Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮಾರ್ಚ್ 29ಕ್ಕೆ ಅಪರೂಪದಲ್ಲಿ ಅಪರೂಪದ ಘಟನೆ ಸಂಭವಿಸಲಿದೆ: ಷಡ್ಗ್ರಹಿ ಯೋಗ ರೂಪುಗೊಳ್ಳಲಿದೆ
ಈ ವರ್ಷ ಮಾರ್ಚ್ 29 ಜ್ಯೋತಿಷ್ಯದ ದೃಷ್ಟಿಯಲ್ಲಿ ಹಲವು ಕಾರಣಗಳಿಂದ ತುಂಬಾನೇ ವಿಶೇಷವಾಗಿರಲಿದೆ. ಈ ದಿನದಂದು 6 ಗ್ರಹಗಳ ಸಂಯೋಗವಾಗಲಿದೆ. ಈ ರೀತಿಯ ಘಟನೆ ನಡೆಯುವುದು ತುಂಬಾನೇ ಅಪರೂಪ, ಅಲ್ಲದೆ ಈ ದಿನ ಸೂರ್ಯಗ್ರಹಣವಿದೆ. ಪ್ರಮುಖ ಗ್ರಹವಾದ ಶನಿಯ ರಾಶಿ ಬದಲಾವಣೆ ಎಲ್ಲವೂ ಇದೇ ದಿನ ನಡೆಯಲಿದೆ.

ಮೀನ ರಾಶಿಯಲ್ಲಿ ಷಡ್ಗ್ರಹಿ ಯೋಗ ಉಂಟಾಗಲಿದೆ
ಮೀನ ರಾಶಿಯಲ್ಲಿ ಈಗಾಗಲೇ ರಾಹು, ಸೂರ್ಯ, ಬುಧ ಗ್ರಹವಿದೆ, ಈ ದಿನ ಶುಕ್ರನು ಮೀನ ರಾಶಿಗೆ ಸಂಚರಿಸಲಿದೆ, ಚಂದ್ರನು ಮೀನ ರಾಶಿಗೆ ಸಂಚರಿಸಲಿದೆ, 30 ವರ್ಷದ ಬಳಿಕ ಶನಿಯು ಕೂಡ ಮೀನ ರಾಶಿಗೆ ಪ್ರವೇಶಿಸಲಿದೆ. ಈ ಎಲ್ಲಾ ಗ್ರಹಗಳು ಮೀನ ರಾಶಿಯಲ್ಲಿ ಸೇರಿದಾಗ ಷಡ್ಗ್ರಹಿ ಯೋಗ ಉಂಟಾಗಲಿದೆ. ಈ ಯೋಗವನ್ನು ಅಪರೂಪದ ಯೋಗವೆಂದು ಕರೆಯಲಾಗುವುದು.
ಈ ಷಡ್ಗ್ರಹಿ ಯೋಗ ಈ ರಾಶಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ನೋಡಿ:
ಸಿಂಹ ರಾಶಿ
6 ಗ್ರಹಗಳು ಒಟ್ಟಿಗೆ ಸೇರಿ ಉಂಟಾಗುವ ಷಡ್ಗ್ರಹಿ ಯೋಗ ಸಿಂಹ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಬದುಕಿನಲ್ಲಿ ಅನೇಕ ಅವಕಾಶಗಳು ಹುಡುಕಿಕೊಂಡು ಬರಲಿದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬೆಂಬಲವಿರಲಿದೆ. ನೀವು ಕೆಲಸದ ಜಾಗದಲ್ಲಿ ಅದ್ಭುತ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಕೆಲಸ ಬದಲಾವಣೆಯ ಬಗ್ಗೆ ಆಲೋಚನೆ ಮಾಡುತ್ತಿರುವವರೆಗೆ ಈ ಯೋಗ ತುಂಬಾನೇ ಪ್ರಯೋಜನಕಾರಿಯಾಗಿದೆ. ಬಡ್ತಿ ನಿರೀಕ್ಷೆಯಲ್ಲಿರುವವರು ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಆರ್ಥಿಕವಾಗಿ ನಿಮಗೆ ಪ್ರಯೋಜನಕಾರಿ ದಿನವಾಗಿದೆ. ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ.
ಧನು ರಾಶಿ
ಷಡ್ಗ್ರಹಿ ಯೋಗ ಧನು ರಾಶಿಯವರಿಗೆ ಅನುಕೂಲಕರವಾಗಿದೆ, ಈ ಯೋಗ ನಿಮ್ಮ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದರಿಂದಾಗಿ ನೀವು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಯೋಜನ ಪಡೆಯುತ್ತೀರಿ. ಆದಾಯ ಹೆಚ್ಚಾಗಲು ತುಂಬಾನ ಉತ್ತಮ ಅವಕಾಶಗಳು ದೊರೆಯಲಿದೆ. ಈ ಯೋಗ ನಿಮ್ಮ ವೈಯಕ್ತಿಕ ಬದುಕಿನಲ್ಲಿಯೂ ಪ್ರಯೋಜನ ಬೀರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಉತ್ತಮವಾಗಿರಲಿದೆ.
ಮಕರ ರಾಶಿ
ಷಡ್ಗ್ರಹಿ ಯೋಗ ಮಕರ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ನಿಮ್ಮ ವೃತ್ತಿ ಬದುಕಿನಲ್ಲಿ ನೀವು ತುಂಬಾನೇ ಉತ್ತಮ ಅವಕಾಶ ಗಳಿಸಲು ಸಾಧ್ಯವಾಗಲಿದೆ. ಈ ಯೋಗ ನಿಮ್ಮ ಸಂಪತ್ತು ವೃದ್ಧಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲಗೊಳ್ಳುವ ಸೂಚನೆಯಿದೆ. ಆಸ್ತಿ ವ್ಯವಹಾರ ಮಾಡಿದವರು ಉತ್ತಮ ಲಾಭ ಗಳಿಸಲು ಸಾಧ್ಯವಾಗಲಿದೆ.
ಮಾರ್ಚ್ 29ಕ್ಕೆ ಸೂರ್ಯಗ್ರಹಣ
ಮಾರ್ಚ್ 29ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿಯೂ ಈ ಸೂರ್ಯಗ್ರಹಣ ಗೋಚರಿಸುವುದರಿಂದ ಭಾರತದಲ್ಲಿ ಸೂರ್ಯಗ್ರಹಣದ ಸೂತಕವಿದೆ. ಸೂರ್ಯಗ್ರಹಣದ ಸಮಯ ಭಾರತದ ಕಾಲಮಾನ ಪ್ರಕಾರ ಮಧ್ಯಾಹ್ನ 2:20ರಿಂದ 4:14ರವರೆಗೆ ಗೋಚರಿಸಲಿದೆ.
ಶಕ ಸಂವತ್ಸರ ಆರಂಭ
ಈ ದಿನದ ಮತ್ತೊಂದು ವಿಶೇಷವೆಂದರೆ, ಮಾರ್ಚ್ 29ರಿಂದ ಶಕ ಸಂವತ್ಸರ ಆರಂಭವಾಗುತ್ತಿದೆ. ಹಿಂದೂಗಳ ಹೊಸ ವರ್ಷದ ಯುಗಾದಿ ಹಬ್ಬ ಕೂಡ ಮಾರ್ಚ್ 29, 30ಕ್ಕೆ ಆಚರಿಸಲಾಗುವುದು. ಮಾರ್ಚ್ 29ಕ್ಕೆ ಹೊಸ ಸಂವತ್ಸರ ಶುರುವಾಗುವುದು. ಹೀಗೆ ಮಾರ್ಚ್ 29 ತುಂಬಾ ವಿಶೇಷವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications