Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ.30ಕ್ಕೆ ಶುಕ್ರ-ವರುಣ ಸಂಯೋಗ: ಮೂರು ರಾಶಿಯವರ ಹಳೆಯ ಕನಸುಗಳು ಈಡೇರುವ ಸಮಯ
ಜ್ಯೋತಿಷ್ಯದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ರಾಶಿಗಳ, ನಕ್ಷತ್ರಗಳ ಬದಲಾಯಿಸುತ್ತವೆ. ಇದು ಶುಭ ಮತ್ತು ಅಶುಭ ರಾಜಯೋಗಗಳನ್ನು ರೂಪಿಸುತ್ತವೆ, ಇದು ಮಾನವ ಜೀವನ ಮತ್ತು ಪ್ರಪಂಚದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 30 ರಂದು ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಗ್ರಹಗಳಾದ ಶುಕ್ರ ಮತ್ತು ವರುಣನ ಸಂಯೋಗವಾಗಲಿದೆ.
ಸೌರಮಂಡಲದಲ್ಲಿನ 9 ಗ್ರಹಗಳ ಹೊರತಾಗಿಯೂ ಹಲವು ಗ್ರಹಗಳನ್ನು ಹೆಸರಿಸಲಾಗುತ್ತದೆ. ಆದ್ರೆ ಅವುಗಳಿಗೆ ಯಾವುದೇ ರೂಪವಿರುವುದಿಲ್ಲ ಅದ್ರಲ್ಲೂ ರಾಹು ಕೇತು, ವರುಣ ಸಹ ಬರಲಿದ್ದಾರೆ. ಈಗ ವರುಣ ಹಾಗೂ ಶುಕ್ರನ ಸಂಯೋಗವು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ತಿಂಗಳ ಕೊನೆಯಲ್ಲಿ ಈ ಎರಡು ಗ್ರಹಗಳ ಸಂಯೋಗವು ಡಿಸೆಂಬರ್‌ನಲ್ಲಿ ಅದರ ಪರಿಣಾಮಗಳ ನೋಡಬಹುದು.

ಡಿಸೆಂಬರ್ ತಿಂಗಳನ್ನು ಅನೇಕರಿಗೆ ವಿಶೇಷವಾಗಿಸುತ್ತದೆ. ಈ ರಾಶಿ ಜನರಿಗೆ ಹೊಸ ಉದ್ಯೋಗ ಮತ್ತು ಅಪಾರ ಆರ್ಥಿಕ ಲಾಭಗಳನ್ನು ಪಡೆಯಬಹುದು. ಈ ಅದೃಷ್ಟ ರಾಶಿಗಳು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ವೈದಿಕ ಜ್ಯೋತಿಷ್ಯದಲ್ಲಿ, 9 ನೇ ಮತ್ತು 5 ನೇ ಮನೆಗಳನ್ನು ಆಳುವ ಗ್ರಹಗಳ ನಡುವಿನ ಸಂಬಂಧವನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಫಲಪ್ರದ ಮತ್ತು ಅದೃಷ್ಟಶಾಲಿ ಎಂದು ಕೂಡ ಪರಿಗಣಿಸಲಾಗುತ್ತದೆ.
ಈ ಎರಡು ಮನೆಗಳ ಅಧಿಪತಿಗಳು 9 ನೇ ಮತ್ತು 5 ನೇ ಮನೆಗಳಿಂದ ಪರಸ್ಪರ ಮುಖಾಮುಖಿಯಾದಾಗ ಅದರಿಂದ ನವಪಂಚಮ ಯೋಗ ರೂಪುಗೊಳ್ಳುತ್ತವೆ. ಹಾಗಾದ್ರೆ ಯಾರಿಗೆಲ್ಲಾ ಈ ಸಮಯದಲ್ಲಿ ಶುಭವಾಗಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೀನ ರಾಶಿ
ನವ ಪಂಚಮ ರಾಜಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಗಮನಾರ್ಹ ಪ್ರಗತಿಯನ್ನು ಅನುಭವಿಸಬಹುದು. ನಿಮ್ಮ ಹೊಸ ವ್ಯವಹಾರಗಳು ಲಾಭದಾಯಕವಾಗಬಹುದು. ಲಾಭಗಳನ್ನು ಪಡೆಯಲು ನೀವು ಮಾಡುವ ಕೆಲಸವು ಕೈ ಹಿಡಿಯಲಿದೆ. ನಿಮ್ಮ ವಾಹನ ಸಂಬಂಧಿತ ವಿಚಾರದಲ್ಲಿನ ದೊಡ್ಡ ನಷ್ಟ ಕಡಿಮೆಯಾಗಲಿದೆ. ಬಹುದೂರದ ನಿಮ್ಮ ಕನಸೊಂದನ್ನು ಈಡೇರಿಸಿಕೊಳ್ಳಲು ಉತ್ತಮ ಆರಂಭ ಸಿಗಲಿದೆ.
ತುಲಾ ರಾಶಿ
ನವಪಂಚಮ ರಾಜಯೋಗದ ರಚನೆಯು ತುಲಾ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಬಹುದು. ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸುವುದನ್ನು ಪರಿಗಣಿಸಬಹುದು. ನಿರುದ್ಯೋಗಿಗಳು ಈ ಸಮಯದಲ್ಲಿ ಉತ್ತಮ ಕೆಲಸದ ಅವಕಾಶಗಳ ಪಡೆಯಲಿದ್ದಾರೆ. ದೀರ್ಘಕಾಲದ ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಹಾಗೆ ಮಕ್ಕಳ ಕುರಿತಾದ ದೊಡ್ಡ ಚಿಂತೆಯೊಂದನ್ನು ಅಥವಾ ಸಮಸ್ಯೆಯೊಂದನ್ನು ನೀವು ಬಗೆಹರಿಸುತ್ತೀರಿ. ಖರ್ಚುಗಳು ಹೆಚ್ಚಾದರು ಅದನ್ನು ನಿವಾರಣೆ ಮಾಡುತ್ತೀರಿ. ಅದರಿಂದ ನೀವು ಮುಕ್ತರಾಗುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಯೋಜಿತ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಹೂಡಿಕೆಗಳು ದುಪ್ಪಟ್ಟಾಗಲಿದೆ.
ಮಿಥುನ ರಾಶಿ
ನವಪಂಚಮ ರಾಜಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಬರುವುದು ನೋಡಬಹುದು. ಉದ್ಯೋಗಿಗಳು ವರ್ಗಾವಣೆ, ವೇತನ ಹೆಚ್ಚಳ, ಬಡ್ತಿ ಕುರಿತ ವಿಚಾರದ್ಲಿ ಶುಭವಾಗಲಿದೆ. ಉದ್ಯಮಿಗಳು ಗಮನಾರ್ಹ ಆರ್ಥಿಕ ಲಾಭಗಳನ್ನು ಅನುಭವಿಸಬಹುದು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಳ್ಳುವ ಮಂದಿಗೆ ಶುಭವಾಗಲಿದೆ. ದಾಂಪತ್ಯ ಸಂಬಂಧಿತ ವಿಚಾರದಲ್ಲಿ ನಿಮ್ಮ ಹಳೆಯ ಮನಸ್ತಾಪಗಳ ಬಗೆಹರಿಸಿಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications



