Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು-ಶುಕ್ರನಿಂದ ಅಪರೂಪದ ಶತಂಕ ರಾಜಯೋಗ: ಈ ರಾಶಿಯವರ ಅದೃಷ್ಟ ಬದಲು; ನಾಳೆಯಿಂದ ಜಾಕ್‌ಪಾಟ್!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿ ಮತ್ತು ನಕ್ಷತ್ರಗಳ ಬದಲಾಯಿಸುತ್ತಲೇ ಇರುತ್ತವೆ. ಈ ಗ್ರಹ ಬದಲಾವಣೆಗಳು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುತ್ತವೆ. ಅದ್ರಲ್ಲೂ ಪ್ರಮುಖ ಗ್ರಹಗಳ ಚಲನೆಯಿಂದ ಹಲವು ಜನರ ಜೀವನದಲ್ಲಿ ಬದಲಾವಣೆ ಉಂಟಾಗುವುದು ನೋಡಬಹುದು.
ಪ್ರಸ್ತುತ ಈಗ ಗುರು ಮತ್ತು ಶುಕ್ರ ಗ್ರಹಗಳ ಚಲನೆಯಿಂದ ಉಂಟಾಗುತ್ತಿರುವ ಪ್ರಬಲ ಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ನವೆಂಬರ್ 11 ರಂದು ಗುರು ಮತ್ತು ಶುಕ್ರ 100 ಡಿಗ್ರಿ ಕೋನದಲ್ಲಿ ಅಪರೂಪದ ಮತ್ತು ಶುಭ ಯೋಗವನ್ನು ರೂಪಿಸಲಿದ್ದು, ಶತಂಕ ಯೋಗವನ್ನು ರೂಪಿಸಲಿದ್ದಾರೆ.

ಈ ಪ್ರಬಲ ಯೋಗದಿಂದಾಗಿ ಹಲವು ಜನರ ಭವಿಷ್ಯ ಬದಲಾಗುತ್ತಿದೆ. ಕೆಲವರ ಜೀವನದಲ್ಲಿ ಅತ್ಯಂತ ದೊಡ್ಡ ಬದಲಾವಣೆ ಎದುರಾಗಲಿವೆ. ಸಮೃದ್ಧಿಯ ಜೊತೆಗೆ ಯಶಸ್ಸು ಕೂಡ ಒಲಿದು ಬರಲಿದೆ. ಹಾಗಾದ್ರೆ ಗುರು ಹಾಗೂ ಶುಕ್ರನಿಂದ ಉಂಟಾಗಿರುವ ಈ ಅಪರೂಪದ ಯೋಗದಿಂದ ಯಾರಿಗೆಲ್ಲಾ ಶುಭವಾಗುತ್ತಿದೆ, ಯಾರಿಗೆಲ್ಲಾ ಫಲದಾಯಕ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ಶತಂಕ ಯೋಗವು ಧನು ರಾಶಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಶುಕ್ರನು ಆದಾಯದ ಹೊಸ ಮಾರ್ಗಗಳ ಕಂಡುಕೊಳ್ಳಲಿದ್ದಾನೆ, ಇದರಿಂದ ನಿಮ್ಮ ಆದಾಯದಲ್ಲಿ ಗಣನೀಯ ಹೆಚ್ಚಳ ನೋಡಬಹುದು. ಹಾಗೆ ನಿಮ್ಮಲ್ಲಿದ್ದ ಹಣಕಾಸಿನ ಒತ್ತಡವೊಂದು ತಾತ್ಕಾಲಿಕ ನಿವಾರಣೆಯಾಗಲಿದೆ. ಬಹಳಷ್ಟು ಸಂಪತ್ತನ್ನು ನೀವು ಸಂಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಹೂಡಿಕೆಗಳು ದೊಡ್ಡ ಲಾಭವನ್ನು ತರುತ್ತವೆ. ಬಹು ವರ್ಷದ ಬಯಕೆಯೊಂದಕ್ಕೆ ನೀವು ಬಹಳ ಹತ್ತಿರವಾಗುತ್ತೀರಿ. ಖ್ಯಾತಿ ಒಲಿದು ಬರಲಿದೆ. ಶುಕ್ರನ ಸಂಚಾರದಿಂದ ನಿಮ್ಮ ಕೌಟುಂಬಿಕ ಸಮಸ್ಯೆಯಲ್ಲಿನ ಕಲಹಗಳು ಕಡಿಮೆಯಾಗಲಿದೆ. ಪ್ರಯಾಣ ಸಂಬಂಧಿತ ವಿಚಾರದಲ್ಲಿ ಶುಭವಿದೆ.
ಕರ್ಕಾಟಕ ರಾಶಿ
ಶತಂಕ ಯೋಗವು ಕರ್ಕಾಟಕ ರಾಶಿಯವರಿಗೆ ಸಂತೋಷದ ಅವಧಿಯನ್ನು ತರಲಿದೆ. ಈ ಅವಧಿಯಲ್ಲಿ ನಿಮ್ಮ ಅನೇಕ ಆಸೆಗಳು ಈಡೇರಬಹುದು ಮತ್ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯಬಹುದು. ಎಲ್ಲಾ ಯೋಜನೆಗಳು ಈಗ ಸಂಪೂರ್ಣ ಯಶಸ್ವಿಯಾಗುತ್ತವೆ. ಅವರ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆಗೆ ಅವಕಾಶಗಳಿವೆ ಮತ್ತು ಕರ್ಕಾಟಕ ರಾಶಿಯವರಿಗೆ ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ದೊಡ್ಡ ಕುಟುಂಬ ಲಾಭವಿದೆ. ಆಸ್ತಿ ವಿಚಾರವಾಗಿ ಅಥವಾ ಪಿತ್ರಾರ್ಜಿತ ವ್ಯವಹಾರದಲ್ಲಿ ನೀವು ಅಧಿಕ ಲಾಭ ನೋಡಬಹುದು. ಈ ಸಮಯದಲ್ಲಿ ಗೌರವ, ಖ್ಯಾತಿ ಹೆಚ್ಚಾಗಲಿದೆ. ನಿಮ್ಮಿಂದಾಗಿ ಆಪ್ತರೊಬ್ಬರಿಗೆ ದೊಡ್ಡ ಮೊತ್ತದ ಹಣಕಾಸು ಸಹಾಯ ನೋಡಬಹುದು. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಶತಂಕ ಯೋಗವು ಹಲವು ರೀತಿಯ ಲಾಭ ತರಲಿದೆ, ನಿಮ್ಮ ಬಹುಸಮಯದ ಆತಂಕವೊಂದು ದೂರಾಗಲಿದೆ. ಶುಭ ಕಾರ್ಯಗಳಲ್ಲಿ ನಿಮ್ಮ ಭಾಗಿತ್ವ ಇರಲಿದೆ. ಕುಟುಂಬಸ್ಥರೊಂದಿಗೆ ನೀವು ಪ್ರವಾಸ ಹೊರಡುವ ಬಯಕೆ ಹೊಂದಿದ್ದರೆ ಈ ಸಮಯದಲ್ಲಿ ಬಹಳ ಸುಖಕರ ಪ್ರಯಾಣ ಮಾಡಲಿದ್ದೀರಿ. ಹಣಕಾಸು ವಿಚಾರವಾಗಿಯೂ ನಿಮಗೆ ಶುಭದಾಯಕ ದಿನವಾಗಲಿದೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿರುವ ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ವಿಚಾರದಲ್ಲಿ ದಿಢೀರ್ ಧನಾತ್ಮಕ ಬದಲಾವಣೆಗಳ ನೋಡಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ಮಧುರ ಕ್ಷಣಗಳು ಎದುರಾಗಲಿವೆ. ದಾಂಪತ್ಯ ಸುಖ ನಿಮ್ಮದಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications