ಮಾರ್ಚ್‌ 29ರಿಂದ ಈ ಮೂರು ರಾಶಿಗಳಿಗೆ ಇರಲಿದೆ ಶನಿ ಸಾಡೇಸಾತಿ ಪ್ರಭಾವ: ಮಕರ ರಾಶಿಯವರಿಗೆ ಒಳ್ಳೆಯ ಸಮಯ ಶುರು

ಈ ವರ್ಷ ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಈ ವರ್ಷ ಶನಿಯು ರಾಶಿ ಬದಲಾವಣೆ ಮಾಡುತ್ತಿದೆ. ಶನಿಯ ಸಂಚಾರಕ್ಕೆ ಜ್ಯೋತಿಷ್ಯದಲ್ಲಿ ತುಂಬಾನೇ ಮಹತ್ವವಿದೆ, ಏಕೆಂದರೆ ಶನಿಯು ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು ಅದರ ಪ್ರಭಾವ ಕೂಡ ಅಷ್ಟೇ ದೀರ್ಘವಾಗಿರುತ್ತದೆ.

ಶನಿಯ ಸಾಡೇಸಾತಿ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ
ಶನಿ ಸಾಡೇಸಾತಿ ಎಂದರೆ ಯಾರೇ ಆಗಲಿ ಭಯ ಬೀಳುತ್ತಾರೆ, ಏಕೆಂದರೆ ಶನಿ ಸಾಡೇಸಾತಿ ಪ್ರಭಾವ ಆ ರೀತಿ ಇರುತ್ತದೆ, ಶನಿ ಸಾಡೇಸಾತಿ ಎಂದರೆ ಏಳೂವರೆ ವರ್ಷ ಶನಿ ನೀಡುವ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶನಿ ಸಾಡೇಸಾತಿ ಶುರುವಾಯ್ತುಯೆಂದರೆ ಆ ವ್ಯಕ್ತಿಗೆ ಕಷ್ಟಕಾ ಲ ಶುರುವಾಯ್ತು ಎಂದರ್ಥ, ಎಂಥ ನಾಸ್ತಿಕನೇ ಆಗಿರಲಿ, ದೈವ ಭಕ್ತನೇ ಆಗಿರಲಿ ಶನಿ ಸಾಡೇಸಾತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Shani Transit 2025

ಶನಿ ಸಾಡೇಸಾತಿ ಪರಿಣಾಮ ಹೇಗಿರಲಿದೆ?
ಶನಿ ಸಾಡೇಸಾತಿ ಪರಿಣಾಮ ತುಂಬಾ ಕಠಿಣವಾಗಿರುತ್ತದೆ. ಶನಿ ಸಾಡೇಸಾತಿ ಇರುವ ವ್ಯಕ್ತಿ ಜೀವನದಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾನೆ, ಅದು ವೃತ್ತಿ ಬದುಕಿನಲ್ಲಿ ಆಗಿರಲಿ, ವೈಯಕ್ತಿಕ ಬದುಕಿನಲ್ಲಿ ಆಗಿರಲಿ ತುಂಬಾನೇ ತೊಂದರೆಗಳನ್ನು ಅನುಭವಿಸುತ್ತಾನೆ. ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳು ಎದುರಿಸಬೇಕಾಗುತ್ತದೆ, ಜೊತೆಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ವೈಯಕ್ತಿಕ ಬದುಕಿನಲ್ಲಿ ಅಪವಾದ, ಮನೆಯಲ್ಲಿ ಕಲಹ, ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಶನಿ ಸಾಡೇಸಾತಿ ಎಂದರೆ ಜನ ಭಯ ಪಡುತ್ತಾರೆ. ಅಲ್ಲದೆ ಶನಿ ಸಾಡೇಸಾತಿ ಅನುಭವಿಸಿದವರು ಆ ದಿನಗಳನ್ನು ನೆನಸಿಕೊಂಡರೆ ಬೆಚ್ಚಿ ಬೀಳುತ್ತಾರೆ.

ಶನಿ ಧೈಯ್ಯ ಕೂಡ ತೊಂದರೆಯನ್ನು ಉಂಟು ಮಾಡುತ್ತದೆ
ಶನಿ ಸಾಡೇಸಾತಿ ಕೆಲ ಕೆಲ ರಾಶಿಗಳಿಗೆ ಕಠಿಣ ಕಷ್ಟ ನೀಡಿದರೆ ಶನಿ ಧೈಯ್ಯದಿಂದಾಗಿ ಕೆಲ ರಾಶಿಯವರು ತೊಂದರೆಯನ್ನು ಅನುಭವಿಸುತ್ತಾರೆ. ಆದರೆ ಶನಿ ಧೈಯ್ಯ ಶನಿ ಸಾಡೇಸಾತಿಯಷ್ಟು ದೀರ್ಘವಾಗಿರಲ್ಲ, ಅಷ್ಟೊಂದು ಕಠಿಣವಾಗಿರುವುದಿಲ್ಲ ಎಂಬುವುದೇ ಸಮಧಾನ.

ಶನಿಯು ಮಾರ್ಚ್‌ 29ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಈ ಸಂಚಾರ ಬಳಿಕ ಕೆಲ ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾದರೆ, ಒಂದು ರಾಶಿಗೆ ಈ ವರ್ಷ ಶನಿ ಶನಿ ಸಾಡೇಸಾತಿ ಶುರುವಾಗಲಿದೆ, ಇದರ ಬಗ್ಗೆ ವಿವರವಾಗಿ ನೋಡೋಣ:

ಯಾವ ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾಗಲಿದೆ?

ಮಕರ ರಾಶಿಯವರು ಶನಿ ಸಾಡೇಸಾತಿಯಿಂದ ನಿರಾಳವಾಗುತ್ತೀರಿ
ಶನಿ ಸಾಡೇಸಾತಿ ಮಕರ ರಾಶಿಯಲ್ಲಿ ಮುಕ್ತಾಯವಾಗಲಿದೆ, ಹೀಗಾಗಿ ಮಕರ ರಾಶಿಯವರು ನಿರಾಳವಾಗಬಹುದು. ಈ ಏಳೂವರೆ ವರ್ಷ ಅನುಭವಿಸಿದ ಕಷ್ಟಗಳು ದೂರಾಗಿ ಬದುಕಿನಲ್ಲಿ ಎಲ್ಲವೂ ಒಳಿತಾಗಲಿದೆ. ವೃತ್ತಿ ಬದುಕು, ವೈಯಕ್ತಿಕ ಬದುಕಿನಲ್ಲಿ ನೀವು ತುಂಬಾನೇ ಪ್ರಯೋಜನ ಪಡೆಯುತ್ತೀರಿ. ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.

ಯಾವೆಲ್ಲಾ ರಾಶಿಗಳಿಗೆ ಶನಿ ಸಾಡೇಸಾತಿ ಇರಲಿದೆ?
ಕುಂಭ ರಾಶಿ, ಮೀನ ರಾಶಿಯಲ್ಲಿ ಹೀಗಾಗಲೇ ಶನಿ ಸಾಡೇಸಾತಿ ನಡೆಯುತ್ತಿದೆ, ಈ ಸಂಚಾರದ ಬಳಿಕ ಮೇಷ ರಾಶಿಯಲ್ಲಿ ಶನಿ ಸಾಡೇಸಾತಿ ಈ ಸಂಚಾರದ ಬಳಿಕ ಶುರುವಾಗಲಿದೆ.

ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಮೂರನೇ ಹಂತ ಶುರುವಾಗುವುದು
ಶನಿ ಸಾಡೇಸಾತಿಯ ಕೊನೆಯ ಅಂತ ಅಷ್ಟೊಂದು ಕಷ್ಟಕರವಾಗಿರುವುದಿಲ್ಲ, ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು, ಹಾಗಾಗಿ ಕುಂಭ ರಾಶಿಯವರಿಗೆ ಈ ಸಂಚಾರದ ಬಳಿಕ ಅಷ್ಟೇನು ಸಮಸ್ಯೆಯಾಗಲ್ಲ, ಆದರೂ ಜಾಗ್ರತೆವಹಿಸಬೇಕು. ಶನಿ ಸಾಡೇಸಾತಿ ಸಮಯ ತುಂಬಾ ಕಷ್ಟವಾಗಿತ್ತು, ಈ ಅವಧಿಯಲ್ಲಿ ಏನಾದರೂ ನ್ಯಾಯಾಲಯ ಪ್ರಕರಣ ಉಂಟಾಗಿದ್ದರೆ ಶನಿಯು 3ನೇ ಹಂತಕ್ಕೆ ಬಂದ ಆ ಸಮಸ್ಯೆಯಿಂದ ಮುಕ್ತರಾಗಬಹುದು.

ಮೀನ ರಾಶಿ
ಮೀನ ರಾಶಿಯಲ್ಲಿ ಶನಿ ಸಾಡೇಸಾತಿಯ ಎರಡನೇ ಹಂತ ಶುರುವಾಗುವುದು, ಈ ಸಮಯ ಕಠಿಣವಾಗಿರುತ್ತದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹಲವು ಕಷ್ಟಗಳನ್ನು ಅನುಭವಿಸಬಹುದು, ನೀವು ತುಂಬಾನೇ ಜಾಗ್ರತೆವಹಿಸಬೇಕಾಗುತ್ತದೆ. ಶನಿಗೆ ಸಂಬಂಧಿಸಿದ ಪರಿಹಾರವನ್ನು ಮಾಡಿದರೆ ಒಳ್ಳೆಯದು.

ಮೇಷ ರಾಶಿ
ಮೇಷ ರಾಶಿಯಲ್ಲಿ ಶನಿ ಸಾಡೇಸಾತಿಯ ಮೊದಲನೇ ಹಂತ ಶುರುವಾಗುವುದು, ಈ ಹಂತದಲ್ಲಿ ವೃತ್ತಿ ಬದುಕಿನ ಮೇಲೆ ತುಂಬಾನೇ ಗಮನಹರಿಸಬೇಕಾಗುತ್ತದೆ, ವೃತ್ತಿ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

2025ರಿಂದ ಈ ರಾಶಿಗಳಲ್ಲಿ ಶನಿ ಧೈಯ್ಯ ಇರಲಿದೆ:
ಶನಿ ಧೈಯ್ಯ ಕೂಡ ಹಲವು ಕಷ್ಟಗಳನ್ನು ನೀಡುತ್ತದೆ. ಆದರೆ ಶನಿ ಧೈಯ್ಯ ಶನಸಾಡೇಸಾತಿಯಷ್ಟು ತೊಂದರೆ ನೀಡಲ್ಲ, ಈ ಸಂಚಾರದ ಬಳಿಕ ಎರಡೂವರೆ ವರ್ಷ ಈ ರಾಶಿಗಳಿಗೆ ಶನಿ ಧೈಯ್ಯವಿದೆ:

ವೃಶ್ಚಿಕ ರಾಶಿ
ಶನಿ ಧೈಯ್ಯದ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ, ಕುಟುಂಬ ಬದುಕಿನಲ್ಲಿ ಹಲವು ತೊಂದರೆಗಳನ್ನು ಎದುರಿಸಬಹುದು, ವೃತ್ತಿ ಜೀವನದಲ್ಲಿ ಅಭದ್ರತೆ ಉಂಟಾಗುವುದು. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಕಠಿಣ ಸವಾಲುಗಳು ಎದುರಾಗಬಹುದು, ಏನೂ ನೀವು ಅಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಹತಾಶೆ ಕೂಡ ಉಂಟಾಗಬಹುದು. ಇನ್ನು ಆರೋಗ್ಯ ಸಂಬಂಧಿತ ಸಮಸ್ಯೆ ಕೂಡ ಕಾಡುವುದು.

ಸಿಂಹ ರಾಶಿ
ಸಿಂಹ ರಾಶಿಯವರ ಮೇಲೂ ಶನಿ ಧೈಯ್ಯ ಇರಲಿದೆ, ಶನಿಯ ಋಣಾತ್ಮಕ ಪ್ರಭಾವಕ್ಕೆ ಒಳಗಾಗುತ್ತಾರೆ, ಕೆಲಸದಲ್ಲಿ ವಿಳಂಬವಾಗುವುದು, ಏನಾದರು ಕೆಲಸ ಪ್ರಾರಂಭಿಸಿದರೆ ಅದರಲ್ಲಿ ಅಡೆತಡೆ ಉಂಟಾಗುವುದು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ ಆರೋಗ್ಯ ಸಂಬಂಧಿತ ಸಮಸ್ಯೆ ಕೂಡ ಕಾಡಬಹುದು.

ಧನು ರಾಶಿ
ಧನು ರಾಶಿಯವರು ಕೂಡ ಶನಿ ಧೈಯ್ಯಯಿಂದಾಗಿ ಕೆಲ ಸಮಸ್ಯೆಯನ್ನು ಎದುರಿಸಬಹುದು. ಈ ಅವಧಿಯಲ್ಲಿ ವೃತ್ತಿ ಬದುಕು, ವ್ಯಾಪಾರದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಕೆಲ ಆರ್ಥಿಕ ಸಮಸ್ಯೆ ಎದುರಿಸಬಹುದು.

ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಏನು ಮಾಡಿದರೆ ಒಳ್ಳೆಯದು

  • ಶನಿ ಸಾಡೇಸಾತಿ, ಸನಿ ಧೈಯ್ಯ ಇರುವವರು ಶನಿ ದೋಷ ನಿವಾರಣೆ ಮಾಡಿದರೆ ಅದರ ಕೆಟ್ಟ ಪ್ರಭಾವ ಕಡಿಮೆಯಾಗುವುದು
  • ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ, ಎಳ್ಳೆಣ್ಣೆ ಅರ್ಪಿಸಿ
  • ಶನಿವಾರ ಕಪ್ಪು ವಸ್ತ್ರಗಳನ್ನು ದಾನ ಮಾಡಿ
  • ಶನಿವಾರ ಕಪ್ಪು ಎಳ್ಳು ದಾನ ಮಾಡಿ
  • ನಿರ್ಗತಿಕರಿಗೆ ಆಹಾರವನ್ನು ನೀಡಿ.
  • ಒಳ್ಳೆಯ ಕಾರ್ಯವನ್ನು ಮಾಡಿ, ನಿಮ್ಮ ಕರ್ಮಕ್ಕೆ ತಕ್ಕ ಫಲ ಶನಿಯು ನೀಡಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Transit 2025: Shani Sadesati To These 3 Zodiac Signs, Which Zodiac Affects More

Shani Transit 2025: These 3 zodiac face negative effects from shani, read on..
X
Desktop Bottom Promotion