Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
30 ವರ್ಷದ ಬಳಿಕ ಮೀನ ರಾಶಿಗೆ ಶನಿಯ ಸಂಚಾರ: ಎರಡೂವರೆ ವರ್ಷ ದ್ವಾದಶ ರಾಶಿಗಳ ಮೇಲಿರಲಿದೆ ಈ ಪ್ರಭಾವ
ಶನಿಯು 30 ವರ್ಷದ ಬಳಿಕ ಮೀನ ರಾಶಿಗೆ ಸಂಚರಿಸಲಿದೆ. ಶನಿಯು ಕರ್ಮದ ಫಲ ನೀಡುವ ದೇವರು, ಎರಡೂವರೆ ವರ್ಷಗಳಿಗೊಮ್ಮೆ ರಾಶಿ ಬದಲಾವಣೆ ಮಾಡುವುದು. ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಮಾರ್ಚ್ 29ಕ್ಕೆ ಸಂಚರಿಸಲಿದೆ. ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಬಾವ ಬೀರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ಶನಿ ಸಂಚಾರ ವೃತ್ತಿ ಜೀವನದ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶನಿ ಸಂಚಾರದ ಸಮಯದಲ್ಲಿ ನೀವು ಪ್ರತಿಕೂಲ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸಬೇಕು.
ವೃಷಭ ರಾಶಿ
ಈ ಶನಿ ಸಂಚಾರ ನಿಮ್ಮಲ್ಲಿ ಅನೇಕ ಬದಲಾವಣೆ ತರಲಿದೆ. ಈ ಅವಧಿಯಲ್ಲಿ ನಿಮಗೆ ಹೊಸದನ್ನು ಕಲಿಯಲು ಸಾಧ್ಯವಾಗಲಿದೆ. ನಿಮ್ಮ ಜ್ಞಾನ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಆರ್ಥಿಕ ಜೀವನದ ಕಡೆಗೆ ತುಂಬಾನೇ ಗಮನಹರಿಸಬಕು. ಈ ಅವಧಿಯಲ್ಲಿ ನಿಮಗೆ ಉಳಿತಾಯ ಮಾಡಲು ಕಷ್ಟವಾಗಬಹುದು. ಹಣಕಾಸಿನ ನಿರ್ವಹಣೆ ಬಗ್ಗೆ ಜಾಗ್ರತೆವಹಿಸಿ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ತಮ್ಮ ಸಂಬಂಧದ ಕಡೆಗೆ ಗಮನಹರಿಸಿ. ವೃತ್ತಿ ಹಾಗೂ ಸಂಬಂಧದ ನಡುವೆ ಸಮತೋಲನ ಕಾಪಾಡಲು ಪ್ರಯತ್ನಿಸಿ. ನೀವು ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಸಿಂಹ ರಾಶಿ
ಶನಿ ಸಂಚಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು, ನೀವು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನೀವು ನಿಮ್ಮ ಕನಸಿನ ಕಡೆಗೆ ಗಮನಹರಿಸಲು ಈ ಸಂಚಾರ ನಿಮಗೆ ಅನುಕೂಲಕರವಾಗಿದೆ. ನೀವು ನಿಮ್ಮ ಗುರಿಯತ್ತ ಗಮನಹರಿಸಲು ಸಾಧ್ಯವಾಗಲಿದೆ. ವ್ಯಾಯಾಮ, ಆಹಾರಕ್ರಮದ ಕಡೆಗೆ ಗಮನಹರಿಸಿ.
ಕನ್ಯಾ ರಾಶಿ
ಈ ಶನಿ ಸಂಚಾರ ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿಎ, ನಿಮ್ಮ ಕ್ರಿಯೇಟಿವಿಟಿ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಕನಸು ನನಸಾಗಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಲಿದೆ. ಶನಿ ನಿಮಗೆ ಅಪಾಯ ಯಶಸ್ಸು ದೊರೆಯಲಿದೆ.
ತುಲಾ ರಾಶಿ
ತುಲಾ ರಾಶಿಯವರು ಕುಟುಂಬದ ಕಡೆಗೆ ಗಮನಹರಿಸಬೇಕು. ಆರ್ಥಿಕವಾಗಿ ನಿಮಗೆ ತುಂಬಾ ಚೆನ್ನಾಗಿರಲಿದೆ. ಆಸ್ತಿ ಸಂಬಂಧಿಸಿದ ವಿವಾದ ತಾಳ್ಮೆಯಿಂದ ಬಗೆಹರಿಯಲಿದೆ. ವಿವಾಹಿತರು ನಿಮ್ಮ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ಜಾಗ್ರತೆವಹಿಸಿ.
ವೃಶ್ಚಿಕ ರಾಶಿ
ನೀವು ನಿಮ್ಮ ಕೌಶಲ್ಯದ ಕಡೆಗೆ ಗಮನಹರಿಸಿ, ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ರಾಜಕಾರಣಿಗಳಿಗೆ ತುಂಬಾ ಅನುಕೂಲಕರವಾಗಿದೆ.
ಧನು ರಾಶಿ
ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಹಣದ ಉಳಿತಾಯ ಮಾಡಲು ಪ್ರಯತ್ನಿಸಲು ಸಾಧ್ಯವಾಗುವುದು. ಅನಗ್ಯತ ಖರ್ಚು ನಿಯಂತ್ರಿಸುವುದು ಒಳ್ಳೆಯದು. ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡುವುದು ಒಳ್ಳೆಯದು.
ಮಕರ ರಾಶಿ
ಮಕರ ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆಯಲಿದೆ. ನೀವು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದು, ಆರ್ಥಿಕ ಸಮಸ್ಯೆ ಕಡಿಮೆಯಾಗಲಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಸಂಬಂಧದಲ್ಲಿ ಸುಧಾರಣೆ ಕಂಡು ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಸ್ವಲ್ಪ ಸವಾಲಿನ ಸಮಯ. ನೀವು ಧಾರ್ಮಿಕ ಕ್ಷೇತ್ರದಲ್ಲಿ ಒಲವು ತೋರುತ್ತೀರಿ. ದೇವರ ಕೃಪೆಯಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಕೆಲಸದ ಕಡೆಗೆ ಗಮನಹರಿಸಿ.
ಮೀನ ರಾಶಿ
ಶನಿಯು ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುವುದು, ನೀವು ಕೆಲವ ಸವಾಲುಗಳನ್ನು ಎದುರಿಸಬಹುದು, ತಾಳ್ಮೆಯಿಂದ ವರ್ತಿಸಿ, ಸಂಬಂಧದ ಕಡೆಗೆ ಗಮನಹರಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications