Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕುಂಭ ರಾಶಿಯಲ್ಲಿ ಶನಿ ಉದಯ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
ಶನಿಯು ಕುಂಭ ರಾಶಿಯಲ್ಲಿ ಉದಯವಾಗಿದೆ, ಶನಿಯು ಉದಯವಾಗಿರುವುದರಿಂದ ಶನಿಯು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಶನಿ ಕೃಪೆಯಿಂದ ಲಾಭವನ್ನು ಗಳಿಸುತ್ತೀರಿ. ಪರಿಣಾಮವಾಗಿ, ನಿಮ್ಮ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಶನಿ ಕೃಪೆಯಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ. ವ್ಯಾಪಾರಿಗಳು ಈ ಅವಧಿಯಲ್ಲಿ ಲಾಭ ಗಳಿಸುತ್ತೀರಿ.
ಪರಿಹಾರ:- ಪ್ರತಿ ಶನಿವಾರದಂದು ಸುಂದರಕಾಂಡ ಪಠಿಸಿ.

ವೃಷಭ ರಾಶಿ
ಶನಿಯು ಉತ್ತಮ ಫಲಿತಾಂಶ ನೀಡುತ್ತದೆ. ನಿಮ್ಮ ಕೆಲಸ ಕಾರ್ಯಗಳು ಹೆಚ್ಚಿನ ಶ್ರಮದಲ್ಲಿ ಪೂರ್ಣವಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯ ವ್ಯಕ್ತಿಗಳಿಂದ ಮಾರ್ಗದರ್ಶನ ದೊರೆಯಲಿದೆ. ಕೆಲಸಕ್ಕಾಗಿ ಮಾಡುವ ಪ್ರಯಾಣವು ಉತ್ತಮ ಫಲಿತಾಂಶ ನೀಡುವುದು
ಪರಿಹಾರ: ಶನಿವಾರ ಕಪ್ಪು ಎಳ್ಳು ದಾನ ಮಾಡಿ.
ಮಿಥುನ ರಾಶಿ
ಶನಿಯು ಲಾಭದಲ್ಲಿ ಮನೆಯಲ್ಲಿ ಇರುವುದರಿಂದ ನಿಮಗೆ ಲಾಭದಾಯಕವಾಗಿರಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ವ್ಯಾಪಾರಸ್ಥರು ಉತ್ತಮ ಲಾಣ ಗಳಿಸಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. .
ಪರಿಹಾರ: ಸಂಜೆಯ ವೇಳೆ ಎಳ್ಳೆಣ್ಣೆ ದೀಪ ಹಚ್ಚಿ ಶನಿ ಮಂತ್ರ ಪಠಿಸಿ.
ಕರ್ಕ ರಾಶಿ
ಶನಿಯು 8ನೇ ಮನೆಯಲ್ಲಿ ಇದೆ, ಈ ಸ್ಥಾನವನ್ನು ಶನಿ ಧೈಯ ಸ್ಥಾನ ಎಂದು ಪರಿಗಣಿಸಲಾಗುವುದು. ಆದ್ದರಿಂದ ಕೆಲ ಅಡೆತಡೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಕೂಡ ಕಾಳಜಿವಹಿಸಿ. ನಿಮ್ಮ ಮನೆಯ ದೇವರನ್ನು ಆರಾಧಿಸಿ.
ಪರಿಹಾರ:ನೀವು ಮಹಾಮೃತ್ಯುಂಜಯ ಮಂತ್ರ ಪಠಿಸಿ.
ಸಿಂಹ ರಾಶಿ
ಶನಿಯು 7ನೇ ಮನೆಯಲ್ಲಿದೆ, ಶನಿಯ ಈ ಸ್ಥಾನ ಹೆಚ್ಚು ಅಪಾಯಕಾರಿಯಲ್ಲ. ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು, ಆದರೆ ಶನಿಯು ಹೆಚ್ಚು ತೊಂದರೆ ನೀಡುವುದಿಲ್ಲ, ಆ ಸಮಸ್ಯೆ ತಾತ್ಕಾಲಿಕವಾಗಿರಲಿದೆ. ವ್ಯವಹಾರದಲ್ಲಿ ಎಚ್ಚರಿಕೆವಹಿಸಬೇಕು, ಶನಿಯ ಉದಯವು ಮದುವೆ ಸಂಬಂಧ ಹುಡುಕುತ್ತಿರುವವರೆಗೆ ಅನುಕೂಲಕರವಾಗಿದೆ.
ಪರಿಹಾರ:- ಕಪ್ಪು ವಸ್ತ್ರ ದಾನ ಮಾಡಿ.
ಕನ್ಯಾ ರಾಶಿ
ಶನಿಯ ಸ್ಥಾನ ಕನ್ಯಾ ರಾಶಿಯವರಿಗೆ ಅನುಕೂಲಕರವಾಗಲಿದೆ. ಶನಿಯ ಸ್ಥಾನ ನಿಮಗೆ ಲಾಭ ನೀಡಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಳಿರಬಹುದು
ಪರಿಹಾರ:- ಬಡವರಿಗೆ ಶನಿವಾರ ಅನ್ನದಾನ ಮಾಡಿ.
ತುಲಾ ರಾಶಿ
ಶನಿಯು 5ನೇ ಮನೆಯಲ್ಲಿ ಇರಲಿದೆ. ಶನಿಯ ಈ ಸ್ಥಾನ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಅಧ್ಯಯನ, ಮಕ್ಕಳು ಮತ್ತು ಪ್ರೀತಿ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು, ಆದರೆ ನೀವು ಸತತ ಪ್ರಯತ್ನಗಳನ್ನು ಮಾಡಿದರೆ, ಈ ವಿಷಯಗಳಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು.
ಪರಿಹಾರ:- ಶನಿವಾರ ಶಿವಲಿಂಗಕ್ಕೆ ಅರ್ಚನೆ ಮಾಡಿ.
ವೃಶ್ಚಿಕ ರಾಶಿ
ಶನಿಯು ನಾಲ್ಕನೇ ಮನೆಯಲ್ಲಿ ಉದಯವಾಗಿದೆ. ಶನಿಯ ಈ ಸ್ಥಾನ ಶನಿಯ ಧೈಯಾವನ್ನು ಸೃಷ್ಟಿಸಿದೆ. ಇದು ಒಳ್ಳೆಯ ಪ್ರಭಾವ ಬೀರುವುದಿಲ್ಲ ಆದರೆ ನಿಮ್ಮ ಪ್ರಯತ್ನಕ್ಕೆ ಖಂಡಿತ ಫಲ ಸಿಗಲಿದೆ.
ಪರಿಹಾರ:- ಹನುಮಾನ್ ಚಾಲೀಸವನ್ನು ನಿತ್ಯವೂ ಪಠಿಸಿ.
ಧನು ರಾಶಿ
ಧನು ರಾಶಿಯವರಿಗೆ ಶನಿ ಉತ್ತಮ ಫಲ ನೀಡುತ್ತದೆ. ಶನಿ ಕೃಪೆಯಿಂದ ಈ ಅವಧಿ ನಿಮಗೆ ಒಳ್ಳೆಯದಿದೆ. ನಿಮ್ಮ ಸಮಸ್ಯೆಗಳು ದೂರಾಗುವುದು, ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿ ನಿಮಗೆ ಒಳಿತಾಗಲಿದೆ.
ಪರಿಹಾರ:- ಪ್ರತಿದಿನ ಶನಿ ಸ್ತೋತ್ರವನ್ನು ಪಠಿಸಿ.
ಮಕರ ರಾಶಿ
ಮಕರ ರಾಶಿಯವರಿಗೆ ಶನಿ ಸಾಡೇ ಸತಿ ನಡೆಯುತ್ತಿದೆ. ಇದರಿಂದಾಗಿ ನೀವು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುವುದು. ಕೆಲಸ ಕಾರ್ಯಗಳಲ್ಲಿ, ವ್ಯವಹಾರದಲ್ಲಿ ಕೆಲ ಸಮಸ್ಯೆ ಉಂಟಾಗಬಹುದು, ಶನಿಗೆ ಸಂಬಂಧಿಸಿದ ಪರಿಹಾರ ನಾಡಿ.
ಪರಿಹಾರ:- ಶನಿವಾರದಂದು ಸುಂದರಕಾಂಡ ಪಾರಾಯಣ ಮಾಡಿ.
ಕುಂಭ ರಾಶಿ
ಶನಿಯು ಕುಂಭ ರಾಶಿಯಲ್ಲಿ ಉದಯವಾಗಿದೆ. ಶನಿ ಉದಯದ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ.
ಪರಿಹಾರ:-ಶನಿ ಗಾಯತ್ರಿ ಮಂತ್ರ ಪಠಿಸಿ.
ಮೀನ ರಾಶಿ
ಶನಿಯು ನಿಮ್ಮ ಲಾಭ ಮತ್ತು ಖರ್ಚು ಎರಡೂ ಹೆಚ್ಚಿಸುತ್ತಿದೆ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ದೃಷ್ಟಿಯಿಂದಲೂ ಉತ್ತಮವಲ್ಲ. ಇನ್ನು ಈ ಅವಧಿಯಲ್ಲಿ ಸಾಲ ನೀಡುವುದು, ಸಾಲ ಪಡೆಯುವುದು ಈ ಬಗೆಯ ವ್ಯವಹಾರ ಮಾಡಿದಿದ್ದರೆ ಒಳ್ಳೆಯದು.
ಪರಿಹಾರ:- ನಿತ್ಯವೂ ಹನುಮಾನ್ ಚಾಲೀಸ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
