Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ತಿರುಪತಿಯ ಗರ್ಭಗುಡಿಯಲ್ಲಿ ಮಂದಹಾಸ ಬೀರಿದ ತಿಮ್ಮಪ್ಪ: ಈ ಪವಾಡ ದೃಶ್ಯದ ವೀಡಿಯೋ ವೈರಲ್
ತಿರುಪತಿ ತಿಮ್ಮಪ್ಪನ ಆಗಾಗ ಚಮತ್ಕಾರ ತೋರಿಸುತ್ತಲೇ ಇರುತ್ತಾನೆ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹರಿಕೆಗಳನ್ನು ತೀರಿಸಲೆಂದೇ ಇಲ್ಲಿಗೆ ಜನರು ಬರುತ್ತಾರೆ, ತಿಮ್ಮಪ್ಪನ ಬಳಿ ಭಕ್ತಿಯಿಂದ ಬೇಡಿಕೊಂಡರೆ ತನ್ನ ಭಕ್ತರ ಎಲ್ಲಾ ಕೋರಿಕೆ ನೆರವೇರಿಸಿಕೊಡುತ್ತಾರೆ ತಿಮ್ಮಪ್ಪ ಎಂದು ಭಕ್ತರು ಬಲವಾಗಿ ನಂಬುತ್ತಾರೆ. ಇದೀಗ ಒಂದು ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪೂಜೆಯ ವೇಳೆ ತಿಮ್ಮಪ್ಪ ಮುಖದಲ್ಲಿ ಮಂದಹಾಸ ಕಂಡು ಬಂದ ದೃಶ್ಯ ಅದಾಗಿದ್ದು ಅದನ್ನು ನೋಡಿದ ಭಕ್ತರು ಭಾವಪರವಶರಾಗಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೂ ಹಲವು ವಿಶೇಷ ಪೂಜೆಗಳನ್ನು ನಡೆಯುತ್ತಿದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಅಧಿಕವಿರುತ್ತದೆ. ಇಲ್ಲಿ ಅಕ್ಟೋಬರ್ 23ರವರೆಗೆ ನವರಾತ್ರಿ ಬ್ರಹ್ಮೋತ್ಸವ ನಡೆಯುತ್ತಿದ್ದು ಪೂಜೆಯ ವೇಳೆ ತಿಮ್ಮಪ್ಪನ ಮುಖದಲ್ಲಿ ಮಂದಹಾಸ ಮೂಡಿರುವುದು ವೀಡಿಯೋದಲ್ಲಿ ಚಿತ್ರೀಕರಣವಾಗಿದ್ದು ಆ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಕಳೆದ ಬಾರಿಯೂ ಅಪರೂಪದ ಘಟನೆ ನಡೆದಿತ್ತು
ಆಕಾಶದಲ್ಲಿ ಕಾಮನ ಬಿಲ್ಲು ಮೂಡುವುದು ಸಹಜ, ಆದರೆ ತಿರುಪತಿ ತಿಮ್ಮಪ್ಪನ ದೇವಾಲಯ ಸುತ್ತಲೂ ಆಕಾಶದಲ್ಲಿ ಕಾಮನಬಿಲ್ಲು ಮೂಡಿ ಬಂದಿತ್ತು, ಆ ಸುಂದರ ದೃಶ್ಯವನ್ನು ನೋಡಿದವರು ಬಾಲಾಜಿಯೇ ಕಾಮನಬಿಲ್ಲಿನ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದ್ದಾನೆ ಎಂದು ಭಕ್ತಿಯಿಂದ ಕೈ ಮುಗಿದಿದ್ದರು, ಅಷ್ಡೊಂದು ಆಕರ್ಷಕವಾಗಿತ್ತು ಆ ದೃಶ್ಯ. ಇದುವರೆಗೂ ಅಂಥ ಘಟನೆ ಯಾರೂ ನೋಡಿರಲಿಲ್ಲ, ದೇವಾಲಯವನ್ನು ಸಂಪೂರ್ಣವಾಗಿ ಆವರಿಸಿದ ಕಾಮನ ಬಿಲ್ಲಿನ ಸುಂದರ ದೃಶ್ಯದ ವೀಡಿಯೋ ತುಂಬಾನೇ ವೈರಲ್ ಆಗಿತ್ತು, ಇದೀಗ ಗರ್ಭಗುಡಿಯಲ್ಲಿರುವ ತಿಮ್ಮಪ್ಪ ಮಂದಹಾಸ ಬೀರಿರುವ ವೀಡಿಯೋ ವೈರಲ್ ಆಗುತ್ತಿದೆ.
ದೇಶದ ಅತ್ಯಂತ ಶ್ರೀಮಂತ ದೇವಾಲಯವಾಗಿರುವ ತಿರುಪತಿಗೆ ಪ್ರತಿನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಿರುಪತಿ ದೇವಾಲಯದ ಗರ್ಭಗುಡುಯನ್ನು ಆನಂದ ನಿಲಯಂ ಎಂದು ಕರೆಯಲಾಗುವುದು. ಇಲ್ಲಿ ಬಾಲಾಜಿಯ ಸುಂದರವಾದ ವಿಗ್ರಹವಿದೆ. ಆ ವಿಗ್ರಹಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುವುದು, ಅದರಂತೆ ನವರಾತ್ರಿ ಬ್ರಹ್ಮೋತ್ಸವ ಪೂಜೆಯನ್ನು ಅರ್ಚಕರು ಮಂಗಳಾರತಿ ಎತ್ತುವಾಗ ತಿಮ್ಮಪ್ಪನ ವಿಗ್ರಹದಲ್ಲಿ ಮಂದಹಾಸ ಮೂಡಿದಂತೆ ಕಂಡು ಬಂದಿರುವುದು ಪವಾಡವಲ್ಲದೆ ಮತ್ತೇನು ಅಲ್ವಾ?
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications