯಾರಾಶಿಯಲ್ಲಿ ಸಾಗುತ್ತಾನೆ. ಪರಿಣಾಮವಾಗಿ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗೆ ಹಲವು ರಾಶಿಗಳಲ್ಲಿ ಇದು ಅಶುಭ ಕಾರಕವಾಗಿದ್ದರೂ ಮತ್ತೆ ಕೆಲವು ರಾಶಿಗಳಿಗೆ ಈ ಗ್ರಹಣ ಶುಭಕರ.

ಹಲವು ರಾಶಿಯವರಿಗೆ ಈ ಗ್ರಹಣವು ಅದೃಷ್ಟ ತರಲಿದೆ. ಅದ್ರಲ್ಲೂ ನಿಮ್ಮ ಆದಾಯ ಹೆಚ್ಚಾಗುವ ಸಂಭವವಿದೆ. ಹಾಗೆ ವ್ಯವಹಾರ ಲಾಭ ಆರ್ಥಿಕ ಲಾಭ, ನಿಮ್ಮ ಕನಸುಗಳು ಈಡೇರಿಸಿಕೊಳ್ಳುವ ಸಮಯ ಇದಾಗಬಹುದು, ಹಾಗಾದ್ರೆ ಈ ಸೂರ್ಯಗ್ರಹಣದ ಸಂಪೂರ್ಣ ಲಾಭ ಪಡೆಯುವ ರಾಶಿಗಳು ಯಾವುದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಸೂರ್ಯ ಗ್ರಹಣದ ಸಮಯವು ವೃಷಭ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನವಾಗಿರಲಿದೆ. ಹಲವು ರೀತಿಯ ಆರ್ಥಿಕ ಪ್ರಯೋಜನಗಳನ್ನು ನೀವು ಪಡೆಯಬಹುದು. ವ್ಯವಹಾರಗಳು ನಿಮಗೆ ಶುಭ ತರಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳು ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ ಮತ್ತು ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೌಟುಂಬಿಕ ಕಲಹಗಳು ಕಡಿಮೆಯಾಗುತ್ತವೆ. ಪ್ರಯಾಣಗಳು ನೀವು ಅಂದುಕೊಂಡಂತೆ ಶುಭವಾಗಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ನೀವು ಬಡ್ತಿಯ ಅವಕಾಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ತಂದೆ ಅಥವಾ ವ್ಯವಹಾರದಲ್ಲಿ ಹಿರಿಯರಿಂದ ಮಾರ್ಗದರ್ಶನವು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರು ತಮ್ಮ ಹೊಸ ಕೆಲಸದಲ್ಲಿ ಉತ್ತಮ ಲಾಭ ನೋಡುವಿರಿ. ಹೊಸ ವ್ಯವಹಾರಗಳ ಆರಂಭಿಸುವ ಕಾಲ ಆಗಬಹುದು. ನೀವು ಉದ್ಯೋಗ ಬದಲಿಸಲು ಅಥವಾ ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹ ಕಡಿಮೆಯಾಗಲಿದೆ. ಬಹಳ ಸಮಯದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಬ್ಯಾಂಕಿಂಗ್ ವಿಚಾರದಲ್ಲಿ ಶುಭ ದಿನಗಳಿವೆ. ಬಹಳ ಸಮಯದ ನಿಮ್ಮ ವಾಹನ ಖರೀದಿ ಕುರಿತ ಆಸೆಯೊಂದು ಈಡೇರಬಹುದು, ಅವಿವಾಹಿತರಿಗೆ ಈ ಸಮಯದಲ್ಲಿ ಶುಭ ಸುದ್ದಿ ಕೇಳಿಬರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರು ವ್ಯಾಪಾರ ವಿಸ್ತರಣೆಯಿಂದ ಪ್ರಯೋಜನ ಪಡೆಯುತ್ತಾರೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಲಾಭವಿದೆ. ಕೌಟುಂಬಿಕ ವಿಚಾರಗಳಲ್ಲು ಸುಖಕರ ಫಲಿತಾಂಶ ಇರಲಿದೆ. ನೀವು ವಾಹನವನ್ನು ಖರೀದಿಸಲು ಯೋಜಿಸಬಹುದು, ಅದು ನಿಮಗೆ ಶುಭಫಲ ತರಲಿದೆ. ಪೂರ್ವಜರ ಆಸ್ತಿ, ವ್ಯವಹಾರ, ವ್ಯಾಪಾರ ವಿಚಾರದಲ್ಲಿ ನಿಮ್ಮ ಹಳೆಯ ಕಷ್ಟಗಳು ನಿವಾರಣೆಯಾಗಲಿವೆ. ಸಂಬಂಧಗಳು ಬಲಗೊಳ್ಳುತ್ತವೆ. ಮದುವೆಯ ನಿರೀಕ್ಷೆಗಳು ಹೆಚ್ಚಾಗಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











