Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್‌ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
ಗ್ರಹಣವನ್ನು ಶುಭವೆಂದು ಹೇಳಲಾಗುವುದಿಲ್ಲ, ಈ ಗ್ರಹಣದ ಪ್ರಭಾವ ನಕರಾತ್ಮಕವಾಗಿರುತ್ತದೆ. ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಪ್ರವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಈ ವರ್ಷದ ಮೊದಲ ಚಂದ್ರಗ್ರಹಣ ಕಳೆದಿದೆ.
ಆದರೆ ಅದು ಭಾರತದ ಮೇಲೆ ಪ್ರಭಾವ ಬೀರಿರಲಿಲ್ಲ, ಏಕೆಂದರೆ ಆ ಸಮಯ ಭಾರತದಲ್ಲಿ ಹಗಲಿನ ಸಮಯವಾಗಿತ್ತು, ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸುವುದೇ? ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ, ಯಾವ ಸಮಯದಲ್ಲಿ ಗೋಚರಿಸಲಿದೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಮೊದಲಿಗೆ ಈ ಸೂರ್ಯಗ್ರಹಣ ಏಕೆ ಸಂಭವಿಸುತ್ತದೆ?
ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯ ಹಾಗೂ ಭೂಮಿಯ ಮಧ್ಯೆ ಬ ಬಂದಾಗ ಸೂರ್ಯನಿಂದ ಬರುವ ಬೆಳಕು ಭೂಮಿಗೆ ಬೀಳುವುದಿಲ್ಲ,ಹೀಗಾಗಿ ಭೂಮಿಗೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ವರ್ಷದಲ್ಲಿ ಎರಡು ಬಾರಿ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಾಗ ಮಾತ್ರ ಸಂಭವಿಸುತ್ತದೆ.
2024 ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ
ಈ ವರ್ಷದ ಮೊದಲ ಸೂರ್ಯಗ್ರಹಣ ಸೂರ್ಯಗ್ರಹಣವು 8 ಏಪ್ರಿಲ್ 2024 ರಂದು ಸಂಭವಿಸಲಿದೆ. ಇದನ್ನು ವೈದಿಕ ದೃಷ್ಟಿಯಿಂದ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣ ಸಮಯದಲ್ಲಿ ನೆಗೆಟಿವ್ ಎನರ್ಜಿ ಅಂದರೆ ನಕರಾತ್ಮಕ ಶಕ್ತಿ ಅಧಿಕವಿರುತ್ತದೆ.
ಗ್ರಹಣದ ಸಮಯ ಯಾವಾಗ?
ವರ್ಷದ ಮೊದಲ ಸೂರ್ಯಗ್ರಹಣ ಸೋಮವಾರ, ಏಪ್ರಿಲ್ 8 ರಂದು ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ ಬೆಳಗ್ಗೆ 2:22 ಕ್ಕೆ ಕೊನೆಗೊಳ್ಳುತ್ತದೆ.
ಈ ಸೂರ್ಯಗ್ರಹಣ ಎಲ್ಲಲ್ಲಿ ಕಂಡು ಬರಲಿದೆ?
2024 ರ ಮೊದಲ ಸೂರ್ಯಗ್ರಹಣ ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಅರುಬಾ, ಬರ್ಮುಡಾ, ಕೆರಿಬಿಯನ್ ನೆದರ್ಲ್ಯಾಂಡ್ಸ್, ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್, ಐರ್ಲೆಂಡ್, ಐಸ್ಲ್ಯಾಂಡ್, ಜಮೈಕಾ, ನಾರ್ವೆ, ಪನಾಮ, ನಿಕರಾಗುವಾ, ರಷ್ಯಾ, ಪೋರ್ಟೊ ರಿಕೊ ಮಾರ್ಟಿನ್ , ಸ್ಪೇನ್, ಬಹಾಮಾಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ವೆನೆಜುವೆಲಾ ಈ ಭಾಗಗಳಲ್ಲಿ ಕಂಡು ಬರಲಿದೆ.
ಭಾರತಕ್ಕೆ ಗ್ರಹಣದ ಪ್ರಭಾವ ಇರಲ್ಲ
ಚಂದ್ರಗ್ರಹಣದಂತೆ, ಸೂರ್ಯಗ್ರಹಣವೂ ಭಾರತದಲ್ಲಿ ಕಾಣಿಸುವುದಿಲ್ಲ, ಏಕೆಂದರೆ ಸೂರ್ಯಗ್ರಹಣ ಸಂಭವಿಸುವಾಗ ಅದು ರಾತ್ರಿ ಹೊತ್ತು. ಹಾಗಾಗಿ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸಲ್ಲ.
ಗ್ರಹಣದ ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಗ್ರಹಣದ ನಂತರ ಮುಂದುವರಿಯುತ್ತದೆ, ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಇಲ್ಲಿ ಮಾನ್ಯವಾಗಿರುವುದಿಲ್ಲ.
ಸೂರ್ಯಗ್ರಹಣವನ್ನು ವೀಕ್ಷಿಸುವ ವಿಧಾನ ಹೇಗೆ?
ಭಾರತದಲ್ಲಿ ಈ ಬಾರಿ ಸೂರ್ಯಗ್ರಹಣ ಗೋಚರಿಸುತ್ತಿಲ್ಲ. ಆದರೆ ನೀವು ಸೂರ್ಯಗ್ರಹಣವನ್ನು ಸೂರ್ಯಗ್ರಹಣವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಇನ್ನು ಇದು ಗೋಚರಿಸುವ ಕಡೆ ಟೆಲಿಸ್ಕೋಪ್ ಸಹಾಯದಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಬಹುದು, ಕಪ್ಪು ಪಾಲಿಮರ್, ಅಲ್ಯುಮಿನೈಸ್ಡ್ ಮೈಲಾರ್, ಶೇಡ್ ಸಂಖ್ಯೆ 14 ರ ವೆಲ್ಡಿಂಗ್ ಗ್ಲಾಸ್ ಅಥವಾ ಎಕ್ಲಿಪ್ಸ್ ಗ್ಲಾಸ್‌ಗಳಂತಹ ಕಣ್ಣಿನ ಫಿಲ್ಟರ್‌ಗಳನ್ನು ಕೂಡ ಬಳಸಬಹುದು. ಈ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಕಣ್ಣಿಗೆ ಹಾನಿಯುಂಟಾಗುವುದು.
ಗ್ರಹಣದ ದಿನ ಯಾವುದೇ ಶುಭ ಕಾರ್ಯ ಮಾಡಬಾರದು, ಬರ್ಭಿಣಿಯರು ಮನೆಯಿಂದ ಹೊರಗಡೆ ಓಡಾಡಬಾರದು, ಅಲ್ಲದೆ ಗ್ರಹಣದ ಹೊತ್ತಿನಲ್ಲಿ ರೋಗಿಗಳು, ಮಕ್ಕಳು, ಗರ್ಭಿಣಿಯರನ್ನು ಹೊರತು ಪಡಿಸಿ ಯಾರೂ ಊಟ ಮಾಡಬಾರದು ಎಂದು ಹೇಳಲಾಗುವುದು. ಗ್ರಹಣದ ಬಳಿಕ ಮಾಡುವ ದಾನ ಶ್ರೇಷ್ಠ ಎಂದು ನಂಬಲಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications