ಶನಿ ಸಂಕ್ರಮಣ 2025: ಈ 3 ರಾಶಿಯವರಲ್ಲಿ ಹೆಚ್ಚಾಗಲಿದೆ ಸಂಕಷ್ಟ..!!

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಡುಕು ಅಥವಾ ಕರ್ಮವನ್ನು ಸೂಚಿಸುವ ಗ್ರಹ ಎಂದು ಶನಿಯನ್ನು ಕರೆಯಲಾಗುತ್ತೆ. ಶನಿ ಗ್ರಹದ ಚಲನೆಯು ನಿಮಗೆ ಹಲವು ರೀತಿಯ ಲಾಭದ ಜೊತೆಗೆ ಒಂದಿಷ್ಟು ನಷ್ಟಕ್ಕೂ ಇದು ಕಾರಣವಾಗಲಿದೆ. ಶನಿ ಪ್ರತಿ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಚಲಿಸುತ್ತದೆ. ಇದರಿಂದ 12 ರಾಶಿಗಳ ಮೇಲೆಯೂ ಕೂಡ ಪ್ರಭಾವ ಉಂಟಾಗುವುದನ್ನು ನಾವು ನೋಡಬಹುದು.

ನಿಧಾನಗತಿಯಲ್ಲಿ ಶನಿ ಚಲಿಸುವುದರಿಂದ 12 ಚಿಹ್ನೆಗಳ ಮೇಲೆ ಅದರ ಪ್ರಭಾವ ಇದ್ದೇ ಇರುತ್ತದೆ. ಒಂದು ಪೂರ್ಣ ಚಕ್ರವನ್ನು ಸುತ್ತುಬರಲು ಶನಿಯು 30 ವರ್ಷ ತೆಗೆದುಕೊಳ್ಳುತ್ತದೆ. ಶನಿ ಎಲ್ಲಾ ರಾಶಿಯಲ್ಲು ಚಲಿಸುವುದು ಹಲವು ರೀತಿಯ ಸಂಕ್ರಮಣಕ್ಕೆ ಕಾರಣವಾಗುತ್ತದೆ. ಅದರಲ್ಲೂ 2025ರಲ್ಲಿ ಶನಿ ಸಂಕ್ರಮಣ ಉಂಟಾಗುತ್ತಿರುವುದು ಹಲವು ರಾಶಿಯರಿಗೆ ಪ್ರಭಾವ ಬೀರಲಿದೆ.

Shani Transit 2025 3 Zodiac Signs To Expect Big Challenges

ಶನಿ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಸಂಕ್ರಮಣ ಆಗುತ್ತಿರುವುದು ಹಲವು ರೀತಿಯ ಲಾಭಕ್ಕೆ ಕಾರಣವಾದರೆ ಕೆಲವೊಂದು ರಾಶಿಯವರಲ್ಲಿ ಹಲವು ರೀತಿ ಸಂಕಷ್ಟಕ್ಕೆ ಕಾರಣವಾಲಿದೆ. ಹಾಗಾದ್ರೆ ಈ ಶನಿ ಸಂಕ್ರಮಣದಿಂದಾಗಿ ಯಾವ ರಾಶಿಯವರಲ್ಲಿ ದೊಡ್ಡ ಪರಿಣಾಮ ಉಂಟಾಗುತ್ತಿದೆ. ಅದರಲ್ಲೂ ಋಣಾತ್ಮಕ ಬದಲಾವಣೆ ಯಾಔ ರಾಶಿಯಲ್ಲಿ ನೋಡಬಹುದು ಎಂಬುದನ್ನು ನಾವು ತಿಳಿದುಕೊಳ್ಳೋಣ.

ಸಿಂಹ ರಾಶಿ

ಶನಿ ಗ್ರಹವು ಭಾದ್ರಪದ ನಕ್ಷತ್ರದಲ್ಲಿ ಸಂಕ್ರಮಣ ಆಗುವ ಕಾರಣದಿಂದಾಗಿ ಸಿಂಹ ರಾಶಿಯವರಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಶನಿ ಸಿಂಹ ರಾಶಿಯ 7ನೇ ಮನೆಯಲ್ಲಿ ಚಲಿಸುವುದರಿಂದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಹಾಗೆ ನಿಮ್ಮ ಮನೆಯಲ್ಲಿ ನಡೆಯಬೇಕಿ ಕಾರ್ಯಗಳು, ಶುಭ ಕೆಲಸಗಳು, ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು. ನಿಮ್ಮ ಮಾನಸಿಕ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ದೂರ ಪ್ರಯಾಣಗಳು, ಹೂಡಿಕೆಯಲ್ಲಿ ನಷ್ಟ, ಸಾಲಗಾರರ ಕಾಟದಂತಹ ಸಮಸ್ಯೆಗೆ ಒಳಗಾಗಬಹುದು. ಶನಿಯ ಸಂಚಾರದಿಂದ ನಿಮ್ಮ ವ್ಯಾಪಾರಕ್ಕೆ ಅಡೆತಡೆಯಾಗಬಹುದು. ಕೌಟುಂಬಿಕವಾಗಿ ಅಶಾಂತಿ ಮೂಡಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಶನಿ ಸಂಕ್ರಮಣವು ಹಲವು ಬಗೆಯಲ್ಲಿ ಸಮಸ್ಯೆಗಳ ತರಲಿದೆ, ನಿಮ್ಮ ಆರೋಗ್ಯದ ವಿಚಾರದಲ್ಲಿ ಏರುಪೇರು ಕಾಣಬಹುದು. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಕಾಲವಾಗಿರುವುದಿಲ್ಲ. ಒಪ್ಪಂದ ಆಧಾರಿತ ಕೆಲಸಗಳಲ್ಲಿ ತೊಡಗಿರುವವರು ಹೊಸ ಕೆಲಸ ಹುಡುಕಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಹಚ್ಚಾಗಬಹುದು. ಪಾಲುದಾರಿಗೆ ವ್ಯಾಪಾರಸ್ಥರಲ್ಲಿ ನಷ್ಟ, ಅಶಾಂತಿ ಮೂಡಬಹುದು. ಎಲ್ಲ ಆದಾಯದ ಮೂಲಗಳು ನಿಮ್ಮಿಂದ ದೂರಾಗಬಹುದು. ಶನಿ ಕರ್ಕ ರಾಶಿಯಲ್ಲಿ 8ನೇ ಮನೆಯಲ್ಲಿ ಚಲಿಸುವುದರಿಂದ ಕಗ್ಗಟ್ಟು ಹೆಚ್ಚಾಗಲಿದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಅಶಾಂತಿ ಒತ್ತಡ ಹೆಚ್ಚಾಗಲಿದೆ. ಅನೇಕ ಕೆಲಸದಲ್ಲಿ ನಿಮ್ಮ ಪರಿಚಯಸ್ಥರಿಗೆ ಅಡ್ಡಿ ಉಂಟಾಗಬಹುದು. ಈ ಸಮಯದಲ್ಲಿ ಸಾಲ ಹೆಚ್ಚಾಗಲು ಕೂಡ ಅವರು ಕಾರಣರಾಗಬಹುದು.

ಮಕರ ರಾಶಿ

2025ರಲ್ಲಿ ಶನಿಯ ಸಂಕ್ರಮಣವು ಮಕರ ರಾಶಿಯವರಿಗೆ ಅನೇಕ ಲಾಭಗಳಿಗೆ ಕಾರಣವಾಗಲಿದೆ. ಮಕರ ರಾಶಿಯ 6ನೇ ಹಾಗೂ 7ನೇ ಮನೆಯಲ್ಲಿ ಶನಿ ಗುರು ಚಲನೆಯಿಂದಾಗಿ ಹಲವು ರೀತಿಯ ಅಡೆತಡೆ ನೋಡಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳ ನೋಡಬಹುದು. ನಿಮ್ಮ ಹೊಸ ವೃತ್ತಿಯಲ್ಲಿ ಸವಾಲುಗಳು ಎದುರಾಗುತ್ತವೆ. ಅನಿರೀಕ್ಷಿತ ಹಣಕಾಸು ನಷ್ಟ ಉಂಟಾಗಬಹುದು. ಹಾಗೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವೈಯಕ್ತಿಕ ಸಂಬಂಧಗಳು, ಸಾಂಪತ್ಯದಲ್ಲಿ ತಪ್ಪುಗ್ರಹಿಕೆಗಳು ಉಂಟಾಗಬಹುದು. ಕಬ್ಬಿಣ ನಂಬಿ ಉದ್ಯಮ ನಡೆಸುವವರು ಎಚ್ಚರಿಕೆ ಅಗತ್ಯವಾಗಿರಲಿ. ಅವಿವಾಹಿತರಿಗೆ ಈ ಸಮಯದಲ್ಲಿ ಅಶುಭ ಸುದ್ದಿ ಕೇಳಬಹುದು. ನಿಮ್ಮದಲ್ಲದ ಸಮಸ್ಯೆಗಳಿಗೆ ನೀವು ಹೆಚ್ಚು ಗಮನ ನೀಡಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shani Transit 2025: 3 Zodiac Signs To Expect Big Challenges

Due to Saturn's transit in the eastern Bhadrapad star, some zodiac signs will face significant challenges, despite the many benefits it brings.
Story first published: Friday, January 3, 2025, 18:20 [IST]
X
Desktop Bottom Promotion