ವರ್ಷಾಂತ್ಯಕ್ಕೆ ಶನಿ ಪವಾಡ: ಈ 5 ರಾಶಿಗಳಿಗೆ ಬಂಪರ್ ಲಾಟರಿ! ಮುಟ್ಟಿದ್ದೆಲ್ಲಾ ಚಿನ್ನ.. ಕಷ್ಟಗಳೆಲ್ಲಾ ಅಂತ್ಯ

ವರ್ಷದ ಅಂತ್ಯಕ್ಕೆ ಶನಿ ಚಮತ್ಕಾರ! ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ.. ಬಂಪರ್ ಲಾಟರಿ ಹೊಡೆಯುವ ಸಾಧ್ಯತೆ. ಹೌದು, 2025ರ ವರ್ಷಾಂತ್ಯದ ವೇಳೆಗೆ ಶನಿ ದೇವನ (Shani Dev) ಕೃಪೆಯಿಂದ ಕೆಲವು ರಾಶಿಗಳ ಜೀವನದಲ್ಲಿ ಅದ್ಭುತ ಬದಲಾವಣೆಗಳು ಕಂಡುಬರಲಿವೆ. ವರ್ಷ ಮುಗಿಯುವ ಮುನ್ನವೇ ಶನಿ ದೇವನ ಪವಾಡ ಆರಂಭವಾಗುತ್ತಿದ್ದು, ಈ 5 ರಾಶಿಯವರು ಆರ್ಥಿಕ ಲಾಭ, ಹೊಸ ಉದ್ಯೋಗ ಮತ್ತು ಪ್ರೇಮ ಜೀವನದಲ್ಲಿ ಯಶಸ್ಸು ಪಡೆಯಲಿದ್ದಾರೆ.

2025ರಲ್ಲಿ ಹಲವು ಗ್ರಹ ಸಂಕ್ರಮಣಗಳು (Planets Transit) 12 ರಾಶಿಗಳಲ್ಲದೆ, ದೇಶ-ವಿದೇಶಗಳ ಮೇಲೂ ಪರಿಣಾಮ ಬೀರಿವೆ. ನಿರ್ದಿಷ್ಟವಾಗಿ, ಮಾರ್ಚ್ 2025ರಲ್ಲಿ ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿದ್ದರಿಂದ (Shani Transit 2025) ಮಹತ್ತರ ಬದಲಾಯವಣೆಯಾಗಿದೆ. ಜ್ಯೋತಿಷಿಗಳ ಪ್ರಕಾರ, ಈ ಬದಲಾವಣೆಯು ಐದು ರಾಶಿಗಳಿಗೆ ವಿಶೇಷ ಸುವರ್ಣಾವಕಾಶಗಳನ್ನು ತಂದುಕೊಡಲಿದೆ. ಇವರು ಅನಿರೀಕ್ಷಿತ ಅದೃಷ್ಟ ಮತ್ತು ಶುಭಫಲಗಳನ್ನು ಕಾಣುವರು. ಜ್ಯೋತಿಷಿಗಳ ಈ ಭವಿಷ್ಯವಾಣಿ ನಿಮ್ಮ ರಾಶಿಯ ಮೇಲೆಯೂ ಪ್ರಭಾವ ಬೀರಲಿದೆಯೇ? ಎಂದು ತಿಳಿಯಲು ಮುಂದೆ ಓದಿ.

Shani Transit

ಶನಿ ಗ್ರಹವು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ನೆಲೆಸಿ, ನಂತರ ಮುಂದಿನ ರಾಶಿಗೆ ಸಂಕ್ರಮಿಸುತ್ತದೆ. ಗ್ರಹಗಳಲ್ಲಿ ಅತ್ಯಂತ ನಿಧಾನಗತಿಯ ಶನಿಯ ಶುಭ-ಅಶುಭ ಪ್ರಭಾವಗಳು ದೀರ್ಘಕಾಲದವರೆಗೆ ಇರುತ್ತವೆ. ಕಠೋರ ಗ್ರಹವೆಂದು ಪರಿಗಣಿಸಲಾಗಿದೆ. ಆದರೂ, ಕರ್ಮದಾತ, ನ್ಯಾಯಾಧೀಶ, ದಂಡಾಧಿಕಾರಿ ಎಂದೂ ಖ್ಯಾತನಾದ ಶನಿದೇವನು, 2025ರ ವರ್ಷಾಂತ್ಯದಲ್ಲಿ ಆಯ್ದ ಕೆಲವು ರಾಶಿಗಳ ಮೇಲೆ ತನ್ನ ವಿಶೇಷ ಕೃಪೆಯನ್ನು ತೋರಲಿದ್ದಾನೆ.

ಮೀನ ರಾಶಿಗೆ ಶನಿ ಪ್ರವೇಶ

ನವಗ್ರಹಗಳಿಗೆ ವಿಭಿನ್ನ ರಾಶಿಚಕ್ರಗಳಿವೆ. ಶನಿದೇವನು 2025ರ ಮಾರ್ಚ್ 29 ರಂದು ಮೀನ ರಾಶಿಗೆ (Shani Gochar) ಪ್ರವೇಶಿಸಿ, 2027ರ ಜೂನ್ 3ರವರೆಗೆ ನೆಲೆಸಲಿದ್ದಾನೆ. ಈ ಎರಡೂವರೆ ವರ್ಷಗಳ ಸಂಚಾರದ ನಂತರ, ಕೆಲವು ರಾಶಿಗಳಿಗೆ ಶನಿಯ ಪ್ರಭಾವ ಕೊನೆಗೊಂಡರೆ, ಇನ್ನು ಕೆಲವು ರಾಶಿಗಳಿಗೆ ಆರಂಭವಾಗಲಿದೆ. 2027ರ ವರೆಗೆ ಈ ಐದು ರಾಶಿಗಳಿಗೆ ಚಿಂತೆಯಿಲ್ಲ ಎಂದು ಹೇಳಲಾಗುತ್ತದೆ.

ಶನಿದೇವನ ಕೃಪೆಗೆ ಪಾತ್ರವಾದ 5 ರಾಶಿಗಳು

ಕಟಕ ರಾಶಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಟಕ ರಾಶಿಯವರ (Cancer) ಆರ್ಥಿಕ ಅದೃಷ್ಟದಲ್ಲಿ ಅನಿರೀಕ್ಷಿತ ಹೆಚ್ಚಳವಾಗಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇವರಿಗೆ ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ.

ತುಲಾ ರಾಶಿ

ತುಲಾ ರಾಶಿಯನ್ನು (Libra) ಶನಿದೇವನ ಅಚ್ಚುಮೆಚ್ಚಿನ ರಾಶಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ಶನಿಯ ಉಚ್ಛ ರಾಶಿ ಕೂಡ ಆಗಿದೆ. ಈ ರಾಶಿಯವರ ಮೇಲೆ ಶನಿದೇವನು ಯಾವಾಗಲೂ ದಯೆಯಿಂದಿರುತ್ತಾನೆ. ಜಾತಕದಲ್ಲಿ ಶನಿಯು ಸರಿಯಾದ ಸ್ಥಾನದಲ್ಲಿದ್ದರೆ, ಅದು ಅವರಿಗೆ ಮಹತ್ತರ ಪ್ರಗತಿಯನ್ನು ತಂದುಕೊಡುತ್ತದೆ.

ಧನುಸ್ಸು ರಾಶಿ

ಧನು ರಾಶಿಯ (Sagittarius) ಅಧಿಪತಿ ಗುರು ಗ್ರಹ. ಇದು ಶನಿ ಮತ್ತು ಗುರುಗಳ ನಡುವೆ ಸ್ನೇಹ ಸಂಬಂಧವಿದೆ. ಹೀಗಾಗಿ, ಶನಿದೇವನು ಧನುಸ್ಸು ರಾಶಿಯವರಿಗೆ ಸದಾ ಆಶೀರ್ವಾದ ನೀಡುತ್ತಾನೆ. ಶನಿ ಸಾಡೇಸಾತಿ ಅವಧಿಯಲ್ಲೂ ಈ ರಾಶಿಯವರಿಗೆ ನಷ್ಟವಾಗುವ ಬದಲು ಲಾಭವೇ ಹೆಚ್ಚಾಗಿ ದೊರಕುತ್ತದೆ.

ಮಕರ ರಾಶಿ

ಮಕರ ರಾಶಿಯು (Capricorn) ಸಹ ಶನಿದೇವನ ಅಚ್ಚುಮೆಚ್ಚಿನ ರಾಶಿ ಎಂದು ಹೇಳಲಾಗುತ್ತದೆ. ಈ ರಾಶಿಯವರಿಗೆ ಶನಿದೇವನು ಯಾವಾಗಲೂ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಶನಿದೇವನ ಆರಾಧನೆಯು ಮಕರ ರಾಶಿಯವರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.

ಕುಂಭ ರಾಶಿ

ಕುಂಭ ರಾಶಿಯನ್ನು (Aquarius) ಸಹ ಶನಿದೇವನ ಅಚ್ಚುಮೆಚ್ಚಿನ ರಾಶಿ ಎಂದು ಗುರುತಿಸಲಾಗುತ್ತದೆ. ಈ ರಾಶಿಯವರು ಸಾಮಾನ್ಯವಾಗಿ ಶ್ರೀಮಂತರು ಮತ್ತು ಸಂತೋಷವಾಗಿರುತ್ತಾರೆ. ಶನಿದೇವನು ಅವರಿಗೆ ಸದಾ ಆಶೀರ್ವಾದ ಮಾಡುತ್ತಾನೆ. ಕುಂಭ ರಾಶಿಯವರಿಗೆ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ ಮತ್ತು ಅವರ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Transit 2025: These 5 Zodiac Signs to Get Wealth & Success Before Year End 2025

Shani Transit 2025: These 5 Zodiac Signs to Get Wealth & Success Before Year End 2025
Story first published: Tuesday, December 23, 2025, 10:30 [IST]
X
Desktop Bottom Promotion