Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಪ್ರಿಲ್ 8 ಸೂರ್ಯಗ್ರಹಣ: ಗ್ರಹಣದಂದು ಕಂಡು ಬರುವ 8 ವಿಚಿತ್ರ ಘಟನೆಗಳಿವು
ಏಪ್ರಿಲ್ 8ಕ್ಕೆ ಸೂರ್ಯಗ್ರಹಣ, ಈ ವರ್ಷದ ಮೊದಲ ಸೂರ್ಯಗ್ರಹಣ. ಸೂರ್ಯಗ್ರಹಣವನ್ನು ವಿಜ್ಞಾನಕ್ಕೆ ಇದು ಖಗೋಳದಲ್ಲಿ ನಡೆಯುವ ವಿದ್ಯಾಮಾನವಾದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಇದು ಕೆಟ್ಟ ಸಮಯ. ಈ ಗ್ರಹಣದ ಸಮಯದಲ್ಲಿ ಕೆಟ್ಟದು ಸಂಭವಿಸುತ್ತದೆ, ಜನರ, ಪ್ರಾಣಿಗಳ ಹಾಗೂ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುವುದು.
ಇನ್ನು ಸೂರ್ಯಗ್ರಹಣದ ಸಮಯದಲ್ಲಿ ಈ 8 ವಿಚಿತ್ರಗಳು ಸಂಭವಿಸುತ್ತದೆ:

ಬೇಯ್ಲಿ ಬೀಡ್ಸ್
ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನ ಸುತ್ತ ಬೆಳ್ಳಿಯಾಕಾರದ ವರ್ತುಲ ಏರ್ಪಡುತ್ತದೆ, ಅದು ನೋಡಲು ಮಣಿಗಳ ನೆಕ್ಲೆಸ್ ರೀತಿ ಕಾಣುತ್ತದೆ. ಈ ವಿದ್ಯಾಮಾನವನ್ನು ಬೇಯ್ಲಿ ಬೀಡ್ಸ್ ಎಂದು ಕರೆಯಲಾಗುವುದು. ಖಗೋಳ ಶಾಸ್ತ್ರಜ್ಞ ಫ್ರಾನ್ಸಿಸ್ ಬೇಯ್ಲಿ1836ರಲ್ಲಿ ಇದರ ಬಗ್ಗೆ ವಿವರಿಸಿದ್ದರು.
ಹೂವಿನಂತೆ ಕಂಡು ಬರುವ ಸೌರಮಂಡಲ
ಈ ದೃಶ್ಯ ಭೂಮಿಯಿಂದ ಗೋಚರಿಸುವುದಿಲ್ಲ, ಆದರೆ ಚಂದ್ರನ ಹಿಂಭಾಗದಲ್ಲಿ ಹೂವಿನ ದಳಗಳಂತೆ ಸೂರ್ಯ ಕಿರಣಗಳು ಗೋಚರಿಸುವುದು.
ಉಷ್ಣಾಂಶ ಕಡಿಮೆಯಾಗುವುದು
ಸೂರ್ಯಗ್ರಹಣದ ಸಮಯದಲ್ಲಿ ವಾತಾವರನದಲ್ಲಿ ಉಷ್ಣಾಂಶ ಕಡಿಮೆಯಾಗುವುದು. ಸೂರ್ಯನನ್ನು ಮೋಡಗಳು ಮುಚ್ಚಿದಂತೆ ಗೋಚರಿಸುವುದು, ಮೋಡ ಮುಸಕಿದ ವಾತಾವರಣದಂತೆ ಇರುತ್ತದೆ, ಉಷ್ಣಾಂಶ 5-10 ಡಿಗ್ರಿ ಕಡಿಮೆಯಾಗುವುದು.
ಗಾಳಿ ಬೀಸುವ ದಿಕ್ಕು ಬದಲಾಗುವುದು
ಸೂರ್ಯಗ್ರಹಣದ ಸಮಯದಲ್ಲಿ ಗಾಳಿ ಬೀಸುವ ದಿಕ್ಕು ಬದಲಾಗುವುದು ಎಂದು 2016ರಲ್ಲಿ ನಡೆಸಿದ ಅಧ್ಯಯನದಿಂದ ಬದಲಾಗುವುದು. ಇದು ಪೂರ್ಣ ಹಾಗೂ ಭಾಗಶಃ ಸೂರ್ಯಗ್ರಹಣದ ಸಮಯದಲ್ಲಿಯೂ ಕಂಡು ಬರುವುದು.
ಪ್ರಾಣಿಗಳಿಗೆ ಗೊಂದಲ ಉಂಟಾಗುವುದು
ಬೆಳಕಿನ ಸಮಯದಲ್ಲಿ ಇದ್ದಕ್ಕಿದ್ದಂತೆ ಕತ್ತಲು ಆವರಿಸಿದಾಗ ಪ್ರಾಣಿಗಳಲ್ಲಿ ಗೊಂದಲ ಉಂಟಾಗುವುದು. ದನಗಳು ಕೊಠಡಿಗೆ ಮರಳುತ್ತವೆ. ಪಕ್ಷಿಗಳು ತಮ್ಮ ಗೂಡು ಸೇರಲು ಹೋಗುತ್ತವೆ, ಒಂದು ರೀತಿಯ ಗೊಂದಲ ಕಂಡು ಬರುವುದು.
ರೇಡಿಯೋ ಅಲೆಗಳಲ್ಲಿ ವ್ಯತ್ಯಾಸ ಉಂಟಾಗುವುದು
ಸೂರ್ಯಗ್ರಹಣದ ಸಮಯದಲ್ಲಿ ರೆಡಿಯೋ ತರಂಗಗಳಲ್ಲಿ ವ್ಯತ್ಯಾಸ ಉಂಟಾಗುವುದು. ಏಪ್ರಿಲ್ 8ರ ಸೂರ್ಯಗ್ರಹಣದಲ್ಲ ಉತ್ತರ ಅಮೆರಿಕಾದಲ್ಲಿ ರೇಡಿಯೋ ತರಂಗಗಳ ಮೇಲೆ ಸೂರ್ಯಗ್ರಹಣದ ಪ್ರಭಾವದ ಬಗ್ಗೆ ಅಧ್ಯಯನ ನಡೆಯಲಿದೆ.
ಬ್ಯಾಕ್ಟಿರಿಯಾಗಳ ಉತ್ಪತ್ತಿ ಹೆಚ್ಚಾಗುವುದು
ಗ್ರಹಣದ ಸಮಯದಲ್ಲಿ ತಿನ್ನಬಾರದು ಎಂದು ಹೇಳುತ್ತಾರೆ, ಇದು ನಂಬಿಕೆ ಮಾತ್ರವಲ್ಲ ಇದರ ಹಿಂದೆ ಕೂಡ ವೈಜ್ಞಾನಿಕ ಕಾರಣವಿದೆ. ಈ ಸಮಯದಲ್ಲಿ ಸೂಕ್ಷ್ಮಾಣುಗಳ ಚಟುವಟಿಕೆ ಇರುತ್ತದೆ. ಇಂಥ ಆಹಾರ ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ನೆರಳುಗಳು ಭಿನ್ನವಾಗಿರುತ್ತದೆ
ಈ ಸೂರ್ಯಗ್ರಹಣ ಭಾರತದಲ್ಲಿ ಕಂಡು ಬರುವುದಿಲ್ಲ, ಆದ್ದರಿಂದ ಈ ಪ್ರಯೋಗ ಈ ಬಾರಿ ನಿಮಗೆ ಮಾಡಲು ಸಾಧ್ಯವಾಗುವುದಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಟೆಲಿಸ್ಕೋಪ್ ಇಟ್ಟು ಗ್ರಹಣ ನೋಡಲು ಆಸಕ್ತಿ ತೋರಿಸುತ್ತೇವೆ, ಆದರೆ ನೆರಳು ಗಮನಿಸುವುದಿಲ್ಲ. ಗ್ರಹಣದಲ್ಲಿ ವಸ್ತುಗಳ, ನಮ್ಮ ನೆರಳು ಭಿನ್ನವಾಗಿರುತ್ತದೆ. ನೆರಳು ಒಂದು ರೀತಿ ರಿಂಗ್ ರಿಂಗ್ ರೀತಿ ಕಂಡು ಬರುವುದು.
ಈ ಘಟನೆಗಳು ಎಲ್ಲೆಲ್ಲಿ ನಡೆಯಲಿದೆ, ಈ ಬಾರಿ ಭಾರತದಲ್ಲಿ ಗೋಚರಿಸುವುದಿಲ್ಲ ಏಕೆ?
ಈ ವರ್ಷದ ಮೊದಲ ಸೂರ್ಯಗ್ರಹಣ ಉತ್ತರ ಅಮೆರಿಕಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ , ಕೆನಡಾದಲ್ಲಿ ಕಂಡು ಬರಲಿದೆ. ಅಲ್ಲಿ ಕಾ;ಲ ಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ.
ಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆ ಈ ಭಾಗಗಳಲ್ಲಿ ಈ ಸೂರ್ಯಗ್ರಹಣದಲ್ಲಿ ಗೋಚರಿಸಲಿದೆ.
ಭಾರತದಲ್ಲಿ ಸೂರ್ಯಗ್ರಹಣ
ಈ ಬಾರಿ ಸೂರ್ಯಗ್ರಹಣ ಭಾರತದಲ್ಲಿ ಕಂಡು ಬರುವುದಿಲ್ಲ. ಏಕೆಂದರೆ ಈ ಅವಧಿಯಲ್ಲಿ ಭಾರತದಲ್ಲಿ ರಾತ್ರಿಯ ಸಮಯ, ಹಾಗಾಗಿ ಈ ಸೂರ್ಯಗ್ರಣದ ಸೂತಕ ಕಾಲ ಭಾರತದಲ್ಲಿ ಮಾನ್ಯವಾಗುವುದಿಲ್ಲ. ಈ ವರ್ಷ ಮೊದಲ ಚಂದ್ರಗ್ರಹಣವೂ ಕಂಡು ಬಂದಿರಲಿಲ್ಲ, ಸೂರ್ಯಗ್ರಹಣವೂ ಕಂಡು ಬರುವುದಿಲ್ಲ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications