Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ-ಸೂರ್ಯನ ಸಂಯೋಗದಿಂದ ಶುಕ್ರಾದಿತ್ಯ ಯೋಗ: 4 ರಾಶಿಯವರ ಅದೃಷ್ಟ ಬದಲು, ಹಣ, ಸಂಪತ್ತು ಹರಿವು
ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆ ಗ್ರಹಗಳ ರಾಜ ಎಂದು ಕರೆಯಲಾಗುವ ಸೂರ್ಯನ ಚಲನೆಯನ್ನು ಕೂಡ ಪ್ರಮುಖ ಪ್ರಕ್ರಿಯೆ ಎಂದು ಹೇಳಲಾಗಿದೆ. ಸದ್ಯ ಈಗ ಸೂರ್ಯನು ಮಕರ ರಾಶಿ ಪ್ರವೇಶಿಸಿದ್ದಾನೆ. ಇನ್ನು ಮಕರ ರಾಶಿಯಲ್ಲಿ ಶುಕ್ರನು ಕೂಡ ಸಂಚರಿಸುತ್ತಿರುವುದರಿಂದ ಅಲ್ಲಿ ಶುಕ್ರಾದಿತ್ಯ ಯೋಗ ರೂಪುಗೊಳ್ಳಲಿದೆ.
ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಶುಭ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತು ವೃದ್ದಿ, ಐಶ್ವರ್ಯ, ವೃತ್ತಿಪರತೆ, ಹಣಕಾಸು ವಿಚಾರದಲ್ಲಿ ಶುಭವಾಗುವುದು ನೋಡಬಹುದು. ಹಾಗೆ ಈ ಅಪರೂಪದ ಯೋಗದಿಂದಾಗಿ ಆರೋಗ್ಯ, ಆಯಸ್ಸು ವೃದ್ಧಿಯಂತಹ ಅಪರೂಪದ ಶುಭವನ್ನು ಪಡೆಯಬಹುದು.

ಹಾಗಾದ್ರೆ ಸೂರ್ಯ ಹಾಗೂ ಶುಕ್ರನ ಈ ಸಂಯೋಗದಿಂದಾಗಿ ಈ ಶುಕ್ರಾದಿತ್ಯ ಯೋಗವು ರೂಪುಗೊಳ್ಳಲಿದೆ. ಈ ಯೋಗವು ಹಲವು ರಾಶಿಯವರಿಗೆ ಶುಭದಾಯಕ, ಹಾಗೆ ಧನಾತ್ಮಕ ದಿನಗಳನ್ನು ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ಈ ಸಮಯದಲ್ಲಿ ಸೂರ್ಯ ಹಾಗೂ ಶುಕ್ರನ ಸಂಯೋಗವು ಸಿಂಹ ರಾಶಿಯ ಜನರಲ್ಲಿ ಶುಭ ಕಾಲವನ್ನು ತರಲಿದೆ. ಹೊಸ ಆರ್ಥಿಕ ಲಾಭಗಳ ನೀವು ನೋಡಬಹುದು. ಅದ್ರಲ್ಲೂ ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರುವ ಸಮಯ ಇದಾಗಲಿದೆ. ಹೊಸ ಹೂಡಿಕೆಗಳು, ಉಳಿತಾಯಗಳು, ಆರ್ಥಿಕ ವಿಚಾರಗಳು ನಿಮ್ಮ ಪರವಾದ ವಿಚಾರಗಳಿಂದ ತುಂಬಿರಲಿದೆ. ನಿಮ್ಮ ಸ್ವಂತ ಉದ್ಯೋಗವು ನಿಮಗೆ ಶುಭದಾಯಕವಾಗಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮಗೆ ಶುಭವಾಗುವುದು ನೋಡಬಹುದು. ಪ್ರೇಮಿಗಳು ಹಾಗೆ ದಾಂಪತ್ಯ ವಿಚಾರದಲ್ಲಿ ಶುಭ ಸಮಾಚಾರಗಳ ನೋಡಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ಶುಕ್ರಾದಿತ್ಯ ಯೋಗವು ಹಲವು ರೀತಿಯಲ್ಲಿ ಶುಭವಿದೆ. ಅದ್ರಲ್ಲೂ ನಿಮ್ಮ ಹಣಕಾಸಿನ ವಿಚಾರವಾಗಿ ನಿಮಗೆ ಅನುಕೂಲಕರ ಸಮಯ ಆಗಿರಲಿದೆ. ಹಲವರಲ್ಲಿ ಈ ಸಮಯವು ಆರ್ಥಿಕ ಸುಧಾರಣೆ ನೋಡಬಹುದು. ಬ್ಯಾಂಕಿಂಗ್ ವಿಚಾರಗಳು, ಸಾಲ ಪಡೆಯುವ ವಿಚಾರಗಳಲ್ಲಿ ಶುಭವಾಗುತ್ತಿದೆ. ನಿಮ್ಮ ದೊಡ್ಡ ಆರ್ಥಿಕ ಸಮಸ್ಯೆಯೊಂದರಿಂದ ಹೊರಬರುತ್ತೀರಿ. ಮನೆಯಲ್ಲಿ ಮಾನಸಿಕ ಶಾಂತಿ ಹಾಗೆ ದುಗುಡತೆ ದೂರಾಗಲಿದೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಅತ್ಯುತ್ತಮ ಉದ್ಯೋಗವಕಾಶಗಳು ಒಲಿದು ಬರಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ನಿಮಗೆ ಶುಭದಾಯಕ ಸಮಯ ಆಗಿರಲಿದೆ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಈ ಸಮಯವು ಅನುಕೂಲಕರ. ನಿಮ್ಮ ಆರ್ಥಿಕ ಹಾಗೂ ವ್ಯವಹಾರ ಸಂಬಂಧಿತ ವಿಚಾರದಲ್ಲಿ ಧನಾತ್ಮಕ ಬದಲಾವಣೆ ತರಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ವಿಚಾರಗಳು ಶುಭವಾಗುತ್ತವೆ. ಸೌಂದರ್ಯ, ಕಲೆ ಸಂಬಂಧಿತ ವಿಚಾರದಲ್ಲಿ ಶುಭವಿದೆ. ಮಕ್ಕಳ ಉದ್ಯೋಗ ಸಂಬಂಧೀ ವಿಚಾರವಾಗಿ ಈ ಸಮಯವು ಧನಾತ್ಮಕವಾಗಿರಲಿದೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ನಿಮ್ಮ ಪ್ರಯತ್ನವು ಫಲ ನೀಡಲಿದೆ. ವಿದೇಶ ಪ್ರವಾಸ ಹಾಗೆ ವಾಹನ ಖರೀದಿಯಂತಹ ಐಷಾರಾಮಿ ವಿಚಾರಗಳಲ್ಲಿಯೂ ನಿಮಗೆ ಶುಭದಾಯಕ ಸಮಯ ಇದಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ಶುಕ್ರಾದಿತ್ಯ ಯೋಗವು ಹಲವು ರೀತಿಯಲ್ಲಿ ಶುಭದಾಯಕ. ಆರ್ಥಿಕ ವಿಚಾರದಲ್ಲಿ ನಿಮಗೆ ಬಹು ಸಮಯದಿಂದ ಇದ್ದಂತಹ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಎದುರಾಗುತ್ತಿದ್ದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಅವಿವಾಹಿತರಲ್ಲಿ ಖರ್ಚುಗಳು ಕಡಿಮೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications