ಶಿವರಾತ್ರಿ ಬಳಿಕ ಈ ಮೂರು ರಾಶಿಯವರ ಜೀವನವೇ ಬದಲು..! ಯಾರಿಗೆಲ್ಲಾ ಶುಭವಾಗುತ್ತೆ ಗೊತ್ತಾ?

ಮಹಾ ಶಿವರಾತ್ರಿಯು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬಹಳ ಮುಖ್ಯ ಹಾಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ವರ್ಷದ ಶಿವರಾತ್ರಿಯಲ್ಲಿ ಹಲವು ಗ್ರಹಗತಿಗಳ ಬದಲಾವಣೆ ನೋಡಬಹುದು.ಹಾಗೆ ಶಿವರಾತ್ರಿಯ ಬಳಿಕ ಗ್ರಹಗತಿಗಳಲ್ಲಿನ ಬದಲಾವಣೆಯು ಹಲವು ರಾಶಿಯವರಿಗೆ ಲಾಭದಾಯಕವಾಗುತ್ತಿದೆ. ಈ ಮಹಾ ಶಿವರಾತ್ರಿಯ ಬಳಿಕ ಅವರ ಅದೃಷ್ಟ ಬದಲಾಗುತ್ತಿದೆ.

ಇದೆ ದಿನದಂದು ಶುಕ್ರನು ಮೀನ ರಾಶಿಗೆ ಚಲಿಸಲಿದ್ದಾನೆ. ಹಾಗೆ ರಾಹುವಿನ ಸಂಯೋಗಕ್ಕೂ ಕಾರಣವಾಗುತ್ತಿದ್ದಾನೆ. ಇದು ಹಲವು ವರ್ಷಗಳ ಬಳಿಕ ಉಂಟಾಗುತ್ತಿರುವ ಸಂಯೋಗವಾಗಿದೆ. ಹಾಗೆ ಈ ದಿನ ಸೂರ್ಯ ಮತ್ತು ಶನಿ ಕುಂಭ ರಾಶಿಗೆ ಒಟ್ಟಿಗೆ ಪ್ರಯಾಣಿಸುತ್ತಾರೆ. ಇದು ಕೂಡ 152 ವರ್ಷಗಳ ಬಳಿಕ ಸಂಭವಿಸುತ್ತಿದೆ.

Shivaratri Astrology 3 Zodiac Signs Whose Lives Will Undergo a Major Transformation

ಇಂತಹ ಅಪರೂಪದ ವಿದ್ಯಮಾನಗಳು ನಡೆಯುತ್ತಿರುವುದರಿಂದಾಗಿ ಈ ವರ್ಷದ ಶಿವರಾತ್ರಿಯ ಬಳಿಕ ಹಲವು ರಾಶಿಯವರಿಗೆ ಶುಭದಾಯಕ ದಿನಗಳ ನೋಡಬಹುದು. ಆದರಲ್ಲೂ ಕೆಲವೊಂದು ರಾಶಿಯವರಿಗೆ ಎಲ್ಲಿದಲ್ಲದ ಲಾಭದಾಯಕ ಹಾಗೆ ಅದೃಷ್ಟ ಬದಲಾಗುವ ದಿನಗಳು ಮುಂದೆ ಬರಲಿದೆ. ಹಾಗಾದ್ರೆ ಶಿವರಾತ್ರಿ ಬಳಿಕ ಯಾವೆಲ್ಲಾ ರಾಶಿಯವರ ಜೀವನ ಬದಲಾಗುತ್ತಿದೆ. ಯಾರಿಗೆ ಲಾಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಕರ ರಾಶಿ

ಮಹಾ ಶಿವರಾತ್ರಿಯ ದಿನದಂದು ಸಂಭವಿಸುವ ಅಪರೂಪದ ಗ್ರಹಗಳ ಸಂಯೋಗದಿಂದಾಗಿ ಮಕರ ರಾಶಿಯವರ ಅದೃಷ್ಟ ಬದಲಾಗುತ್ತಿದೆ. ಅವರ ಆರ್ಥಿಕ ಸ್ಥಿತಿಗತಿಯಲ್ಲಿ ಎಂದು ಊಹಿಸದಷ್ಟು ಪ್ರಗತಿ ನೋಡಬಹುದು. ನಿಮ್ಮ ಉದ್ಯೋಗದಲ್ಲಿ ಯಶಸ್ಸು ನೋಡಬಹುದು. ಹಳೆಯ ಕೆಲಸಗಳು ಪರಿಪೂರ್ಣ ಆಗಲಿದೆ. ಬಹಳ ವರ್ಷದಿಂದ ನೀವು ಕಾಯುತ್ತಿದ್ದಂತಹ ಸಮಯ ನಿಮಗೆ ಕೂಡಿ ಬರಲಿದೆ. ಎಲ್ಲಾ ಕಾರ್ಯಗಳಲ್ಲಿಯೂ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಅವಿವಾಹಿತರಿಗೆ ಒಳ್ಳೆಯ ದಿನಗಳು ಹಾಗೆ ಬಯಸಿದ್ದು ಒಲಿಯುವ ಗಳಿಗೆಗಳು ಮುಂದಿರಲಿವೆ. ವಿದೇಶ ಪ್ರಯಾಣ ಮಾಡುವ ಅವಕಾಶ ಸಿಗಲಿದೆ.

ಮೇಷ ರಾಶಿ

ಮಹಾ ಶಿವರಾತ್ರಿಯ ದಿನದಂದು ಸಂಭವಿಸುವ ಅಪರೂಪದ ಗ್ರಹಗಳ ಸಂಯೋಗವು ಈ ರಾಶಿಯವರ ಜೀವನದಲ್ಲಿ ಅತೀ ದೊಡ್ಡ ಸಂತೋಷಗಳ ತರಲಿದೆ. ಉದ್ಯೋಗಿಗಳಿಗೆ ಬಡ್ತಿ ಭಾಗ್ಯ ಸೇರಿ, ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭದಾಯಕ ದಿನಗಳು ಇರಲಿವೆ. ಅನಿರೀಕ್ಷಿತ ಲಾಭಗಳು, ಹೂಡಿಕೆ, ಷೇರು ಲಾಭ, ಬ್ಯಾಂಕಿಂಗ್ ವ್ಯವಹಾರಗಳು ಸುಲಭವಾಗಿ ನಿಮ್ಮ ಪರವಾಗಿ ಮುಗಿಯಲಿವೆ. ಹಾಗೆ ಕೌಟುಂಬಿಕ ಜೀವನದಲ್ಲಿ ಸಂತಸ ಇರಲಿದೆ.

ಮಿಥುನ ರಾಶಿ

ಮಹಾ ಶಿವರಾತ್ರಿಯಂದು ರೂಪುಗೊಳ್ಳುವ ಅಪರೂಪದ ಗ್ರಹಗಳ ಸಂಯೋಜನೆಯಿಂದಾಗಿ ಮಿಥುನ ರಾಶಿಯವರು ತಮ್ಮ ವೈಯಕ್ತಿಕ ಪ್ರಗತಿಗೆ ಕಾರಣವಾಗುವುದು ನೋಡಬಹುದು. ನಿಮ್ಮ ಕುಟುಂಬದಲ್ಲಿ ಸಂತಸ ಇರಲಿದೆ. ನೀವು ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತವೆ. ನಿಮ್ಮ ದೊಡ್ಡ ಕಲಸಗಳಿಗೆ ನಿರೀಕ್ಷಿತವಾದ ಬೆಂಬಲ ಹಾಗೂ ಸಹಕಾರ ನೋಡಬಹುದು. ವಿವಾಹಿತರಲ್ಲಿ ವಸ್ತು ಲಾಭ ನೋಡಬಹುದು. ಹೊಸ ಆದಾಯಗಳು ಕಂಡುಬರಲಿದೆ. ಹಲವು ವರ್ಷದ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ವರ್ಷ ಒಂದು ಹೆಜ್ಜೆ ಮುಂದೆ ಇಡುತ್ತೀರಿ. ಹೊಸ ವ್ಯಾಪಾರ, ವ್ಯವಹಾರಕ್ಕೆ ಒಳ್ಳೆಯ ಕಾಲವಾಗಿರಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shivaratri Astrology: 3 Zodiac Signs Whose Lives Will Undergo a Major Transformation

Due to rare events taking place, many zodiac signs may see auspicious days after Shivaratri this year. However, some zodiac signs will have days ahead where their luck will change unexpectedly.
Story first published: Wednesday, February 26, 2025, 15:24 [IST]
X
Desktop Bottom Promotion