Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ಹುಣ್ಣಿಮೆ 2025: ಈ ರಾಶಿಯವರ ಅಂದುಕೊಂಡ ಕೆಲಸ ನೆರವೇರಲಿದೆ!
ಶ್ರಾವಣ ಮಾಸದಲ್ಲಿ ಒಂದೊಂದು ದಿನವು ಬಹಳ ಮುಖ್ಯವಾಗಿರುತ್ತದೆ. ಈ ಮಾಸದಲ್ಲಿ ಹಲವು ಗ್ರಹಗಳ ಚಲನೆ ಹಾಗೆ ಹಲವು ರಾಶಿಗಳಲ್ಲಿನ ಗ್ರಹಗಳ ಸ್ಥಾನಪಲ್ಲಟವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುವುದು ನೋಡಬಹುದು. ಹಾಗೆ ಶ್ರಾವಣ ಹುಣ್ಣಿಮೆಯಲ್ಲಿ ಹಲವು ಕಾಕತಾಳಿಯದಂತೆ ಹಲವು ಯೋಗಗಳು ರೂಪುಗೊಳ್ಳುತ್ತಿವೆ.
ಶ್ರಾವಣ ಮಾಸವನ್ನು ಲಕ್ಷ್ಮಿ, ಶಿವನಿಗೆ ಅರ್ಪಿಸಲಾಗುತ್ತದೆ. ಹುಣ್ಣಿಮೆಯ ದಿನಾಂಕವನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಗುರು, ಚಂದ್ರ, ಶನಿ ರಾಶಿಯು ತಮ್ಮ ನಿರ್ಧಿಷ್ಟ ಗ್ರಹಗಳಲ್ಲಿ ಚಲಿಸಲಿವೆ. ಇದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು.

ಶ್ರಾವಣ ಹುಣ್ಣಿಮೆಯಲ್ಲಿ ಬಹಳ ಅಪರೂಪದ ಮತ್ತು ಶಕ್ತಿಯುತವಾದ ಜ್ಯೋತಿಷ್ಯ ಯೋಗವು ರೂಪುಗೊಳ್ಳುತ್ತಿದೆ. ಈ ದಿನದಂದು, ಮೂರು ಪ್ರಮುಖ ಗ್ರಹಗಳಾದ ಚಂದ್ರ, ಗುರು ಮತ್ತು ಶನಿ ತಮ್ಮದೇ ಆದ ರಾಶಿಯಲ್ಲಿರುತ್ತಾರೆ. ಇದರಿಂದ ಗರಿಷ್ಟ ಬಲ ಹಾಗೆ ಶಕ್ತಿ ಪಡೆಯಲಿವೆ. ಇದರಿಂದ ಗ್ರಹಗಳಲ್ಲನ ಚಲನೆಯು ಹಲವರಿಗೆ ಲಾಭದಾಯಕವಾಗುತ್ತಿದೆ.
ಹಾಗಾದ್ರೆ ಶ್ರಾವಣ ಹುಣ್ಣಿಮೆಯ ದಿನದಂದು ಯಾರಿಗೆಲ್ಲಾ ಶುಭಕರ ಲಾಭವಿದೆ? ಯಾರಿಗೆ ಇದು ಶಿವ ಹಾಗೂ ಲಕ್ಷ್ಮಿಯ ಆಶೀರ್ವಾದಕ್ಕೆ ಕಾರಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶ್ರಾವಣ ಹುಣ್ಣಿಮೆಯ ದಿನವು ವಿಶೇಷವಾಗಿ ಫಲಪ್ರದವಾಗಿರುತ್ತದೆ. ಗ್ರಹಗಳ ಸ್ಥಾನವು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯ ಸ್ಪಷ್ಟ ಸೂಚನೆಗಳ ನೀಡುತ್ತಿದೆ. ಉದ್ಯೋಗದಲ್ಲಿರುವ ಜನರಿಗೆ ಅವರ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದಾಗಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಲಾಭ ನೋಡಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಈ ದಿನವು ಬಹಳು ಅನುಕೂಲಗ ತರಬಹುದು. ನೀವು ದೀರ್ಘಕಾಲದ ಅನಾರೋಗ್ಯ ಎದುರಿಸಿದ್ದರೆ ಈ ಸಮಯದಲ್ಲಿ ಸುಧಾರಣೆ ನೋಡುವಿರಿ. ಅಗತ್ಯ ಸಮಯದಲ್ಲಿ ಹಾಗೆ ನಿಮ್ಮ ದೊಡ್ಡ ಕೆಲಸ ಅಥವಾ ಯೋಜನೆಯೊಂದಕ್ಕೆ ಹಣಕಾಸು ನಿಮ್ಮ ಕೈ ಸೇರಲಿದೆ.
ಸಿಂಹ ರಾಶಿ
ಈ ಹುಣ್ಣಿಮೆಯು ಸಿಂಹ ರಾಶಿಯವರಿಗೆ ವಿಶೇಷ ಲಾಭಗಳಿಗೆ ಕಾರಣವಾಗುತ್ತಿದೆ. ನಿಮ್ಮಲ್ಲಿದ್ದ ಹಣಕಾಸಿನ ಜಂಜಾಟಗಳು ಅಂತ್ಯವಾಗುವ ಕಾಲ ಸನ್ನಿಹಿತವಾಗುತ್ತವೆ. ಹೊಸ ಆದಾಯ ಮೂಲಗಳು ನಿಮಗೆ ಸಿಗಲಿದೆ. ಕುಟುಂಬಸ್ಥರಲ್ಲಿ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಲಿದೆ. ನೀವು ಅಂದುಕೊಂಡಿದ್ದ ಕೆಲಸ ಕಾರ್ಯಗಳು ಯಶಸ್ಸಿನತ್ತ ಸಾಗಲಿವೆ. ದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಲು ನಿಮಗೆ ಹಣಕಾಸಿನ ನೆರವು ಕೂಡ ಸಿಗಲಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿವೆ. ಮನೆ, ಆಸ್ತಿ, ಹಣ ಕುರಿತಾದ ವಿಚಾರದಲ್ಲಿ ಬಹಳ ಉತ್ತಮ ಸಮಯ ಆಗಿರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ಶ್ರಾವಣ ಹುಣ್ಣಿಮೆಯು ಅನುಕೂಲಕರ ದಿನವಾಗಲಿದೆ. ನಿಮ್ಮ ಹೊಸ ಆಲೋಚನೆಗಳನ್ನು ಮುಂದುವರೆಸಲು, ಕೆಲಸಗಳಲ್ಲಿ ಹೊಸ ಪ್ರಗತಿ ತರಲು ಇದು ಸಹಕಾರಿಯಾಗಲಿದೆ. ಶ್ರಮದ ಪರಿಣಾಮವಾಗಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಕುಟುಂಬ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯದ ವಾತಾವರಣವಿರುತ್ತದೆ, ಇದು ಮನೋಬಲವನ್ನು ಹೆಚ್ಚಿಸುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಸಫಲತೆ ಇರಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧಿ ಚರ್ಚೆ ಯೋಗಗಳು ರೂಪುಗೊಳ್ಳಲಿದೆ. ದಾಂಪತ್ಯದಲ್ಲಿನ ಸಮಸ್ಯೆಯು ನಿವಾರಣೆ ಸಂಭವವಿದೆ.
(ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ)



Click it and Unblock the Notifications