Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಿಥುನ ರಾಶಿಯಲ್ಲಿ ಉಂಟಾಗಿದೆ ಶುಕ್ರಾದಿತ್ಯ ಯೋಗ : ಜುಲೈ 16ರವರೆಗೆ ಈ 3 ರಾಶಿಯವರಿಗೆ ಇದರ ಫಲ ದೊರೆಯಲಿದೆ
ಇದೀಗ ಮಿಥುನ ರಾಶಿಯಲ್ಲಿ ಶುಕ್ರಾದಿತ್ಯ ಯೋಗ ಉಂಟಾಗಿದೆ. ಅದೃಷ್ಟದ ಗ್ರಹವಾದ ಶುಕ್ರನು ಇದೇ ಜೂನ್ 12ಕ್ಕೆ ಮಿಥುನ ರಾಶಿಗೆ ಸಂಚರಿಸಿದೆ, ಜೂನ್ 15ಕ್ಕೆ ಗ್ರಹಗಳ ಅಧಿಪತಿ ಸೂರ್ಯ ಕೂಡ ಮಿಥುನ ರಾಶಿಗೆ ಸಂಚರಿಸಿದೆ. ಇದರಿಂದ ಶುಕ್ರಾದಿತ್ಯ ಯೋಗ ಉಂಟಾಗಿದೆ. ಈ ಯೋಗ ಒಂದು ತಿಂಗಳು ಅಂದರೆ ಜುಲೈ 16ರವರೆಗೆ ಇರಲಿದೆ.
ಈ ಶುಕ್ರಾದಿತ್ಯ ಯೋಗದಿಂದಾಗಿ ಈ ರಾಶಿಯವರು ಅದ್ಭುತ ಪ್ರಯೋಜನ ಪಡೆಯಲಿದ್ದಾರೆ:

ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ಶುಕ್ರಾದಿತ್ಯ ಯೋಗ ಉಂಟಾಗಿದೆ. ಈ ಹಯೋಗ ನಿಮಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವ ಸುಧಾರಿಸಲಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ಪತಿ-ಪತ್ನಿಯರ ನಡುವೆ ಪ್ರೀತಿ, ವಾತ್ಸಲ್ಯ ಇರಲಿದೆ. ಉದ್ಯಮಿಗಳು ಉತ್ತಮ ಲಾಭ ಗಳಿಸುತ್ತೀರಿ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕುಂಭ ರಾಶಿ
ಶುಕ್ರ ಮತ್ತು ಸೂರ್ಯನ ಸಂಯೋಗದಿಂದ ಕುಂಭ ರಾಶಿಯವರೂ ಉತ್ತಮ ಪ್ರಯೋಜನ ಪಡೆಯಲಿದ್ದಾರೆ. ಕುಂಭ ರಾಶಿಯಲ್ಲಿ ಶುಕ್ರಾದಿತ್ಯ ಯೋಗ 5ನೇ ಮನೆಯಲ್ಲಿ ಉಂಟಾಗಲಿದೆ. ಈ ಅವಧಿಯಲ್ಲಿ ಅಪೂರ್ಣವಾಗಿದ್ದ ಕೆಲವು ಪೂರ್ಣಗೊಳ್ಳಲಿದೆ. ನವ ವಿವಾಹಿತರು ಮಗುವಿಗೆ ಸಂಬಂಧಿಸಿದ ಖುಷಿಯ ಸುದ್ದಿಯನ್ನು ಪಡೆಯುತ್ತೀರಿ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು, ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿದೆ. ಪ್ರೇಮಿಗಳಿಗೆ ಈ ಅವಧಿ ಉತ್ತಮವಾಗಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ, ಇನ್ನು ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಕನ್ಯಾರಾಶಿ
ಶುಕ್ರಾದಿತ್ಯ ಯೋಗ ಕನ್ಯಾರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಉದ್ಯೋಗಿಗಳು ಬಡ್ತಿ ಪಡೆಯುತ್ತೀರಿ, ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಉದ್ಯೋಗಿಗಳಿಗೂ ಇದು ಉತ್ತಮ ಸಮಯ. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಬೇರೆ ಕಡೆ ಕೆಲಸಕ್ಕೆ . ಈ ಸಮಯದಲ್ಲಿ ನಿಮ್ಮ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ.
ಶುಕ್ರಾದಿತ್ಯ ಯೋಗದ ಪ್ರಭಾವ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶುಕ್ರ ಒಂದೇ ರಾಶಿಯಲ್ಲಿ ಸೇರಿದಾಗ ಶುಕ್ರಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಅತ್ಯಂತ ಮಂಗಳಕರ ಎಂದು ಹೇಳಲಾಗುವುದು. ಈ ಯೋಗವು ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅವರ ಜೀವನದ ಎಲ್ಲಾ ಸಮಸ್ಯೆ ಬಗೆಹರಿಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
