Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
72 ವರ್ಷಗಳ ಬಳಿಕ ಶ್ರಾವಣ ಮಾಸದಲ್ಲಿ 4 ಗ್ರಹಗಳ ಹಿಮ್ಮುಖ ಚಲನೆ: ಯಾರಿಗಿದು ಶುಭ ಕಾಲ ನೋಡಿ
ಜ್ಯೋತಿಷ್ಯದ ಪ್ರಕಾರ ಶ್ರಾವಣ ಮಾಸ ಜುಲೈ 11 ರಿಂದ ಪ್ರಾರಂಭವಾಗಲಿದೆ. ಹೀಗಾಗಿ ಜುಲೈನಲ್ಲಿ ಹಲವು ರೀತಿಯ ಜ್ಯೋತಿಷ್ಯದ ವಿದ್ಯಮಾನಗಳು ನಡೆಯುತ್ತವೆ. ಗ್ರಹಗಳ ಸಂಚಾರ, ರಾಶಿಗಳಲ್ಲಿ ನಕ್ಷತ್ರಗಳ, ಗ್ರಹಗಳ ಸಂಚಾರವು ಹಲವು ರೀತಿಯ ಶುಭ ಅಶುಭಗಳಿಗೆ ಇದು ಕಾರಣವಾಗುತ್ತಿದೆ. ಈ ತಿಂಗಳಲ್ಲಿ ಹಲವು ಗ್ರಹಗಳು ಅಪರೂಪದ ಚಲನೆಗೆ ಕಾರಣವಾಗುತ್ತಿವೆ. ಇದರಿಂದ ದಶಕಗಳ ಬಳಿಕ ಯೋಗಗಳು ರೂಪುಗೊಳ್ಳುತ್ತಿವೆ.
ಶ್ರಾವಣ ಮಾಸದಲ್ಲಿ 4 ಗ್ರಹಗಳು ಚಲನೆ ಹಿಮ್ಮುಖವಾಗಿರಲಿದೆ. ಇದು ಅಪರೂಪದಲ್ಲಿ ಅಪರೂಪದ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಜುಲೈ 13ರಂದು ಶನಿ ಹಿಮ್ಮುಖ ಚಲನೆಯಲ್ಲಿದ್ದರೆ, ಬುಧ ಜುಲೈ 17ರಂದು ಹಿಮ್ಮುಖ ಚಲನೆಯಲ್ಲಿರುತ್ತಾನೆ. ಹಾಗೆ ರಾಹು ಮತ್ತು ಕೇತು ಈಗಾಗಲೇ ಹಿಮ್ಮುಖವಾಗಿ ಚಲಿಸುತ್ತಿದ್ದಾರೆ. ಒಟ್ಟಾರೆ 4 ಗ್ರಹಗಳ ಹಿಮ್ಮುಖ ಚಲನೆ ನೋಡಬಹುದು.

ಶ್ರಾವಣ ಮಾಸದಲ್ಲಿ 4 ಗ್ರಹಗಳು ಹಿಮ್ಮುಖ ದಿಕ್ಕಿನಲ್ಲಿ ಚಲಿಸುತ್ತವೆ. ಈ ಕಾಕತಾಳೀಯವು ಸುಮಾರು 72 ವರ್ಷಗಳ ನಂತರ ಸಂಭವಿಸುತ್ತಿದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ತಂದರೆ ಮತ್ತೆ ಕೆಲ ರಾಶಿಗಳಲ್ಲಿ ಅಶುಭ ಕಾರಕ ಎಂದು ಪರಿಗಣಿಸಲಾಗುತ್ತದೆ. ಹಲವು ರಾಶಿಗಳಿಗೆ ಈ ಅಪರೂಪದ ವಿದ್ಯಮಾನವು ಅದೃಷ್ಟ ತರುತ್ತಿದೆ. ಅದ್ರಲ್ಲೂ ಶ್ರಾವಣ ಮಾಸದಲ್ಲಿ ಬಹಳ ದೊಡ್ಡ ಲಾಭಕ್ಕೆ ಇದು ಕಾರಣವಾಗುತ್ತಿದೆ.
ಹಾಗಾದ್ರೆ 4 ಗ್ರಹಗಳ ಹಿಮ್ಮುಖ ಚಲನೆಯು ಯಾವೆಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ 4 ಗ್ರಹಗಳ ಹಿಮ್ಮುಖ ಚಲನೆಯು ಪ್ರಯೋಜನಕಾರಿ ಲಾಭಗಳ ತರಲಿದೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ವಿವಾಹಿತರಲ್ಲಿ ಅದ್ಭುತ ಪ್ರಯೋಜನಗಳ ಪಡೆಯಲಿದ್ದಾರೆ. ಮನೆಗಾಗಿ ಹಾಗೂ ಕೌಟುಂಬಿಕ ವಿಚಾರದಲ್ಲಿ ಇದ್ದಂತಹ ಒತ್ತಡಗಳು ಕಡಿಮೆಯಾಗಲಿದೆ. ಹಿಡಿದ ಕೆಸಲಗಳು ಕೈಗೂಡಲಿವೆ. ನೀವು ಸ್ವಂತ ಉದ್ಯೋಗದಲ್ಲಿದ್ದರೆ ಈ ಹಿಂದೆ ಕಾಡುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ಉಳಿತಾಯ, ಹೂಡಿಕೆಯಂತಹ ಕೆಲಸದಲ್ಲಿ ತೊಡಗುವಿರಿ. ಭವಿಷ್ಯದ ದೃಷ್ಟಿಯಿಂದ ನೀವು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಗ್ರಹಗಳ ಹಿಮ್ಮುಖ ಚಲನೆಯು ಬಹಳ ಲಾಭದಾಯಕ. ನಿಮ್ಮ ಆರ್ಥಿಕ ವಿಚಾರವಾಗಿ ಬಹಳ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಪಡೆಯುತ್ತೀರಿ. ಅದು ವಸ್ತು ಖರೀದಿ, ಸಾಲದಂತಹ ವಿಚಾರದಲ್ಲಿ ಮುಕ್ತಿ ಸಿಗಲಿದೆ. ಉದ್ಯೋಗದಲ್ಲಿರುವವರು ವರ್ಗಾವಣೆ, ಬಡ್ತಿ, ವೇತನ ಹೆಚ್ಚಳ ಸೇರಿ ನೀವು ಬಯಸಿದಂತಹ ಯಾವುದಾದರು ಲಾಭ ಪಡೆಯಬಹುದು. ಖರ್ಚುಗಳು ಕಡಿಮೆಯಾಗಲಿದೆ. ವ್ಯಾಪಾರಿಗಳಲ್ಲಿ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ನಿಮಗೆ ಕಾಡಿದ್ದ ಅನಾರೋಗ್ಯದ ನಿವಾರಣೆಯ ಸಾಧ್ಯತೆಗಳಿವೆ.
ಮೀನ ರಾಶಿ
ಶಾವಣ ಮಾಸದಲ್ಲಿ 4 ಗ್ರಹಗಳ ಹಿಮ್ಮುಖ ಚಲನೆಯು ನಿಮಗೆ ಅಧಿಕ ಲಾಭ ತರಲಿದೆ. ನೀವು ಸಾಲ ಮುಕ್ತರಾಗುವ ಸಮಯವಿದು. ಪ್ರೇಮ ಸಂಬಂಧಗಳು ಮಧುರವಾಗಿರಲಿದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಅವಿವಾಹಿತರಿಗೆ ಈ ಸಮಯ ಬಹಳ ಅನುಕೂಲ ಇರಲಿದೆ. ವ್ಯವಹಾರಗಳಲ್ಲಿ ನಿಮಗೆ ಪ್ರಯೋಜನಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ಅಂದುಕೊಂಡಿದ್ದ ಕೆಲಸಗಳು ನೆರವೇರಲಿದೆ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಗೆ ಇದು ಸೂಕ್ತ ಸಮಯ ಆಗಿರಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸು, ಹಾಗೂ ಉದ್ಯೋಗ ಸಂಬಂಧಿ ಸಹಕಾರ ಸಿಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



