Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ 3 ರಾಶಿಗಳಿಗೆ ಶನಿ ಕೃಪೆಯಿಂದಾಗಿ ಇನ್ನು ಎರಡೂವರೆ ವರ್ಷ ವೃತ್ತಿ ಬದುಕು, ಆರ್ಥಿಕ ಸ್ಥಿತಿ ಸೂಪರ್ ಆಗಿರುತ್ತೆ
ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತಾನೆ, ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದ್ದಾನೆ,2025ರ ಮಾರ್ಚ್ ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಸಂಚರಿಸಲಿದೆ. ಶನಿಯು ಮೀನ ರಾಶಿಗೆ ಪ್ರವೇಶ ಮಾಡಿದಾಗ ಅದು ಬೀರುವ ಪ್ರಭಾವ ಕೂಡ ಭಿನ್ನವಾಗಿರುತ್ತದೆ. ಕೆಲ ರಾಶಿಗಳಿಗೆ ಹೊಸದಾಗಿ ಶನಿ ಸಾಡೇಸಾತಿ, ಶನಿ ಧೈಯ್ಯ ಶುರುವಾಗುವುದು, ಇನ್ನು ಕೆಲವು ರಾಶಿಗಳಿಗೆ ಅದೃಷ್ಟದ ಸುರುಮಳೆ ಸುರಿಸುವುದು, ಇವೆಲ್ಲವೂ ಶನಿಯ ಸ್ಥಾನ ಅನುಸಾರ ಪ್ರಭಾವ ಬೀರಲಿದೆ.

ಶನಿಯು ಮಾರ್ಚ್‌ನಲ್ಲಿ ರಾಶಿ ಬದಲಾವಣೆ ಮಾಡಿದಾಗ ಕೆಲವೊಂದು ರಾಶಿಗಳಿಗೆ ಅದೃಷ್ಟದ ಸಮಯ, ಈ ಅದೃಷ್ಟದ ಬೆಂಬಲ ಶನಿಯು ಮೀನ ರಾಶಿಯಲ್ಲಿ ಇರುವಷ್ಟು ಸಮಯ ಇರುವುದಿರಿಂದ ಬದುಕಿನಲ್ಲಿ ತುಂಬಾನೇ ಪ್ರಗತಿ ಹೊಂದುತ್ತಾರೆ.
ಶನಿಯು ಮಾರ್ಚ್ 29, 2025ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತದೆ, ಅಲ್ಲಿಂದ 2027,ಜೂನ್ 5ರವರೆಗೆ ಮೀನ ರಾಶಿಯಲ್ಲಿಯೇ ಇರಲಿದೆ. ಈ ಎರಡೂವರೆ ವರ್ಷದ ಅವಧಿ ಈ ರಾಶಿಗಳಿಗೆ ಶನಿದೇವನ ಕೃಪೆಯಿಂದಾಗಿ ಅದ್ಭುತವಾಗಿರಲಿದೆ.
ವೃಷಭ ರಾಶಿ
ಶನಿಯು ಮೀನ ರಾಶಿಗೆ ಸಂಚರಿಸಿದಾಗ ವೃಷಭ ರಾಶಿಯವರು ತುಂಬಾನೇ ಅದ್ಭುತ ಪ್ರಯೋಜನ ಪಡೆಯುತ್ತಾರೆ. ವೃತ್ತಿ ಬದುಕಿನಲ್ಲಿ ನೀವು ಬಯಸಿದ ಗುರಿ ಮುಟ್ಟಲು ಸಾಧ್ಯವಾಗಲಿದೆ, ಈಗ ಇರುವಂಥ ಸವಾಲುಗಳೆಲ್ಲವೂ ದೂರಾಗಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ, ಆರ್ಥಿಕವಾಗಿ ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು. ಇನ್ನು ಗೃಹ ನಿರ್ಮಾಣ, ವ್ಯಾಪಾರ ಹೀಗೆ ಯಾವುದೇ ಕೆಲಸ ಅಪೂರ್ಣವಾಗಿದ್ದರೆ ಅದೆಲ್ಲವೂ ಪೂರ್ಣವಾಗಲಿದೆ. ಶನಿಯ ದೃಷ್ಟಿ ನಿಮ್ಮ ಮೇಲೆ ಅನುಕೂಲಕರವಾಗಿರುವುದರಿಂದ ಪ್ರತಿ ಹೆಜ್ಜೆಯಲ್ಲಿಯೂ ಅದೃಷ್ಟದ ಬೆಂಬಲ ಇರಲಿದೆ, ಅದರ ಜೊತೆಗೆ ನಿಮ್ಮ ಶ್ರಮವೂ ಸೇರಿದಾಗ ಉತ್ತಮ ಫಲಿತಾಂಶ ಪಡೆಯುತ್ತೀರಿ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ.
ತುಲಾ ರಾಶಿ
ತುಲಾ ರಾಶಿಯವರಿಗೆ ಶನಿಯ ರಾಶಿ ಬದಲಾವಣೆ ಅದ್ಭುತ ಪ್ರಯೋಜನಗಳನ್ನು ತರಲಿದೆ, ಶನಿಯು ಮೀನ ರಾಶಿಗೆ ಸಂಚಾರ ಮಾಡಿದಾಗ ತುಲಾ ರಾಶಿಯ 6ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ನಿಮ್ಮ ಬದುಕಿನಲ್ಲಿದ್ದ ಸಮಸ್ಯೆ ದೂರ ಮಾಡಲು ಸಹಾಯ ಮಾಡುತ್ತದೆ, ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ನೀವು ಏನಾದರು ಕೆಲಸ ಬದಲಾಯಿಸಬೇಕೆಂದು ಯೋಚಿಸಿದ್ದರೆ ನಿಮಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶ ಸಿಗಲಿದೆ, ವೃತ್ತಿ ಬದುಕಿನಲ್ಲಿ ಬಡ್ತಿ ಸಿಗಲಿದೆ. ಏನಾದರ ಅನಾರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ಸ್ಥಿತಿಯಲ್ಲಿಯೂ ಸುಧಾರಣೆ ಕಂಡು ಬರುವುದು.
ಮಕರ ರಾಶಿ
ಮಕರ ರಾಶಿಯ ಮೂರನೇ ಮನೆಗೆ ಶನಿಯು ಬರಲಿದ್ದಾನೆ, ಈ ಸಮಯ ಕೂಡ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ನಿಮಗೆ ಅದೃಷ್ಟದ ಬೆಂಬಲ ಇರುವುದರಿಂದ ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣುತ್ತೀರಿ. ಬರಬೇಕಾಗಿರುವ ಹಣ ಕೈ ಸೇರಲಿದೆ. ಆರ್ಥಿಕ ಸಂಕಷ್ಟಗಳು ದೂರಾಗಲಿದೆ. ನೀವು ಆರ್ಥಿಕವಾಗಿ ಬೆಳವಣಿಗೆ ಕಾಣುತ್ತೀರಿ, ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಕುಟುಂಬ ಜೀವನ ಕೂಡ ಶನಿಕೃಪೆಯಿಂದಾಗಿ ಯಾವುದೇ ತೊಂದರೆಯಿಲ್ಲ.. ಶನಿಯು ನಿಮ್ಮ ಪ್ರತಿ ಹೆಜ್ಜೆಯಲ್ಲಿಯೂ ಬೆಂಬಲ ನೀಡಲಿದ್ದಾನೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
