Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಸಂಕ್ರಾಂತಿಯಲ್ಲಿ ಶುಕ್ರಾದಿತ್ಯ ಯೋಗ: ಹಬ್ಬದ ಬಳಿಕ ಜೀವನದಲ್ಲಿ ಸುವರ್ಣಯುಗ!
ವೈದಿಕ ಜ್ಯೋತೊಷ್ಯದಲ್ಲಿ ಹಲವು ಗ್ರಹಗಳ ಸಂಚಾರವು ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಹಿಂದೂಗಳು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಜ್ಯೋತಿಷ್ಯದಲ್ಲಿ ಹೇಳಲಾಗುವ ಹಲವು ಗ್ರಹಗಳಲ್ಲಿನ ಬದಲಾವಣೆಯು ಒಂದಕ್ಕೊಂದು ಸಂಬಂಧ ಹೊಂದಿರಲಿವೆ. ಸದ್ಯ ಈಗ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದೇವೆ, ಈ ಸಮಯದಲ್ಲಿ ಸೂರ್ಯನ ಪಥ ಬದಲಿಸುವುದು ನೋಡಬಹುದು.
ಜನವರಿ 14 ಮತ್ತು 15ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವು ಶುಕ್ರ ಮತ್ತು ಗ್ರಹಗಳ ರಾಜ ಎಂದು ಪರಿಗಣಿಸಲಾದ ಸೂರ್ಯ ಒಟ್ಟಿಗೆ ಪ್ರಯಾಣಿಸುತ್ತಾರೆ. ಇದಲ್ಲದೆ ಈ ಎರಡು ಗ್ರಹಗಳು ಶನಿ ದೇವನಿಂದ ಆಳಲ್ಪಡುವ ಮಕರ ರಾಶಿಗೆ ಚಲಿಸುವರು. ಈ ಎರಡು ಗ್ರಹಗಳ ಸಂಯೋಜನೆಯು ಅತ್ಯಂತ ಶಕ್ತಿಶಾಲಿ ಶುಕ್ರಾದಿತ್ಯ ರಾಜಯೋಗವನ್ನು ಸೃಷ್ಟಿಸಲಿದೆ.

ಈ ರಾಜಯೋಗದ ಪ್ರಭಾವವು 12 ರಾಶಿ ಜನರಿಗೆ ಬದಲಾವಣೆಗಳ ತರಬಹುದು. ವಿಶೇಷವಾಗಿ ಕೆಲವು ರಾಶಿ ಜನರಿಗೆ ತಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ನೋಡಬಹುದು. ಅಲ್ಲದೆ ಅವರು ಕೆಲಸದಲ್ಲಿ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತಾರೆ. ಅಲ್ಲದೆ ಶುಕ್ರಾದಿತ್ಯ ಯೋಗದಿಂದಾಗಿ ಮೂರು ರಾಶಿಯವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ.
ಮೇಷ ರಾಶಿ
ಮೇಷ ರಾಶಿಯವರು ಶುಕ್ರಾದಿತ್ಯ ರಾಜಯೋಗದಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಏಕೆಂದರೆ ಈ ರಾಶಿಯ 10 ನೇ ಮನೆಯಲ್ಲಿ ಶುಕ್ರಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಬೆಳವಣಿಗೆಯನ್ನು ತರುತ್ತದೆ. ನಿಮ್ಮ ಹಣಕಾಸು ವಿಚಾರದಲ್ಲಿನ ದೊಡ್ಡ ಸಮಸ್ಯೆಯೊಂದು ಬಗೆಹರಿಯಲಿದೆ. ಸಂಕ್ರಾಂತಿಯ ಬಳಿಕ ನಿಮ್ಮ ದೇವಾಲಯ, ತೀರ್ಥ ಕ್ಷೇತ್ರ ಭೇಟಿ ಸಂಭವವಿದೆ. ಉದ್ಯೋಗದಲ್ಲಿರುವ ಮಂದಿಗೆ ಈ ಸಂಕ್ರಾಂತಿ ಶುಭವಾಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಹಲವು ರೀತಿಯ ಶುಭವಿದೆ. ಆಪ್ತರಿಂದ ಸಹಕಾರಗಳಿವೆ. ಉಳಿತಾಯ ವಲಯದಲ್ಲಿ ನಿಮಗೆ ಉತ್ತಮ ಸಮಯ ಎನ್ನಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುವ ಕೆಲಸ ಮಾಡುವಿರಿ. ಗೃಹಿಣಿಯರಲ್ಲಿ ವಾಹನ ಭಾಗ್ಯವಿದೆ. ಮನೆ ವಿಚಾರದಲ್ಲಿ ಖರ್ಚುಗಳಿದ್ದರೂ ಅದರಿಂದ ನೆಮ್ಮದಿ ಸಿಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ಶುಕ್ರಾದಿತ್ಯ ರಾಜಯೋಗದಿಂದಾಗಿ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಾರೆ. ನಿಮ್ಮ ಹಲವು ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶಗಳ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ನಿಮ್ಮ ಕೈ ಸೇರಲಿದೆ. ಅನೇಕರಲ್ಲಿ ವ್ಯವಹಾರ ಸಂಬಂಧಿ ಅಡ್ಡಿಗಳು ನಿವಾರಣೆಯಾಗಲಿದೆ. ಹೊಸ ಆದಾಯ ಮೂಲಗಳು ಹುಡುಕಿ ಬರಲಿವೆ. ನಿಮ್ಮ ಹಣಕಾಸು ವಿಚಾರದಲ್ಲಿದ್ದ ಒತ್ತಡಗಳು ಒಂದೊಂದಾಗಿ ನಿವಾರಣೆಯಾಗುವ ಸಮಯ ಇದಾಗುತ್ತಿದೆ. ದಾಂಪತ್ಯ ಜೀವನ ಸುಖಕರವಾಗಲಿದೆ. ಮಕ್ಕಳ ಅನಾರೋಗ್ಯ ಸಂಬಂಧಿ ಸಮಸ್ಯೆ ಪರಿಹಾರವಾಗಬಹುದು. ವಾಹನ ಕುರಿತ ವಿಚಾರದಲ್ಲೂ ಶುಭವಿದೆ.
ಮಕರ ರಾಶಿ
ಶುಕ್ರಾದಿತ್ಯ ರಾಜಯೋಗದಿಂದಾಗಿ ಮಕರ ರಾಶಿಯವರಿಗೆ ಸುವರ್ಣಯುಗ ಪ್ರಾರಂಭವಾಗಲಿದೆ. ಏಕೆಂದರೆ ಈ ರಾಜಯೋಗವು ಮೊದಲ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಇದು ನಿಮ್ಮ ಹಣಕಾಸಿನ, ಸಂಪತ್ತಿನ ಸವಾಲುಗಳನ್ನು ನಿವಾರಿಸಲಿವೆ. ಹಾಗೆ ವೃತ್ತಿ ಜೀವನ ಸಂಬಂಧಿತ ವಿಚಾರದಲ್ಲಿನ ಬಿಕ್ಕಟ್ಟುಗಳ ನಿವಾರಿಸಲಿದೆ. ಅನೇಕರಲ್ಲಿ ಈ ಸಮಯ ಸೂಕ್ತ ಫಲಿತಾಂಶಗಳ ಪಡೆಯಲು ನೆರವಾಗಿ ನಿಲ್ಲಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿನ ಮನಸ್ತಾಪಗಳು ಈ ಸಮಯದಿಂದ ದೂರಾಗಲಿದೆ. ಸುದೀರ್ಘ ಅನಾರೋಗ್ಯ ಸಮಸ್ಯೆ ಸುಧಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











